ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ಟೋಲ್ ದರ ಮತ್ತೆ ಏರಿಕೆ

ಬೆಂಗಳೂರು,ಮಾ.31- ಸದಾ ಒಂದಿಲ್ಲೊಂದು ವಿವಾದದಿಂದಲೇ ಉದ್ಘಾಟನೆಗೊಂಡಿದ್ದ ಬಹುನಿರೀಕ್ಷಿತ ಬೆಂಗಳೂರು-ಮೈಸೂರು ದಶಪಥ ರಸ್ತೆಯ ಟೋಲ್ ದರವನ್ನು ಪರಿಷ್ಕರಣೆ ಮಾಡಲಾಗಿದೆ. ನೂತನ ಪರಿಷ್ಕøತ ದರವು ನಾಳೆ ಯಿಂದಲೇ ಜಾರಿಯಾಗಲಿದ್ದು, ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಂದು ಪರಿಷ್ಕøತ ದರ ಪ್ರಕಟಿಸಿದ್ದು ಮತ್ತೆ ಶೇ.22ರಷ್ಟು ಟೋಲ್ ದರ ಹೆಚ್ಚಿಸಿದೆ. ನಾಳೆಯಿಂದಲೇ ಶೇ.22ರಷ್ಟು ಟೋಲ್ ದರ ದುಬಾರಿಯಾಗಲಿದೆ. ಮಾರ್ಚ್ 14ರಿಂದ ಟೋಲ್ ಸಂಗ್ರಹ ಆರಂಭವಾಗಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ದರ ಹೆಚ್ಚಳ […]

ಬೆಂಗಳೂರು-ಮೈಸೂರು ಹೆದ್ಧಾರಿ ಟೋಲ್‍ಗೆ ಎಫ್‍ಕೆಸಿಸಿಐ ಆಕ್ಷೇಪ

ಬೆಂಗಳೂರು,ಮಾ.18- ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಗಳನ್ನು ಸಮರ್ಪಕವಾಗಿ ನಿರ್ಮಿಸದೆ ಟೋಲ್ ಸಂಗ್ರಹಿಸುತ್ತಿರುವುದು ಸರಿಯಲ್ಲ ಎಂದು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಕ್ಷೇಪ ವ್ಯಕ್ತ ಪಡಿಸಿದೆ. ಈ ಕುರಿತು ಪ್ರತಿಕಾ ಹೇಳಿಕೆ ನೀಡಿರುವ ಎಫ್‍ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್‍ರೆಡ್ಡಿ, ಬೆಂಗಳೂರು ಮತ್ತು ಮೈಸೂರು ನಡುವೆ ವಿಶ್ವ ದರ್ಜೆಯ ಎಕ್ಸ್‍ಪ್ರೆಸ್ ಹೆದ್ದಾರಿಯನ್ನು ನಿರ್ಮಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಕಾರವನ್ನು ಅಭಿನಂದಿಸುತ್ತವೆ. ಇದು ಶ್ಲಾಘನೀಯ ಕಾರ್ಯ, ಈ ಮೂಲಕ ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ […]

ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ರಾಮನಗರ,ಮಾ.14- ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಇಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು. ದಶಪಥ ಎಕ್ಸ್‍ಪ್ರೆಸ್‍ವೇನಲ್ಲಿ ಸರ್ವೀಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಮೂಲಭೂತ ವ್ಯವಸ್ಥೆ, ಸರ್ವೀಸ್ ರಸ್ತೆ ಸರಿಪಡಿಸಿದ ಹೆಚ್ಚಿನ ದರ ನಿಗದಿ ಮಾಡಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು. ಬೆಳಗ್ಗೆ 8 ಗಂಟೆ ಸುಮಾರಿಗೆ ಟೋಲ್ ಸಂಗ್ರಹ ಪ್ರಾರಂಭವಾಗಿದ್ದು, ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಮಿಣಕಿ ಹಾಗೂ ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ […]

