Friday, October 4, 2024
Homeಮನರಂಜನೆ8 ವರ್ಷದ ವೈವಾಹಿಕ ಜೀವನ ಅಂತ್ಯಗೊಳಿಸಿದ ರಂಗೀಲಾ ಬೆಡಗಿ..?

8 ವರ್ಷದ ವೈವಾಹಿಕ ಜೀವನ ಅಂತ್ಯಗೊಳಿಸಿದ ರಂಗೀಲಾ ಬೆಡಗಿ..?

Urmila Matondkar Files For Divorce From Husband Mohsin Akhtar Mir

ನವದೆಹಲಿ, ಸೆ. 25- ಕಾಲಿವುಡ್‌ ನಟ ಜಯಂರವಿ ಅವರ ಡೈವೋರ್ಸ್‌ ವಿಚಾರ ಭಾರೀ ಸದ್ದು ಮಾಡುತ್ತಿರುವಾಗಲೇ ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್‌ ಅವರು ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಸುದ್ದಿ ಬಿಗ್‌ಟೌನ್‌ನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
2016ರಲ್ಲಿ ರಂಗೀಲಾ ಬೆಡಗಿ ಊರ್ಮಿಳಾ ಮಾತೋಂಡ್ಕರ್‌ ಅವರು ಕಾಶೀರಿ ಮೂಲದ ಮೋಸಿನ್‌ ಅವರು ವಿವಾಹ ವಾದಾಗ ಅನ್ಯಕೋಮಿನ ವರನನ್ನು ಸ್ಟಾರ್‌ ನಟಿ ವರಿಸಿದ್ದರಿಂದ ಬಾಲಿವುಡ್‌ ಅಂಗಳದಲ್ಲಿ ಸಾಕಷ್ಟು ಚರ್ಚೆಗಳಾಗಿದ್ದವು.

ತಮ ಎಂಟು ವರ್ಷಗಳ ಸುದೀರ್ಘ ವೈವಾಹಿಕ ಜೀವನವನ್ನು ಅಂತ್ಯಗೊಳಿಸುವ ಸಲುವಾಗಿ ನಟಿ ಊರ್ಮಿಳಾ ಮಾಂತೋಡ್ಕರ್‌ ಅವರು ಮುಂಬೈ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರೆ. ಇದಕ್ಕೆ ಸೂಕ್ತ ಕಾರಣ ನಟಿ ತಿಳಿಸಿಲ್ಲ. ತಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆ ಮಾಡದ ರಂಗೀಲಾ ನಟಿ ಊರ್ಮಿಳಾ ಮಾಂತೋಡ್ಕರ್‌ ತಾವು ತಮ ಪತಿ ಮೋಸಿನ್‌ ಅಖ್ತರ್‌ಗೆ ವಿಚ್ಛೇದನ ನೀಡುತ್ತಿರುವ ವಿಷಯದಲ್ಲೂ ಗೌಪ್ಯತೆ ಕಾಪಾಡಿಕೊಂಡಿದ್ದಾರೆ.

ಊರ್ಮಿಳಾ ಮಾಂತೋಡ್ಕರ್‌ ಅವರು ತಮ ವೈವಾಹಿಕ ಜೀವನ ಅಂತ್ಯಗೊಳಿಸುತ್ತಿರುವುದೇಕೆ ಎಂದು ಅಧಿಕೃತ ಹೇಳಿಕೆ ನೀಡದಿದ್ದರೂ ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದು , ಆದರಿಂದಲೇ ವಿಚ್ಛೇದನ ಪಡೆಯಲು ಕಾರಣವಾಗಿರ ಬಹುದೇ ಎಂದು ಬಿಗ್‌ಟೌನ್‌ನಲ್ಲಿ ಚರ್ಚೆಗಳಾಗಿವೆ.

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಊರ್ಮಿಳಾ, ನಂತರ ರಂಗೀಲಾ, ಜುದಾಯಿ, ಸತ್ಯ, ಮಸ್ತ್‌, ಕುಬ್‌ಸುರತ್‌, ಪ್ಯಾರ್‌ ತುನೇ ಕ್ಯಾ ಕೀಯಾ, ಏಕ್‌ ಹಸೀನಾ ಥೀ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಮೋಸಿನ್‌ ಕೂಡ ಬಿಎಪಾಸ್‌‍',ಎ ಮ್ಯಾನ್‌್ಸ ವರ್ಲ್‌್ಡ’, ಲಕ್‌ ಬೈ ಚಾನ್‌್ಸ',ಮುಂಬೈ ಮಸ್ತ್‌ ಕಲಂದರ್‌’ ಎಂಬ ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿದ ನಂತರ ಫ್ಯಾಷನ್‌ ಉದ್ಯಮದಲ್ಲಿ ತಮನ್ನು ತೊಡಗಿಸಿಕೊಂಡಿದ್ದಾರೆ.

RELATED ARTICLES

Latest News