Tuesday, May 28, 2024
Homeರಾಷ್ಟ್ರೀಯಕೇರಳ ಕರಾವಳಿಯಲ್ಲಿ ಮೀನುಗಾರಿಕೆ ದೋಣಿ ಮುಳುಗಿ ಇಬ್ಬರು ಸಾವು

ಕೇರಳ ಕರಾವಳಿಯಲ್ಲಿ ಮೀನುಗಾರಿಕೆ ದೋಣಿ ಮುಳುಗಿ ಇಬ್ಬರು ಸಾವು

ಮಲಪ್ಪುರಂ (ಕೇರಳ), ಮೇ 13-ಇಂದು ಮುಂಜಾನೆ ಕೇರಳ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಗೆ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ಅದು ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ.

ರಾಜ್ಯದ ಮೀನುಗಾರರು ಮೀನುಗಾರಿಕೆಗೆ ತೆರಳುತ್ತಿದ್ದಾಗ ತ್ರಿಶೂರ್‌ ಜಿಲ್ಲೆಯ ಮಣಕ್ಕಕಡವು ಕರಾವಳಿ ಪೊಲೀಸ್‌‍ ಠಾಣೆಯ ಮಿತಿಯಿಂದ 16 ನಾಟಿಕಲ್‌ ಮೈಲು ದೂರದಲ್ಲಿ ಈ ಅವಘಡ ಸಂಭವಿಸಿದೆ.

ಢಿಕ್ಕಿಯ ರಭಸಕ್ಕೆ ದೋಣಿ ಎರಡು ಭಾಗವಾಗಿ ನೀರಿನಲ್ಲಿ ಮುಳುಗಿದೆ. ಈ ದೋಣಿಯಲ್ಲಿ ಆರು ಮಂದಿ ಇದ್ದರು ಅದರಲ್ಲಿ ನಾಲ್ವರನ್ನು ಹಡಗಿನಲ್ಲಿದ್ದವರು ರಕ್ಷಿಸಿದ್ದಾರೆ. ಶೋಧ ಕಾರ್ಯಾಚರಣೆಯ ನಂತರ, ನಾಪತ್ತೆಯಾದ ಇಬ್ಬರು ಮೀನುಗಾರರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News