Thursday, May 2, 2024
Homeರಾಷ್ಟ್ರೀಯಬೆಂಗಳೂರಿನಿಂದ ಅಯೋಧ್ಯೆಗೆ ವಿಶೇಷ ರೈಲುಗಳ ವ್ಯವಸ್ಥೆ

ಬೆಂಗಳೂರಿನಿಂದ ಅಯೋಧ್ಯೆಗೆ ವಿಶೇಷ ರೈಲುಗಳ ವ್ಯವಸ್ಥೆ

ಬೆಂಗಳೂರು,ಜ.8- ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೇಶದ ವಿವಿಧೆಡೆಯಿಂದ ವಿಶೇಷ ರೈಲುಗಳನ್ನು ಬಿಡಲಾಗಿದೆ. ಅದೇ ರೀತಿ ಕರ್ನಾಟಕ ರಾಜಧಾನಿ ಬೆಂಗಳೂರಿನಿಂದಲೂ ಸಹ ವಿಶೇಷ ರೈಲುಗಳನ್ನು ಬಿಡಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಜನವರಿ 22ರಂದು ಉದ್ಘಾಟನೆ ಆಗುತ್ತಿರುವ ಅಯೋಧ್ಯೆ ಶ್ರೀರಾಮ ಮಂದಿರದ ಕಾರ್ಯಕ್ರಮದಲ್ಲಿ ಜನರು ಭಾಗವಹಿಸಲು ಅನುಕೂಲವಾಗಲೆಂದು ಈ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿ ನಿಂದಲೂ ರೈಲುಗಳು ಅಯೋಧ್ಯೆಗೆ ತೆರಳಲಿವೆ. ಬೆಂಗಳೂರು ಮತ್ತು ಅಯೋಧ್ಯೆ ಜಂಕ್ಷನ್ ನಡುವೆ ಹಲವಾರು ರೈಲುಗಳು ಸಂಚರಿಸುತ್ತವೆ. ಇದರಲ್ಲಿ ಹೆಚ್ಚಿನ ರೈಲು ಯಶವಂತಪುರ ಜಂಕ್ಷನ್‍ನಿಂದ ಅಯೋಧ್ಯೆಗೆ ಹೊರಡುತ್ತದೆ.

ಛತ್ತೀಸ್‍ಗಢದಲ್ಲಿ ಬಿಜೆಪಿ ನಾಯಕನ ಭೀಕರ ಹತ್ಯೆ

ಇದು ಭಾರತೀಯ ರೈಲ್ವೇ ಜಾಲದಲ್ಲಿ ಅತ್ಯಂತ ಜನನಿಬಿಡ ರೈಲು ಮಾರ್ಗಗಳಲ್ಲಿ ಒಂದಾಗಿದೆ. ಬೆಂಗಳೂರಿನಿಂದ ಅಯೋಧ್ಯೆಗೆ ತಡೆರಹಿತ ಪ್ರಯಾಣ ನಡೆಸಲು ಮುಂಚಿತವಾಗಿ ರೈಲ್ವೇ ಟಿಕೆಟ್ ಬುಕ್ ಮಾಡಬಹುದಾಗಿದೆ. ಪ್ರಯಾಣಿಕರು ಆಫ್‍ಲೈನ್ ಮತ್ತು ಆನ್‍ಲೈನ್ ಮೂಲಕ ಬೆಂಗಳೂರಿನಿಂದ ಅಯೋಧ್ಯೆಗೆ ರೈಲು ಟಿಕೆಟ್‍ಗಳನ್ನು ಬುಕ್ ಮಾಡಬಹುದಾಗಿದೆ.

