ರಾಹುಲ್ ಯಾತ್ರೆಯಲ್ಲಿ ಊರ್ಮಿಳಾ ಕಲರವ

ಜಮ್ಮು,ಜ.24- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಪಾಲ್ಗೊಂಡಿದ್ದರು. ಇಂದು ಬೆಳಗ್ಗೆ ಜಮ್ಮುವಿನ ನಗ್ರೋಟಾದ ಗ್ಯಾರಿಸನ್ ಪಟ್ಟಣದಿಂದ ಭಾರೀ ಶೀಥ ವಾತಾವರಣದ ನಡುವೆ ಪುನರಾರಂಭಗೊಂಡ ಯಾತ್ರೆಗೆ ರಾಜಕಾರಣಿಯಾಗಿ ಬದಲಾಗಿರುವ ಉರ್ಮಿಳಾ ಮಾತೋಂಡ್ಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ. 1990ರ ದಶಕದಲ್ಲಿ ಜನಪ್ರಿಯರಾಗಿದ್ದ ಮಾತೋಂಡ್ಕರ್, 2019 ರ ಸೆಪ್ಟೆಂಬರ್‍ನಲ್ಲಿ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ, ಆರು ತಿಂಗಳ ಬಳಿಕ 2020 ರಲ್ಲಿ ಶಿವಸೇನೆಗೆ ಸೇರಿದ್ದರು. ಇಂದು ಕೆನೆ ಬಣ್ಣದ ಸಾಂಪ್ರದಾಯಿಕ ಕಾಶ್ಮೀರ […]