Tuesday, May 28, 2024
Homeರಾಷ್ಟ್ರೀಯಪೊನ್ಮುಡಿಗೆ ಪ್ರಮಾಣ ವಚನ ಬೋಧಿಸಲು ರಾಜ್ಯಪಾಲರ ನಿರಾಕರಣೆ

ಪೊನ್ಮುಡಿಗೆ ಪ್ರಮಾಣ ವಚನ ಬೋಧಿಸಲು ರಾಜ್ಯಪಾಲರ ನಿರಾಕರಣೆ

ಚೆನ್ನೈ,ಮಾ.18- ಕೆ.ಪೊನ್ಮುಡಿ ಅವರನ್ನು ಮತ್ತೆ ಸಚಿವರಾಗಲು ಪ್ರಮಾಣ ವಚನ ಬೋಧಿಸುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಾಡಿರುವ ಶಿಫರಸನ್ನು ತಮಿಳುನಾಡು ರಾಜ್ಯಪಾಲ ಆರ್. ಎನ್.ರವಿ ನಿರಾಕರಿಸಿದ್ದಾರೆ.

ಅನರ್ಹಗೊಂಡ ತಮಿಳುನಾಡು ಸಚಿವ ಮತ್ತು ಡಿಎಂಕೆ ಹಿರಿಯ ನಾಯಕ ಕೆ ಪೊನ್ಮುಡಿ ಅವರನ್ನು ಮಾರ್ಚ್ 13, 2024 ರಂದು ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರ ಅಪರಾಧ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆಗೆ ತಡೆ ನೀಡಿದ ಕೆಲವು ದಿನಗಳ ನಂತರ ಅವರನ್ನು ಮರುಸೇರ್ಪಡೆ ಮಾಡಿಕೊಳ್ಳಲಾಗಿತ್ತು.ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯವು ಪೊನ್ಮುಡಿ ಮತ್ತು ಅವರ ಪತ್ನಿ ವಿಶಾಲಾಕ್ಷಿ ವಿರುದ್ಧ 2011 ರಲ್ಲಿ ಪ್ರಕರಣ ದಾಖಲಿಸಿತ್ತು. 2006 ರಿಂದ 2011 ರವರೆಗೆ ಡಿಎಂಕೆ ಆಡಳಿತದಲ್ಲಿ ಪೊನ್ಮುಡಿ ಉನ್ನತ ಶಿಕ್ಷಣ ಮತ್ತು ಗಣಿ ಸಚಿವರಾಗಿದ್ದರು.

ರಾಜ್ಯ ವಿಧಾನಸಭಾ ಸ್ಪೀಕರ್ ಎಂ.ಅಪ್ಪಾವು ಅವರು ಪೊನ್ಮುಡಿ ಅವರನ್ನು ಮರುಸೇರ್ಪಡೆಗೊಳಿಸಿದ್ದು, ಅವರು ವಿಧಾನಸಭೆಯ ಸದಸ್ಯರಾಗಿ ಮುಂದುವರಿಯಲಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಪೊನ್ಮುಡಿ ಅವರ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ ಎಂದು ಹೇಳಿದ್ದರು.

ಇದೇ ವೇಳೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರಿಗೆ ಪತ್ರ ಬರೆದು ಡಿಎಂಕೆ ಹಿರಿಯ ನಾಯಕ ಪೊನ್ಮುಡಿ ಸಚಿವರಾಗಿ ಪ್ರಮಾಣ ವಚನ ಬೋದಿಸುವಂತೆ ಕೋರಿದ್ದರು.
ಪೊನ್ಮುಡಿ (ಡಿಎಂಕೆ ಹಿರಿಯ ನಾಯಕ ಮತ್ತು ಮಾಜಿ ಉನ್ನತ ಶಿಕ್ಷಣ ಸಚಿವ) ಅವರ ದೋಷಾರೋಪಣೆಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕದ ಕಾರಣ ಅವರಿಗೆ ಪ್ರಮಾಣ ವಚನ ಬೋಧಿಸಲು ಸಾಧ್ಯವಿಲ್ಲ ಎಂದು ರಾಜ್ಯಪಾಲ ಆರ್‍ಎನ್ ರವಿ ರಾಜ್ಯ ಸರ್ಕಾರಕ್ಕೆ ಪತ್ರ ಕಳುಹಿಸಿದ್ದಾರೆ. ಪೊನ್ಮುಡಿ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಲು ರಾಜ್ಯಪಾಲರು ಅಸಮರ್ಥತೆ ವ್ಯಕ್ತಪಡಿಸಿದ್ದಾರೆ.

ಐದಂತಸ್ತಿನ ಕಟ್ಟಡ ಕುಸಿದು ಇಬ್ಬರ ದುರ್ಮರಣ

ಕಳೆದ ಮಾರ್ಚ್ 1 ರಂದು ತಮಿಳುನಾಡು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರು ರಾಜ್ಯ ವಿಧಾನಸಭೆಯ ಸದಸ್ಯರಾಗಿ ಕೆ.ಪೊನ್ಮುಡಿ ಅವರನ್ನು ಅನರ್ಹಗೊಳಿಸಿದ ಮತ್ತು ಅದರ ಪರಿಣಾಮವಾಗಿ ವಿಧಾನಸಭೆ ಸ್ಥಾನವನ್ನು ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಅಪ್ಪಾವು ಅವರಿಗೆ ಪತ್ರ ಬರೆದಿದ್ದರು.

ತಿರುಕ್ಕೊಯಿಲೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಮತ್ತು ಪ್ರಸ್ತುತ ಸರ್ಕಾರದಲ್ಲಿ ಸಚಿವರೂ ಆಗಿರುವ ಕೆ.ಪೊನ್ಮುಡಿ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಕ್ಕಾಗಿ ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ಅಪರಾ„ ಎಂದು ಸಾಬೀತಾಗಿರುವ ಸಂಗತಿ ನಿಮ್ಮ ಕಚೇರಿಗೆ ತಿಳಿದಿದೆ. ಡಿಸೆಂಬರ್ 21, 2023 ರ ಆದೇಶದ ಪ್ರಕಾರ ಮದ್ರಾಸ್ ಹೈಕೋರ್ಟ್ ತಿಳಿದಿರುವ ಆದಾಯದ ಮೂಲಕ್ಕೆ ಅಸಮಾನವಾಗಿದೆ. ಹೈಕೋರ್ಟ್ ನೀಡಿದ ಶಿಕ್ಷೆಯ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ, ಎಂದು ಎಡಪ್ಪಾಡಿ ಪಳನಿಸ್ವಾಮಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

RELATED ARTICLES

Latest News