Friday, May 3, 2024
Homeಕ್ರೀಡಾ ಸುದ್ದಿ"ಶ್ರೀಲಂಕಾ ಸೋಲಿಗೆ ಅಮಿತ್ ಷಾ ಮಗ ಜೈ ಶಾ ಕಾರಣ"

“ಶ್ರೀಲಂಕಾ ಸೋಲಿಗೆ ಅಮಿತ್ ಷಾ ಮಗ ಜೈ ಶಾ ಕಾರಣ”

ನವದೆಹಲಿ,ನ.13- ಶ್ರೀಲಂಕಾ ಕ್ರಿಕೆಟ್‍ನ ಇಂದಿನ ದುಸ್ಥಿತಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಪುತ್ರ ಹಾಗೂ ಬಿಸಿಸಿಐನ ಕಾರ್ಯದರ್ಶಿ ಜೈಶಾ ಕಾರಣ ಎಂದು ಮಾಜಿ ನಾಯಕ ಅರ್ಜುನ ರಣತುಂಗ ಗಂಭೀರ ಆರೋಪ ಮಾಡಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಜೈಶಾ ಸಂಪರ್ಕ ಇಟ್ಟುಕೊಂಡಿದ್ದಾರೆ. ಇದನ್ನು ನಾನು ಸುಖಾಸುಮ್ಮನೆ ಹೇಳುತ್ತಿಲ್ಲ. ಇಂದಿನ ಶ್ರೀಲಂಕಾದ ಕ್ರಿಕೆಟ್ ದುಸ್ಥಿತಿಗೆ ಜೈಶಾ ನೇರ ಹೊಣೆ ಎಂದು ಆರೋಪಿಸಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಮುನ್ನಡೆಸುತ್ತಿರುವುದು ಜೈಶಾ. ಅವರು ಹೇಳಿದಂತೆ ಎಲ್ಲವೂ ನಡೆಯುತ್ತಿದೆ. ಹೀಗಾಗಿಯೇ ನಮ್ಮ ತಂಡ ವಿಶ್ವಕಪ್ ಕ್ರಿಕೆಟ್‍ನಲ್ಲಿ ಸೆಮಿಫೈನಲ್‍ನನ್ನೂ ಪ್ರವೇಶ ಮಾಡದೆ ಲೀಗ್ ಹಂತದಲ್ಲೇ ಹೊರ ಬೀಳಲು ಇದೇ ಪ್ರಮುಖ ಕಾರಣ ಎಂದು ಶ್ರೀಲಂಕಾ ತಂಡದ ಮಾಜಿ ನಾಯಕರಾಗಿರುವ ಅರ್ಜುನ ರಣತುಂಗ ದೂರಿದ್ದಾರೆ.

ದೀಪಾವಳಿ ಪೂಜೆ ವೇಳೆ ಮೀನುಗಾರರ ದೋಣಿಗಳು ಬೆಂಕಿಗಾಹುತಿ

ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‍ಎಲ್‍ಸಿ) ಅಧಿಕಾರಿಗಳು ಮತ್ತು ಜಯ್ ಶಾ ನಡುವಿನ ಸಂಪರ್ಕದಿಂದಾಗಿ ಬಿಸಿಸಿಐಗೆ ಎಸ್‍ಎಲ್‍ಸಿಯನ್ನು ನಿಯಂತ್ರಿಸಬಹುದು ಎಂಬ ಅಭಿಪ್ರಾಯ ಮೂಡಿವಂತೆ ಮಾಡಿದೆ ಎಂದಿದ್ದಾರೆ. ಜಯ್ ಶಾ ಅವರ ಒತ್ತಡ ಶ್ರೀಲಂಕಾ ಕ್ರಿಕೆಟನ್ನು ಹಾಳುಮಾಡುತ್ತಿದೆ ಎಂದಿರುವ ಅವರು, ಭಾರತದ ಗೃಹ ಸಚಿವರಾಗಿರುವ ಅಮಿತ್ ಶಾ ಅವರು ಜಯ್ ಶಾ ತಂದೆಯಾಗಿರುವ ಕಾರಣ ಇಷ್ಟು ಪ್ರಾಬಲ್ಯ ಸಾಧಿಸಲು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಯ್ ಶಾ ಅವರೇ ಶ್ರೀಲಂಕಾ ಕ್ರಿಕೆಟನ್ನು ಮುನ್ನಡೆಸುತ್ತಿದ್ದಾರೆ. ಜಯ್ ಶಾ ಒತ್ತಡದ ಕಾರಣದಿಂದಾಗಿಯೇ ಶ್ರೀಲಂಕಾ ಕ್ರಿಕೆಟ್ ಹಳ್ಳ ಹಿಡಿದಿದೆ. ಭಾರತದ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಎನ್ನುವ ಒಂದೇ ಕಾರಣಕ್ಕೆ ಜಯ್ ಶಾ ಇಷ್ಟು ಬಲಶಾಲಿಯಾಗಿದ್ದಾರೆ ಎಂದಿದ್ದಾರೆ. ಲಂಕಾ ಮಂಡಳಿಯನ್ನು ಅಮಾನತು ಮಾಡಿದ ಐಸಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರ ತನ್ನ ಹಸ್ತಕ್ಷೇಪ ಮಾಡುತ್ತಿದೆ ಎಂಬ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಇತ್ತೀಚೆಗೆ ಮಂಡಳಿಯನ್ನೇ ಅಮನತುಗೊಳಿಸಿದೆ. ಇದು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ ಶ್ರೀಲಂಕಾ ಕ್ರಿಕೆಟ್‍ಗೆ ಮತ್ತೊಂದು ದೊಡ್ಡ ಆಘಾತ ನೀಡಿದಂತಾಗಿದೆ.

ಈ ವಿಶ್ವಕಪ್‍ನಲ್ಲಿ ಶ್ರೀಲಂಕಾ ಆಡಿದ 9 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಗೆಲುವು ಸಾಸಿದೆ. ಅಫ್ಘಾನಿಸ್ತಾನ ಹಾಗೂ ನೆದರ್ಲೆಂಡ್ಸ್ ವಿರುದ್ಧ ಮಾತ್ರವೇ ಲಂಕಾ ಗೆಲುವು ಸಾಸಿತ್ತು. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ 9ನೇ ಸ್ಥಾನಿಯಾಗಿ ವಿಶ್ವಕಪ್ ಟೂರ್ನಿಯನ್ನು ಅಂತ್ಯಗೊಳಿಸಿದೆ. ಕೇವಲ ನೆದರ್ಲೆಂಡ್ಸ್ ತಂಡ ಮಾತ್ರವೇ ಲಂಕಾ ತಂಡಕ್ಕಿಳತ ಕೆಳಗಿದೆ. ಈ ಕಾರಣದಿಂದಾಗಿ ಶ್ರೀಲಂಕಾ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುವ ಅರ್ಹತೆ ಕಳೆದುಕೊಂಡಂತಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಅಗ್ರ 8ರ ಒಳಗೆ ಸ್ಥಾನ ಪಡೆಯುವುದು ಅಗತ್ಯವಾಗಿತ್ತು.

RELATED ARTICLES

Latest News