ನೈಸ್‍ ರಸ್ತೆಯ ಅತಿ ಹೆಚ್ಚು ಟೋಲ್ ಸಂಗ್ರಹಕ್ಕೆ ಲಾರಿ ಮಾಲೀಕರ ಆಕ್ರೋಶ

ಬೆಂಗಳೂರು, ಮಾ.13- ನೈಸ್ ರಸ್ತೆಯ ಅತಿ ಹೆಚ್ಚು ಟೋಲ್ ಸಂಗ್ರಹಕ್ಕೆ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಸೋಸಿಯೇಷನ್ ಅಂಡ್ ಏಜೆಂಟ್ ಅಸೋಸಿಯೇಷನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, ಸಾರಿಗೆ ಇಲಾಖೆಯು ವಾಣಿಜ್ಯ ವಾಹನಗಳಿಗೆ ರೆಟ್ರೋ ರಿಫ್ಲೆಕ್ಟರ್ ಟೇಪ್‍ಗಳನ್ನು ಅಳವಡಿಸುವಂತೆ ಆದೇಶಿಸಿರುವ ನಿಯಮವನ್ನು ವಾಹನದ ಮಾಲೀಕರು ಪಾಲಿಸಲು ಸಿದ್ಧರಿರುತ್ತಾರೆ. ಆದರೆ ಕ್ಯೂಆರ್ ಕೋಡ್ ಆಧಾರಿತ ರಿಫ್ಲೆಕ್ಟರ್ ಟೇಪ್‍ಗಳನ್ನು ಸಂಘಟನೆಯು ವಿರೋಧಿಸುತ್ತದೆ. ಇದರಿಂದ ದುರುಪಯೋಗ ಆಗುವ ಎಲ್ಲಾ […]

ಗಣ್ಯವ್ಯಕ್ತಿಗಳಿಗೆ ವಿನಾಯ್ತಿ ಪಾಸ್‍ಟ್ಯಾಗ್‍ ವಿತರಣೆ

ಬೆಂಗಳೂರು,ಫೆ.22-ಶಾಸಕರು, ಸಂಸದರು, ಗಣ್ಯವ್ಯಕ್ತಿಗಳುಹಾಗೂ ವಿಶೇಷ ವಾಹನಗಳು ಟೋಲ್‍ನಲ್ಲಿ ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ಶುಲ್ಕ ವಿನಾಯ್ತಿ ಪಾಸ್‍ಟ್ಯಾಗ್‍ ಗಳನ್ನು ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ. ವಿಧಾನಪರಿಷತ್‍ನ ಪ್ರಶ್ನೋತ್ತರದಲ್ಲಿ ಶಾಸಕ ಸುನೀಲ್ ಗೌಡ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2021ರ ಫೆ.16ರಿಂದ ಎಲ್ಲ ವಾಹನಗಳು ಟೋಲ್‍ಗಳಲ್ಲಿ ಸಂಚರಿಸಬೇಕಾದಾಗ ಪಾಸಟ್ಯಾಗ್‍ಗಳನ್ನು ಕಡ್ಡಾಯಗೊಳಿಸಲಾಗಿದೆ. ನೈಸ್‍ರಸ್ತೆಯಲ್ಲಿ ಶುಲ್ಕ ವಿನಾಯ್ತಿ ಪಾಸ್‍ಟ್ಯಾಗ್‍ಗಳನ್ನು ನಿರಾಕರಿಸಿರುವ ಬಗ್ಗೆ ಯಾವುದೇ ದೂರುಗಳು ಕೇಳಿಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಅನಿತಾಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ : ಅಶ್ವಥ್ ನಾರಾಯಣ ಸದಸ್ಯ […]

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆಗೆ ಫೆ.15 ರಿಂದ ಟೋಲ್ ಫಿಕ್ಸ್

ಬೆಂಗಳೂರು,ಫೆ.2- ಮಹತ್ವಾಕಾಂಕ್ಷೆಯ ಮೈಸೂರು- ಬೆಂಗಳೂರು ಎಕ್ಸಪ್ರೆಸ್ ಕಾರಿಡಾರ್ ರಸ್ತೆಯಲ್ಲಿ ಫೆ.15ರೊಳಗೆ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಕಾಮಗಾರಿಯು ಮೊದಲ ಹಂತದಲ್ಲಿ ಬೆಂಗಳೂರು-ಚನ್ನಪಟ್ಟಣದ ನಿಡಘಟ್ಟದವರೆಗೂ ನಡೆದಿತ್ತು. ಇದು 56 ಕಿಮೀ ಒಳಗೊಂಡಿತ್ತು. ಎರಡನೇ ಹಂತದ ಕಾಮಗಾರಿ ನಿಡಘಟ್ಟದಿಂದ ಮೈಸೂರಿನವರೆಗೆ ನಡೆಯುತ್ತಿದೆ. 61 ಕಿ.ಮೀ. ಕಾಮಗಾರಿ ಭರದಿಂದ ಸಾಗುತ್ತಿದೆ. ಇದೀಗ ಮೊದಲ ಹಂತದ ಬೆಂಗಳೂರು-ನಿಡಘಟ್ಟ ಟೋಲ್ಸಂಗ್ರಹಕ್ಕೆ ಹೆದ್ದಾರಿ ಪ್ರಾಕಾರ ತೀರ್ಮಾನಿಸಿದೆ. ಮೊದಲ ಹಂತದ ಕಾಮಗಾರಿ ಮುಗಿದಿದ್ದು, ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಎರಡನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. […]

