ಚೆನ್ನೈ, ಡಿ.6 (ಪಿಟಿಐ) – ಮೈಚಾಂಗ್ ಚಂಡಮಾರುತದಿಂದ ಉಂಟಾದ ಹಾನಿಗೆ ಸಂಬಂಧಿಸಿದಂತೆ ತಮಿಳುನಾಡು ಕೇಂದ್ರದಿಂದ 5,060 ಕೋಟಿ ರೂಪಾಯಿಗಳ ಮಧ್ಯಂತರ ಪರಿಹಾರವನ್ನು ಕೋರಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ. ಒಟ್ಟು ಹಾನಿಯನ್ನು ಅಂದಾಜಿಸಲು ಸಮೀಕ್ಷೆ ನಡೆಯುತ್ತಿದ್ದು, ವಿವರವಾದ ವರದಿಯನ್ನು ನಂತರ ಸಿದ್ಧಪಡಿಸಲಾಗುವುದು ಮತ್ತು ಹೆಚ್ಚುವರಿ ಹಣವನ್ನು ಕೋರಲಾಗುವುದು ಎಂದು ತಮಿಳುನಾಡು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.
5,060 ಕೋಟಿ ಮಧ್ಯಂತರ ಪರಿಹಾರ ನೀಡುವಂತೆ ಕೋರಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಡಿಎಂಕೆ ಸಂಸದ ಟಿಆರ್ ಬಾಲು ಅವರು ಪತ್ರವನ್ನು ಪ್ರಧಾನಿಗೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ತಮಿಳುನಾಡಿದ ಉತ್ತರ ಜಿಲ್ಲೆಗಳಾದ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್‍ಪೇಟ್‍ನಲ್ಲಿ ಚಂಡಮಾರುತದಿಂದ ಉಂಟಾದ ರಣ ಮಳೆಯಿಂದ ಉಂಟಾದ ಹಾನಿಯನ್ನು ಸ್ಟಾಲಿನ್ ಪತ್ರದಲ್ಲಿ ವಿವರಿಸಿದ್ದಾರೆ.
ಇಸ್ರೇಲ್ ಮಹಿಳೆಯರ ಮೇಲೆ ಹಮಾಸ್ ಉಗ್ರರ ಲೈಂಗಿಕ ಅಟ್ಟಹಾಸ : ಬಿಡೆನ್ ಖಂಡನೆ
ವಿಶೇಷವಾಗಿ, ಚೆನ್ನೈ ಕಾಪೆರ್ರೇಷನ್ ವ್ಯಾಪ್ತಿಯ ಪ್ರದೇಶಗಳಲ್ಲಿ ಹಾನಿ ತೀವ್ರವಾಗಿದೆ. ರಸ್ತೆಗಳು, ಸೇತುವೆಗಳು ಮತ್ತು ಸಾರ್ವಜನಿಕ ಕಟ್ಟಡಗಳಂತಹ ಮೂಲಸೌಕರ್ಯಗಳು ತೀವ್ರ ಹಾನಿಗೊಳಗಾಗಿವೆ. ಲಕ್ಷಗಟ್ಟಲೆ ಜನರ ಜೀವನೋಪಾಯಕ್ಕೆ ತೊಂದರೆಯಾಗಿದೆ.
ಇವುಗಳನ್ನು ವಿವರವಾಗಿ ವಿವರಿಸಿ, ಮುಖ್ಯಮಂತ್ರಿ ಸ್ಟಾಲಿನ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ, ವಿವಿಧ ಶೀರ್ಷಿಕೆಗಳ ಅಡಿಯಲ್ಲಿ 5,060 ಕೋಟಿ ರೂಪಾಯಿಗಳ ಮಧ್ಯಂತರ ಪರಿಹಾರವನ್ನು ಕೋರಿ ಎಂದು ಪ್ರಕಟಣೆ ತಿಳಿಸಿದೆ. ಹಾನಿ ಅಂದಾಜು ಮಾಡಲು ಕೇಂದ್ರ ತಂಡವನ್ನು ನಿಯೋಜಿಸುವಂತೆಯೂ ಸಿಎಂ ಕೋರಿದ್ದಾರೆ.