ಮುಂಬೈನಲ್ಲಿ 2 ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ

ಮುಂಬೈ, ಫೆ.10- ಇಂದು ನಗರಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಛತ್ರಪತಿ ಶಿವಾಜಿ ಟರ್ಮಿನಸ್‍ನಲ್ಲಿ ಎರಡು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ದಾವೋಡಿ ಬೋಹ್ರಾ ಸಮುದಾಯದ ಕಾಲೇಜಿನ ನೂತನ ಕಟ್ಟಡ, ಎರಡು ರಸ್ತೆ ಕಾರಿಡಾರ್‍ಗಳು ಮತ್ತು ವಾಹನಗಳ ಅಂಡರ್ ಪಾಸನ್ನು ಉದ್ಘಾಟಿಸಿದ್ದಾರೆ. ಮಧ್ಯಾಹ್ನದ ವೇಳೆ ನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರು, ಮೊದಲು ಸಿಎಸ್‍ಎಮ್‍ಟಿ – ಸೋಲಪುರ ರೈಲಿಗೆ ಚಾಲನೆ ನೀಡಿ ಬಳಿಕ ಶಿರಡಿ ಸಾಯಿನಗರವನ್ನು ಸಂಪರ್ಕಿಸುವ ರೈಲಿಗೆ ಚಾಲನೆ ನೀಡಿದರು. ಸಿಎಸ್‍ಎಮ್‍ಟಿ – […]