ಕುಖ್ಯಾತ ವಾಹನ ಕಳ್ಳರ ಬಂಧನ, 24 ದ್ವಿಚಕ್ರ ವಾಹನಗಳ ವಶ

ಬೆಂಗಳೂರು, ಡಿ.4- ಕೂಲಿಕಾರ್ಮಿಕರ ಶೆಡ್‍ಗಳಲ್ಲಿ ನೆಲಸಿ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಕುಖ್ಯಾತ ವಾಹನ ಕಳ್ಳರನ್ನು ಬಂಧಿಸಿರುವ ಜೆಪಿ ನಗರ ಠಾಣೆ ಪೊಲೀಸರು 16 ಲಕ್ಷ ಮೌಲ್ಯದ 24 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಪ್ಪಳ ಮೂಲದ ರಘು ನಾಯ್ಕ್ ಅಲಿಯಾಸ್ ರಘು ಅಲಿಯಾಸ್ 220 ಮತ್ತು ದೌಲತ್‍ಖಾನ್ ಬಂಧಿತ ಆರೋಪಿಗಳು. ಕೊಪ್ಪಳದಿಂದ ನಗರಕ್ಕೆ ಬಂದ ನಂತರ ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಬೆಳ್ಳಂದೂರು ಬಳಿಯ ಕೂಲಿ ಕಾರ್ಮಿಕರು ವಾಸಿಸುವ ಶೆಡ್‍ನಲ್ಲಿ […]

ಮೋಜಿನ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದವನ ಬಂಧನ

ಬೆಂಗಳೂರು, ನ.22- ಶೋಕಿ, ಮೋಜು- ಮಸ್ತಿ ಜೀವನಕ್ಕಾಗಿ ಕಳ್ಳತನದ ಹಾದಿ ಹಿಡಿದಿದ್ದ ನಟೋರಿಯಸ್ ವಾಹನ ಕಳ್ಳನೊಬ್ಬನನ್ನು ಕೆಆರ್ ಪುರ ಠಾಣೆ ಪೊಲೀಸರು ಬಂಧಿಸಿ 12 ಲಕ್ಷ ರೂ. ಬೆಲೆಬಾಳುವ 8 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಕೋಲಾರದ ಕೆಜಿಎಫ್‍ನ ಭಾರತಿಪುರಂ ನಿವಾಸಿ ಸೈಯ್ಯದ್ ಸಲ್ಮಾನ್(25) ಬಂಧಿತ ಆರೋಪಿ. ಈತನಿಂದ 7 ಬೈಕ್‍ಗಳು ಮತ್ತು ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ವಾಹನಗಳ ಹ್ಯಾಂಡ್ ಲಾಕ್‍ಗಳನ್ನು ಮುರಿದು, ಇಗ್ನೀಷಿಯನ್ ವೈರನ್ನು ಕತ್ತರಿಸಿ ವಾಹನಗಳನ್ನು ಡೈರೆಕ್ಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದನು. ಆರೋಪಿಯು ಸುಲಭವಾಗಿ […]

ಮನೆ ಬೀಗ ಮುರಿದು ಕಳ್ಳತನ, ಹಳೆ ಕಳ್ಳನ ಬಂಧನ

ಬೆಂಗಳೂರು, ಅ.29- ಹಗಲು ವೇಳೆಯಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಹಳೇ ಕಳ್ಳನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ಮೂಲದ ಶಿವರಾಜ ಅಲಿಯಾಸ್ ಶಿವ ಅಲಿಯಾಸ್ ಕಪ್ಪೆ ಶಿವ (30) ಬಂತ ಆರೋಪಿ. ಈತ ಮಾಗಡಿ ರಸ್ತೆಯ ತುಂಗಾ ನಗರದ ಸಿಂಡಿಕೇಟ್ ಕಾಲೋನಿಯ 4ನೇ ಕ್ರಾಸ್‍ನಲ್ಲಿ ವಾಸವಾಗಿದ್ದನು. ಮನೆಗಳ್ಳತನ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ಹಳೇ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಆತ ನೀಡಿದ ಮಾಹಿತಿಯ ಮೇರೆಗೆ […]

ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನ ಬಂಧನ

ಬೆಂಗಳೂರು,ಆ.20-ಪ್ರತಿಷ್ಠಿತ ಬಡಾವಣೆಯ ಮನೆಗಳ ನಕಲಿ ಕೀ ಬಳಸಿ ಚಿನ್ನಾಭರಣಗಳನ್ನು ದೋಚಿದ್ದ ಕುಖ್ಯಾತ ಮನೆಗಳ್ಳನನ್ನು ಎಚ್‍ಎಸ್‍ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿ 37 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಎಚ್‍ಎಸ್‍ಆರ್ ಲೇಔಟ್‍ನ ಶ್ರೀಮಂತರ ಮನೆಗಳನ್ನು ಗುರಿಯಾಗಿಸಿಕೊಂಡು ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಕಲಿ ಕೀ ಬಳಸಿ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವೂ ಸೇರಿದಂತೆ ಒಟ್ಟು ನಾಲ್ಕು ಕನ್ನಗಳವು ಪ್ರಕರಣಗಳು ನಕಲಿ […]