ಪಾಕ್ ಮಸೀದಿ ಸ್ಪೋಟದಲ್ಲಿ ಸತ್ತವರ ಸಂಖ್ಯೆ 80ಕ್ಕೆ ಏರಿಕೆ

ಪೇಶಾವರ,ಜ.31- ಪಾಕಿಸ್ತಾನದ ಮಸೀದಿ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 80ಕ್ಕೆರಿದೆ ಮಾತ್ರವಲ್ಲ 150 ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದು ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಸ್ಪೋಟಗೊಂಡ ಮಸೀದಿ ಅವಶೇಷದಡಿ ಸಿಲುಕಿ ಸಾವನ್ನಪಿರುವ ಶವಗಳನ್ನು ಇನ್ನು ಹೊರತೆಗೆಯಲಾಗುತ್ತಿದೆ. ಇಂದು ಬೆಳಿಗ್ಗೆ ಕುಸಿದ ಚಾವಣಿಯ ಕೊನೆ ಭಾಗ ತೆಗೆದುಹಾಕಿದ್ದೇವೆ. ಹೀಗಾಗಿ ಶವಗಳನ್ನು ಹೊರತೆಗೆಯಲು ಸುಲಭವಾಗಿದೆ.ಆದರೆ, ಅವಶೇಷಗಳಡಿ ಸಿಲುಕಿಕೊಂಡಿದ್ದ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆಗಳಿಲ್ಲ ಎಂದು ರಕ್ಷಣಾ ಸಂಸ್ಥೆ ವಕ್ತಾರ ಬಿಲಾಲ್ ಆಹ್ಮದ್ ತಿಳಿಸಿದ್ದಾರೆ. ಘಟನೆಯಲ್ಲಿ ಕನಿಷ್ಠ […]

ಟರ್ಕಿಯ ಕಲ್ಲಿದ್ದಲು ಗಣಿಯಲ್ಲಿ ಸ್ಪೋಟ, 30 ಮಂದಿ ಸಾವು

ಆಂಕಾರ,ಅ.15- ಟರ್ಕಿಯ ಕಲ್ಲಿದ್ದಲ ಗಣಿಗಳಲ್ಲಿ ಸ್ಪೋಟ ಸಂಭವಿಸಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಟರ್ಕಿಯ ಉತ್ತರ ವಲಯದ ಬರ್ಟೈನ್ ಪ್ರಾಂತ್ಯದ ಕಪ್ಪು ಸಮುದ್ರ ವ್ಯಾಪ್ತಿಯ ಸಮೀಪ ಇರುವ ಸರ್ಕಾರಿ ಮಾಲೀಕತ್ವದ ಟಿಟಿಕೆ ಹಂಸಾರಾನಗರ ಮುದ್ರುಲೋಗೊ ಗಣಿಯಲ್ಲಿ ಮುಂಜಾನೆ 6.35ರ ಸುಮಾರಿನಲ್ಲಿ ಸ್ಪೋಟ ಸಂಭವಿಸಿದೆ. ಸುಮಾರು 110ಕ್ಕೂ ಹೆಚ್ಚು ಗಣಿಯೊಳಗೆ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಸ್ಪೋಟದಿಂದಾಗಿ ಬೆಂಕಿಯ ಜ್ವಾಲೆಗಳು ಉರುವಲು ಅನಿಲಕ್ಕೆ ತಾಗಿ ದುರ್ಘಟನೆಯ ತೀವ್ರತೆ ಹೆಚ್ಚಾಗಿದೆ. ಸುಮಾರು 49 ಮಂದಿಯನ್ನು ಸುರಕ್ಷಿತವಾಗಿ ಅಲ್ಲಿಂದ […]

ಇಸ್ರೇಲ್ ಹಮಾಸ್ ಉಗ್ರರ ನಡುವೆ ಮುಂದುವರೆದ ದಾಳಿ : 50ಕ್ಕೂ ಮಂದಿ ಸಾವು

ಗಾಜಾ, ಆ. 8- ಪ್ಯಾಲಿಸ್ತೇನ್‍ನ ಹಮಾಸ್ ಉಗ್ರ ಸಂಘಟನೆ ಹಾಗೂ ಇಸ್ರೇಲಿ ಪಡೆಗಳ ನಡುವೆ ಗಾಜಾ ನಗರದಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದಲ್ಲಿ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಹಿಂಸಾಚಾರಗಳು ಆತಂಕ ಮೂಡಿಸಿದ್ದು, ಪ್ಯಾಲೆಸ್ತೇನ್ ಕಡೆಯಿಂದ ಉಗ್ರರು ರಾಕೇಟ್‍ಗಳನ್ನು ಉಡಾಯಿಸುತ್ತಿದ್ದಾರೆ. ಇತ್ತ ಇಸ್ರೇಲ್ ವಾಯು ದಾಳಿ ಮೂಲಕ ಉಗ್ರರ ಹಡಗು ತಾಣಗಳನ್ನು ನಾಶಪಡಿಸುತ್ತಿದೆ. ಎರಡು ಕಡೆಗಳಿಂದ ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕಿ ಬಾಂಬ್ ದಾಳಿ ನಡೆಯುತ್ತಿದ್ದು, ಹೆಚ್ಚಿನ ಅನಾಹುತ […]