Thursday, May 2, 2024
Homeರಾಷ್ಟ್ರೀಯತಮಿಳುನಾಡಿನಲ್ಲಿ ಇಡಿ ಶೋಧ

ತಮಿಳುನಾಡಿನಲ್ಲಿ ಇಡಿ ಶೋಧ

ಚೆನ್ನೈ, ಮಾ.9 (ಪಿಟಿಐ) – ತಮಿಳುನಾಡಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆದಿದೆ ಎನ್ನಲಾದ ತನಿಖೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ತಮಿಳುನಾಡಿನಲ್ಲಿ ವಿವಿಧ ಪ್ರದೇಶಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ ಅವರ ಅಳಿಯ ಆಧವ್ ಅರ್ಜುನ್ ಅವರ ಆವರಣ ಸೇರಿದಂತೆ ಚೆನ್ನೈ ಮತ್ತು ಕೊಯಮತ್ತೂರಿನಲ್ಲಿರುವ ಕೆಲವು ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಸುಮಾರು 10 ನಿವೇಶನಗಳನ್ನು ಶೋಧಿಸಲಾಗುತ್ತಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‍ಎ) ಅಡಿಯಲ್ಲಿ ಇಡಿ ತನಿಖೆ ನಡೆಸುತ್ತಿದೆ.

ಸಿಕ್ಕಿಂ ಸರ್ಕಾರದ ಲಾಟರಿಗಳ ಮಾರಾಟಕ್ಕೆ ಸಂಬಂಧಿಸಿದ ಆಪಾದಿತ ಅಪರಾಧಗಳಿಗಾಗಿ ಮಾರ್ಟಿನ್ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣದಿಂದ ಉದ್ಭವಿಸಿದ ಮತ್ತೊಂದು ಮನಿ ಲಾಂಡರಿಂಗ್ ಪ್ರಕರಣದ ಭಾಗವಾಗಿ ಇಡಿಯಿಂದ ತನಿಖೆ ನಡೆಸಲಾಗಿದೆ. ಲಾಟರಿ ರಾಜ ಎಂದು ಕರೆಯಲ್ಪಡುವ ಮಾರ್ಟಿನ್ ಮತ್ತು ಅವರ ಕಂಪನಿ- ಗೇಮಿಂಗ್ ಸೊಲ್ಯೂಷನ್ಸ ಇಂಡಿಯಾ ಸಂಸ್ಥೆ ಸಿಕ್ಕಿಂ ಲಾಟರಿಗಳ ಮಾಸ್ಟರ್ ವಿತರಕ ಎಂದು ಹೇಳಲಾಗಿದೆ.

RELATED ARTICLES

Latest News