ಭಾರತೀಯ ರೈಲ್ವೇಯ ಐಆರ್‍ಸಿಟಿಸಿ ವೆಬ್‍ಸೈಟ್ ಮೂಲಕ ಆನ್‍ಲೈನ್ ಬುಕಿಂಗ್ ಮಾಡಬಹುದು, ಅಲ್ಲಿ ಪ್ರಯಾಣಿಕರು ಆಸನ ಲಭ್ಯತೆಯನ್ನು ಪರಿಶೀಲಿಸಿ ಅನುಕೂಲಕರವಾದ ಟಿಕೆಟ್‍ಗಳನ್ನು ಬುಕ್ ಮಾಡಬಹುದು. ಐಆರ್‍ಸಿಟಿಸಿ ಅಧಿಕೃತ ರೈಲ್‍ಮಿತ್ರದ ಸಹಯೋಗದೊಂದಿಗೆ 450ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಇ-ಕೇಟರಿಂಗ್ ಸೇವೆಗಳನ್ನು ಒದಗಿಸಲಾಗಿದೆ.

ಇದರಲ್ಲಿ ಪ್ರಯಾಣಿಕರು ತಮ್ಮ ರೈಲು ಪ್ರಯಾಣದ ಸಮಯದಲ್ಲಿ ರೆಸ್ಟೋರೆಂಟ್‍ನ ಬಿಸಿ ಬಿಸಿ ಆಹಾರವನ್ನು ಸವಿಯಬಹುದಾಗಿದೆ. ರೈಲು ಸಂಖ್ಯೆ 15024 ಯಶವಂತಪುರ-ಗೋರಖ್‍ಪುರ ನಡುವೆ ಸಂಚರಿಸುವ ಎಕ್ಸ್‍ಪ್ರೆಸ್ ರೈಲು ಬೆಂಗಳೂರಿನ ಯಶವಂತಪುರದಿಂದ ರಾತ್ರಿ 11:40ಕ್ಕೆ ಹೊರಟು ಮರುದಿನ ಸಂಜೆ 04:26ಕ್ಕೆ ಅಯೋಧ್ಯೆ ತಲುಪಲಿದೆ. ರೈಲು ಸಂಖ್ಯೆ 22534 ಯಶವಂತಪುರ ಗೋರಖ್‍ಪುರ ನಡುವೆ ಎಕ್ಸ್‍ಪ್ರೆಸ್ ಈ ರೈಲು ಬೆಂಗಳೂರಿನ ಯಶವಂತಪುರದಿಂದ ರಾತ್ರಿ 11:40ಕ್ಕೆ ಹೊರಟು ಮರುದಿನ ಸಂಜೆ 03:50ಕ್ಕೆ ನಿಗೋರಖ್‍ಪುರವನ್ನು ತಲುಪುತ್ತದೆ.

ರೈಲು ಸಂಖ್ಯೆ 12592 ಯಶವಂತಪುರ ಗೋರಖ್‍ಪುರ ನಡುವೆ ಎಕ್ಸ್‍ಪ್ರೆಸ್ ರೈಲು ಬೆಂಗಳೂರಿನ ಯಶವಂತಪುರದಿಂದ ಸಂಜೆ 05:20ಕ್ಕೆ ಹೊರಟು ಮರುದಿನ ಸಂಜೆ 01:17ಕ್ಕೆ ನಿಗದಿತ ಸ್ಥಳವನ್ನು ತಲುಪುತ್ತದೆ. ಅಯೋಧ್ಯೆಗೆ ಸಾಮಾನ್ಯ ಟಿಕೆಟ್ ದರ ಬೆಲೆ 840.99 ರೂ. ಆಗಿದೆ. ಪ್ರಥಮ ದರ್ಜೆ ಟಿಕೆಟ್ ದರ 2,183.79 ರೂ. ಆಗಿದ್ದು, ಅಯೋಧ್ಯೆಗೆ ಮೊದಲ ರೈಲು ಬೆಳಗ್ಗೆ 3:10 ಆಗಿದ್ದು, ಕೊನೆಯ ರೈಲು ರಾತ್ರಿ 11:40ಕ್ಕೆ ಹೊರಡಲಿದೆ.

RELATED ARTICLES

Latest News