ಧರ್ಮ ವಿಭಜನೆ ಸತ್ಯ ಜಗತ್ತಿಗೆ ಗೊತ್ತು : ಸಿದ್ದು ವಿರುದ್ಧ ಸಿಎಂ ಕಿಡಿ

ಬೆಂಗಳೂರು,ಆ.20- ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಮಾತುಕತೆ ಅವರಿಬ್ಬರಿಗೆ ಮಾತ್ರ ಗೊತ್ತು. ಅವರು ಈಗ ಪಶ್ಚಾತ್ತಾಪದ ಬಗ್ಗೆ ಮಾತನಾಡಿದ್ದರೂ ಸತ್ಯ ಜಗತ್ತಿಗೆ ಗೊತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳು ಹಾಗೂ ಸಿದ್ದರಾಮಯ್ಯ ನಡುವಿನ ಮಾತುಕತೆ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡುವುದಿಲ್ಲ. ಸತ್ಯ ಏನೆಂಬುದು ಜಗತ್ತಿಗೆ ಗೊತ್ತು. ಇಬ್ಬರ ನಡುವಿನ ಮಾತುಕತೆ ಬಗ್ಗೆ ನಾನು ಮಾತನಾಡಿದರೆ ಬೇರೆಯದೇ ಅರ್ಥವಾಗುತ್ತದೆ ಎಂದು ಸಿಎಂ ನುಣುಚಿಕೊಂಡರು. ಮಾಜಿ […]

ಸಿದ್ದರಾಮಯ್ಯನವರಿಗೆ ಮನಪರಿವರ್ತನೆಯಾಗಿದ್ದರೆ ಅದನ್ನು ನಾನು ಸ್ವಾಗತಿಸುತ್ತೇನೆ: ಬಿಎಸ್‍ವೈ

ಬೆಂಗಳೂರು, ಆ.20- ಧರ್ಮ ವಿಭಜನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಶ್ಚಾತ್ತಾಪವಾಗಿ ಮನಸ್ಸು ಪರಿವರ್ತನೆಯಾಗಿದ್ದರೆ ಅದನ್ನು ನಾನು ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಿದ್ದರಾಮಯ್ಯ ಮತ್ತು ರಂಭಾಪುರಿ ಶ್ರೀಗಳ ನಡುವೆ ನಡೆದಿರುವ ಮಾತುಕತೆ. ಅಲ್ಲಿ ಏನು ನಡೆದಿದೆ ಎಂಬುದು ಹೊರ ಜಗತ್ತಿಗೆ ಗೊತ್ತಿಲ್ಲ ಎಂದರು. ಒಂದು ವೇಳೆ ಸಿದ್ದರಾಮಯ್ಯನವರಿಗೆ ನಾನು ವೀರಶೈವ ಲಿಂಗಾಯಿತ ಧರ್ಮ ಪ್ರತ್ಯೇಕ ಮಾಡಲು ಮುಂದಾಗಿದ್ದು ತಪ್ಪು ಎಂಬ ಅರಿವಾಗಿದ್ದರೆ ಸಂತೋಷ ಎಂದಷ್ಟೇ ಪ್ರತಿಕ್ರಿಯೆ ನೀಡಿದರು. ನಿನ್ನೆ […]