2022ರಲ್ಲಿ ಕೊಂಚ ಸುಧಾರಿಸಿದೆ ನಿರುದ್ಯೋಗ ಸಮಸ್ಯೆ

ನವ ದೆಹಲಿ,ಫೆ.25- ಕಳೆದ ವರ್ಷ ದೇಶದ ನಗರ ಪ್ರದೇಶಗಳ ನಿರುದ್ಯೋಗ ಸಮಸ್ಯೆ ಕ್ಷೀಣಿಸಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ತಿಳಿಸಿದೆ. ಕೋವಿಡ್ ನಂತರ 2021ರಲ್ಲಿ ಆರಂಭವಾಗಿದ್ದ ನಿರುದ್ಯೋಗ ಸಮಸ್ಯೆ 2022ರ ಅಕ್ಟೋಬರ್ ತಿಂಗಳಿನಲ್ಲಿ ಶೇ.8.7ರಿಂದ ಶೇ.7.2ಕ್ಕೆ ಇಳಿಕೆಯಾಗಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 2022 ಜೂನ್ ಮತ್ತು ಏಪ್ರಿಲ್ ತಿಂಗಳಿನಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ನಿರುದ್ಯೋಗ ದರವು ನಗರ ಪ್ರದೇಶಗಳಲ್ಲಿ ಶೇ.7.6 ರಷ್ಟಿತ್ತು ಎಂದು 17 ನೇ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ […]
ಪರ ವಿರೋಧ ಚರ್ಚೆಗೆ ಗ್ರಾಸವಾದ ಮೋಹನ್ ಭಾಗವತ್‍ರ ಹೇಳಿಕೆ

ನವದೆಹಲಿ,ಫೆ.6- ದೇಶದಲ್ಲಿನ ನಿರುದ್ಯೋಗಕ್ಕೆ ವೃತ್ತಿ ಘನತೆ ಕೊರತೆಯೆ ಪ್ರಮುಖ ಕಾರಣ ಎಂದು ಆರ್‍ಎಸ್‍ಎಸ್‍ನ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಪ್ರಧಾನಿ ಅವರ ಭರವಸೆ ಏನಾಯಿತು ಎಂಬ ಪ್ರಶ್ನೆಯೂ ಕೇಳಿ ಬಂದಿದೆ. ನಿನ್ನೆ ಮುಂಬೈನಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಮೋಹನ್ ಭಾಗವತ್, ಜನ ಸರ್ಕಾರಿ ಉದ್ಯೋಗದ ಹಿಂದೆ ಓಡುವುದನ್ನು ನಿಲ್ಲಿಸಬೇಕು. ಯಾವುದೇ ಕೆಲಸದಲ್ಲಿ ದೊಡ್ಡದು, ಚಿಕ್ಕದು ಎಂಬುದಿಲ್ಲ. ಎಲ್ಲರೂ ದುಡಿಯುವುದು ಸಮಾಜಕ್ಕಾಗಿ. ಅದು ಕಠಿಣ […]
ಇದು ಲಂಚ-ಮಂಚದ ಸರ್ಕಾರ : ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕಲಬುರಗಿ, ಆ.12- ಕರ್ನಾಟಕದ ಯುವತಿಯರಿಗೆ ನೌಕರಿ ಬೇಕು ಎಂದರೆ ಮಂಚ ಹತ್ತಬೇಕು, ಯುವಕರಿಗೆ ನೌಕರಿ ಬೇಕು ಎಂದರೆ ಲಂಚ ನೀಡಬೇಕು. ಹಾಗಾಗಿ ಇದು ಲಂಚ-ಮಂಚದ ಸರ್ಕಾರವಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.40ರಷ್ಟು ಕಮಿಷನ್ ದಂಧೆಯ ಈ ಸರ್ಕಾರ ಯುವಕರ ವಿರೋಧಿಯಾಗಿದೆ. ಎಂಟು ವರ್ಷಗಳ ಹಿಂದೆ ಚುನಾವಣೆ ಪ್ರಚಾರದಲ್ಲಿ ನರೇಂದ್ರ ಮೋದಿ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿತ್ತು. ಆದರೆ ಇರುವ ಉದ್ಯೋಗಗಳು […]
ಪಾಕಿಸ್ತಾನ, ಶ್ರೀಲಂಕಾಗಿಂತಲೂ ಭಾರತದಲ್ಲೇ ನಿರುದ್ಯೋಗ ಹೆಚ್ಚು
ನವದೆಹಲಿ, ಆ.8- ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ನಿರುದ್ಯೋಗದ ಸಮಸ್ಯೆ ತೀವ್ರವಾಗಿ ಹೆಚ್ಚಾಗಿದ್ದು, ಪಾಕಿಸ್ತಾನ, ಶ್ರೀಲಂಕಾಗಿಂತಲೂ ದನನೀಯ ಸ್ಥಿತಿಯಲ್ಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ, ಜಾಗತಿಕ ನಿರುದ್ಯೋಗದ ಸೂಚ್ಯಂಕವನ್ನು ಮರುಪ್ರಕಟಿಸಿದ್ದು, ಅಗತ್ಯ ಇರುವುದು ಮನೆ ಮನೆಗೆ ಉದ್ಯೋಗ ತಲುಪಿಸುವುದು, ಆದರೆ ವಾಸ್ತವವಾಗಿರುವುದು ಪ್ರತಿ ಮನೆಯಲ್ಲೂ ನಿರುದ್ಯೋಗವಿದೆ ಎಂದು ಕಿಡಿಕಾರಿದ್ದಾರೆ. 15ರಿಂದ 24 ವರ್ಷದೊಳಗಿನ ನಿರುದ್ಯೋಗದ ಪ್ರಮಾಣ ಜಪಾನ್‍ನಲ್ಲಿ ಶೇ.4.4ರಷ್ಟಿದ್ದರೆ, ಜರ್ಮನಿಯಲ್ಲಿ ಶೇ.6.9ರಷ್ಟಿದೆ, ಇಸ್ರೇಲ್‍ನಲ್ಲಿ ಶೇ.8.8, ಪಾಕಿಸ್ತಾನದಲ್ಲಿ 9.4, ನೇಪಾಳದಲ್ಲಿ […]