ಸಿಮ್‍ಕಾರ್ಡ್ ಕದ್ದು ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ವಂಚಕ ಅಂದರ್

ಬೆಂಗಳೂರು, ಆ.8- ಸಾರ್ವಜನಿಕರ ಸಿಮ್ ಕದ್ದು ಅವರ ಬ್ಯಾಂಕ್ ಖಾತೆಯಿಂದ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಂಡ್ಯ ಜಿಲ್ಲೆ ದುದ್ದ ಹೋಬಳಿಯ ಗುನ್ನಾನಾಯಕನಹಳ್ಳಿಯ ನಿವಾಸಿ ಪ್ರಕಾಶ್(31) ಬಂಧಿತ ಆರೋಪಿ. ಎಸ್ ಬಿಐ ಬ್ಯಾಂಕ್ ಖಾತೆಯಿಂದ ಮೇ 8ರಿಂದ 14 ರವರೆಗೆ ಅನಕೃತವಾಗಿ 3.4 ಲಕ್ಷ ಹಣ ಡ್ರಾ ಆಗಿರುವ ಬಗ್ಗೆ ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಅವರ ಬ್ಯಾಂಕ್ ಖಾತೆಯಿಂದ […]

ಮೋಜಿನ ಜೀವನಕ್ಕೆ ಬೈಕ್ ಕಳವು ಮಾಡುತ್ತಿದ್ದ ನಟೋರಿಯಸ್ ಆರೋಪಿ ಅರೆಸ್ಟ್

ಬೆಂಗಳೂರು,ಆ.7- ಶೋಕಿ ಹಾಗೂ ಮೋಜು-ಮಸ್ತಿನ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ನಟೋರಿಯಸ್ ಆರೋಪಿಯೊಬ್ಬನನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿ 9 ಲಕ್ಷ ರೂ. ಮೌಲ್ಯದ 19 ಬೈಕ್‍ಗಳನ್ನು ವಶಪಡಿಸಿ ಕೊಂಡಿದ್ದಾರೆ. ಕೆ.ಆರ್.ಪುರದ ದೇವಸಂದ್ರ, ಜೆ.ಸಿ.ಲೇಔಟ್‍ನ 2ನೇ ಕ್ರಾಸ್ ನಿವಾಸಿ ಶೋಯಬ್ ಖಾನ್ ಅಲಿಯಾಸ್ ಹಾತ್ ತುಟ್ಟ ಅಲಿಯಾಸ್ ಟ್ಯಾಬ್ ಡೌವ್ (21) ಬಂಧಿತ ಬೈಕ್ ಕಳ್ಳ. ಈ ಆರೋಪಿಯು ತನ್ನ ಮೋಜು, ಮಸ್ತಿ ಮತ್ತು ಐಷರಾಮಿ ಜೀವನಕ್ಕಾಗಿ ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೆ.ಆರ್.ಪುರ, ಮಹದೇವಪುರ, ವೈಟ್‍ಫೀಲ್ಡ್, […]

ಮೇಕೆದಾಟು ಪಾದಯಾತ್ರೆಯಲ್ಲಿ ಕಳ್ಳನ ಕೈಚಳಕ

ಕನಕಪುರ,ಜ.11- ಜನಜಂಗುಳಿ ಹಾಗೂ ಜನಸಾಗರದ ನಡುವೆ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆಯಲ್ಲಿ ಪಿಕ್‍ಪಾಕೆಟ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ನಿನ್ನೆಯ ಪಾದಯಾತ್ರೆ ಸಾಗುತ್ತಿದ್ದ ಮಾರ್ಗದ ಮರಳೇಬೇಕುಪ್ಪೆ ಗ್ರಾಮದಲ್ಲಿ ಯುವಕನೊಬ್ಬನ 20 ಸಾವಿರ ಹಣ ಕದ್ದಿದ್ದು, ಆತನ್ನು ಹಿಡಿದು ಧರ್ಮದೇಟು ನೀಡಿ ಸಾತನೂರು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ. ಪಿಕ್‍ಪಾಕೆಟ್ ದಂಧೆಯಲ್ಲಿ ತೊಡಗಿದ್ದ ಮೂರ್ನಾಲ್ಕು ಮಂದಿಯಲ್ಲಿ ಬಿ.ಮಂಜ (30) ಎಂಬಾತ ಸಿಕ್ಕಿ ಬಿದಿದ್ದಾನೆ. ಹಣ ಕದಿಯುತ್ತಿದ್ದ ವೇಳೆ ಸ್ಥಳದಲ್ಲಿಯೇ ಆತನಿಗೆ ಗೂಸಕೊಟ್ಟ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಸ್ಪತ್ರೆಯಿಂದ ಪರಾರಿ: ಪಿಕ್‍ಪಾಕೆಟ್ ಮಾಡಿ […]