Friday, December 6, 2024
Homeಬೆಂಗಳೂರುಐಪಿಎಲ್‌ ವೀಕ್ಷಣೆಗೆ ಬಂದಿದ್ದ ಜಾರ್ಖಂಡ್‌ನ ಕಳ್ಳನ ಬಂಧನ : 19.50 ಲಕ್ಷ ವೌಲ್ಯದ 32 ಮೊಬೈಲ್‌...

ಐಪಿಎಲ್‌ ವೀಕ್ಷಣೆಗೆ ಬಂದಿದ್ದ ಜಾರ್ಖಂಡ್‌ನ ಕಳ್ಳನ ಬಂಧನ : 19.50 ಲಕ್ಷ ವೌಲ್ಯದ 32 ಮೊಬೈಲ್‌ ಜಪ್ತಿ

ಬೆಂಗಳೂರು, ಮೇ 28- ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ವೀಕ್ಷಣೆಗೆಂದು ಜಾರ್ಖಂಡ್‌ನಿಂದ ಬಂದು ಲಾಲ್‌ ಬಾಗ್‌ ಸೇರಿದಂತೆ ಜನಸಂದಣಿ ಇರುವ ಪ್ರದೇಶ ಹಾಗೂ ಬಸ್‌‍ಗಳಲ್ಲಿ ಸಾರ್ವಜನಿಕರಂತೆ ವರ್ತಿಸಿ ಮೊಬೈಲ್‌ ಫೋನ್‌ಗಳನ್ನು ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿ 19.50 ಲಕ್ಷ ಮೌಲ್ಯದ 32 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಿಮ್ಹಾನ್‌್ಸ ಆಸ್ಪತ್ರೆಯ ಜಂಕ್ಷನ್‌ನಲ್ಲಿ ಪ್ರಯಾಣಿಕರೊಬ್ಬರು ಬಿಎಂಟಿಸಿ ಬಸ್‌‍ನಲ್ಲಿ ಪ್ರಯಾಣಿಸಿ ರಿಚ್‌ಮಂಡ್‌ ಸರ್ಕಲ್‌ನಲ್ಲಿ ಇಳಿದು ಬ್ಯಾಗ್‌ ನೋಡಿಕೊಂಡಾಗ ಮೊಬೈಲ್‌ ಫೋನ್‌ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಶೋಧ ನಡೆಸುತ್ತಿದ್ದಾಗ ಸೋಮೇಶ್ವರ ನಗರ ಮುಖ್ಯರಸ್ತೆಯಲ್ಲಿರುವ ಗೆಸ್ಟ್‌ಹೌಸ್‌‍ನಲ್ಲಿ ವಾಸವಾಗಿದ್ದ ಜಾರ್ಖಂಡ್‌ ಮೂಲದ ಆರೋಪಿ ಕಳ್ಳತನ ಮಾಡಿದ್ದ ಮೊಬೈಲ್‌ ಫೋನ್‌ಗಳನ್ನು ಗೆಸ್ಟ್‌ಹೌಸ್‌‍ ಮುಂಭಾಗವೇ ಮಾರಾಟಕ್ಕೆ ಯತ್ನಿಸುತ್ತಿದ್ದುದ್ದು ಕಂಡು ಬಂದಿದೆ. ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ವೀಕ್ಷಣೆಗಾಗಿ ಜಾರ್ಖಂಡ್‌ನಿಂದ ನಗರಕ್ಕೆ ಬಂದು, ಮೊಬೈಲ್‌ಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ.

ಆರೋಪಿಯು ತನ್ನ ಇತರ ಮೂವರು ಸಹಚರರೊಂದಿಗೆ ಸೇರಿಕೊಂಡು ಜಯನಗರ, ಶಿವಾಜಿನಗರ, ಕಬ್ಬನ್‌ಪಾರ್ಕ್‌, ಲಾಲ್‌ಬಾಗ್‌ ಹಾಗೂ ಇನ್ನಿತರೆ ಜನಸಂದಣಿಯಿರುವ ಪ್ರದೇಶ ಮತ್ತು ಬಸ್‌‍ಗಳಲ್ಲಿ ಸಾರ್ವಜನಿಕರಂತೆ ವರ್ತಿಸಿ ಮೊಬೈಲ್‌ಗಳನ್ನು ಕಳ್ಳತನ ಮಾಡುತ್ತಿದ್ದುದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಇದೀಗ ಪೊಲೀಸರು ಇನ್ನುಳಿದ ಮೂವರು ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.

RELATED ARTICLES

Latest News