ಚೆನ್ನೈ,ಮೇ.13- ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದ ನಾಗಪಟ್ಟಿನಂ ಲೋಕಸಭಾ ಕ್ಷೇತ್ರದ ಸಂಸದ ಸೆಲ್ವರಾಜ್ (67) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂಲತಹ ತಿರುವರೂರ್ ಜಿಲ್ಲೆಯ ನೀದಮಂಗಳಮ್‌ನ ಕಪ್ಪಲುಡಯನ್ ಗ್ರಾಮದಲ್ಲಿ 1957ರ ಮಾರ್ಚ್ 16ರಂದು ಜನಿಸಿದ್ದ ಸೆಲ್ವರಾಜ್ ಅವರು ಶಾಲಾ ವಿದ್ಯಾಭ್ಯಾಸದ ವೇಲೆ ಬಾಲ್ಯದಲ್ಲೇ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಆಕರ್ಷಿತರಾಗಿದ್ದರು ನಂತರದ ದಿನದಲ್ಲಿ ಕಾಲೇಜಿನಲ್ಲಿ ಓದುವಾಗಲೇ ಭಾರತೀಯ ಕಮ್ಯೂನಿಸ್ಟ್ ಪಕ್ಷ ಸೇರಿದ್ದರು.
ಹಲವು ಹೋರಾಟದಲ್ಲಿ ಬಾಗಿಯಾಗಿ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾದರು.1989ರಲ್ಲಿ ನೆಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ನಾಗಪಟ್ಟಿನಂ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಕಮ್ಯುನಿಸ್ಟ್ ಪಕ್ಷದಿಂದ ಲೋಕಸಭಾ ಚುನಾವಣೆಗೆ 6 ಬಾರಿ ಸ್ಪರ್ಧಿಸಿರುವ ಸೆಲ್ವರಾಜ್, 3 ಬಾರಿ ಜಯ ಗಳಿಸಿದ್ದರು. ಭಾರತೀಯ ಕಮ್ಯೂನಿಸ್ಟ್ ಪಕ್ಷದ ರಾಷ್ಟ್ರೀಯ ಸದಸ್ಯನಾಗಿಯೂ ಇವರು ಕೆಲಸ ಮಾಡಿದ್ದಾರೆ.
ಇತ್ತೀಚೆಗೆ, ಉಸಿರಾಟದ ತೊಂದರೆ ಮತ್ತು ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ, ತಿರುವರೂರ್ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಇಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಚೆನ್ನೃನ ಮಿಯಾಟ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು (ಸೋಮವಾರ) ನಸುಕಿನ ಜಾವ ಅಂದಾಜು 2 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಹುಟ್ಟೂರು ನಾಗಪಟ್ಟಿನಂಗೆ ಪಾರ್ಥಿವ ಶರೀರವನ್ನು ರವಾನಿಸಲಾಗಿದೆ.ತಮಿಳು ನಾಡು ಸಿಎಂ ಸ್ಟಾಲಿನ್ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.