Saturday, July 27, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-05-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-05-2024)

ನಿತ್ಯ ನೀತಿ : ತಪ್ಪು ಎನ್ನುವುದು ಜೀವನದ ಒಂದು ಪುಟ ಮಾತ್ರ. ಸಂಬಂಧಗಳು ಎನ್ನುವುದು ಪೂರ್ತಿ ಪುಸ್ತಕ. ದಯವಿಟ್ಟು ಆ ಒಂದು ಪುಟಕ್ಕೋಸ್ಕರ ಪೂರ್ತಿ ಪುಸ್ತಕವನ್ನು ಕಳೆದುಕೊಳ್ಳಬೇಡಿ.

ಪಂಚಾಂಗ ಸೋಮವಾರ 13-05-2024
ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಪುನರ್ವಸು / ಯೋಗ: ಶೂಲ / ಕರಣ: ಕೌಲವ

ಸೂರ್ಯೋದಯ : ಬೆ.05.55
ಸೂರ್ಯಾಸ್ತ : 06.37
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಖರ್ಚು-ವೆಚ್ಚಗಳನ್ನು ನಿಯಂತ್ರಣದಲ್ಲಿ ಟ್ಟುಕೊಳ್ಳುವುದು ಅಗತ್ಯವಾಗಿರುತ್ತದೆ.
ವೃಷಭ: ಮನಸ್ತಾಪ ತಪ್ಪಿಸಲು ಸಹೋದರ ರೊಂದಿಗೆ ಜಾಣ್ಮೆಯಿಂದ ವ್ಯವಹರಿಸುವುದು ಒಳಿತು.
ಮಿಥುನ: ಕೆಟ್ಟ ಅಭ್ಯಾಸವೊಂದನ್ನು ಬಿಡದ ನಿಮಗೆ ಸಾರ್ವಜನಿಕರಿಂದ ಅವಮಾನವಾಗಲಿದೆ.

ಕಟಕ: ಹಿತಶತ್ರುಗಳಿಂದ ದೂರವಿದ್ದರೆ ಒಳಿತು.
ಸಿಂಹ: ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆ ಯಾಗುವ ಸಾಧ್ಯತೆಗಳಿವೆ.
ಕನ್ಯಾ: ನೀವು ಕಂಡ ಕನಸು ಗಳಿಗೆ ಹಿರಿಯರ ಬೆಂಬಲ ಸಿಗಲಿದೆ. ಮಕ್ಕಳಿಂದ ಸಂತೋಷ ಉಂಟಾಗುವುದು.

ತುಲಾ: ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರು ತ್ತದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಿರಿ.
ವೃಶ್ಚಿಕ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.
ಧನುಸ್ಸು: ಹಿರಿಯರ ಆಶೀರ್ವಾದ ಸದಾ ಕಾಲ ನಿಮ್ಮೊಂದಿಗಿರುತ್ತದೆ. ಉದ್ಯೋಗದಲ್ಲಿ ಲಾಭ ಸಿಗಲಿದೆ.

ಮಕರ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುತ್ತದೆ. ಹಣಕಾಸಿನ ಸಂಸ್ಥೆಯವರಿಗೆ ಆಧಿಕ ಒತ್ತಡ.
ಕುಂಭ: ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ.
ಮೀನ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.

RELATED ARTICLES

Latest News