ಇಂದೋರ್, ಜು.11– ಇಲ್ಲಿನ ಕೇಂದ್ರ ಕಾರಾಗೃಹದ ಕೈದಿಗಳು ಶೀಘ್ರದಲ್ಲೇ ಜೈಲಿನ ಸ್ವಂತ ಅಡುಗೆಮನೆಯ ಜೊತೆಗೆ ಹೊರ ಪ್ರಪಂಚಕ್ಕೂ ಲಭ್ಯವಾಗುವಂತೆ ಮಸಾಲೆಗಳನ್ನು ತಯಾರಿಸಲಿದ್ದಾರೆ.
ಮಧ್ಯಪ್ರದೇಶದ ಜೈಲು ಮತ್ತು ತಿದ್ದುಪಡಿ ಸೇವೆಗಳ ಇಲಾಖೆಯ ಮಹಾನಿರ್ದೇಶಕ ಗೋವಿಂದ ಪ್ರತಾಪ್ ಸಿಂಗ್ ಅವರು ಗುರು ಪೂರ್ಣಿಮೆಯ ಸಂದರ್ಭದಲ್ಲಿ ಕೇಂದ್ರ ಕಾರಾಗೃಹದಲ್ಲಿ ಅಹಲ್ಯಾ ಮಸಾಲಾ ಉದ್ಯೋಗ ಕೇಂದ್ರವನ್ನು ಉದ್ಘಾಟಿಸಿ ಹೊಸ ಪ್ರಯೋಗಕ್ಕೆ ಚಾಲನೆ ನೀಡಿದ್ದಾರೆ.
ನಾವು ಇದನ್ನು ಪ್ರಾರಂಭಿಸಲು ಕಡಿಮೆ ಬಂಡವಾಳದಲ್ಲಿ ಅಗತ್ಯವಿರುವ ವಿವಿಧ ಕೈಗಾರಿಕೆಗಳಲ್ಲಿ ಕೈದಿಗಳಿಗೆ ತರಬೇತಿ ನೀಡುತ್ತಿದ್ದೇವೆ. ಜೈಲಿನಿಂದ ಬಿಡುಗಡೆಯಾದ ನಂತರ ಸ್ವಯಂ ಉದ್ಯೋಗವನ್ನು ಕಂಡುಕೊಳ್ಳುವಲ್ಲಿ ಇದು ಅವರಿಗೆ ಸಹಾಯಕವಾಗುತ್ತದೆ ಎಂದು ಅವರು ಹೇಳಿದರು.
ಜೈಲು ಸೂಪರಿಂಟೆಂಡೆಂಟ್ ಅಲ್ಕಾ ಸೋಂಕರ್ ಅವರು, ಮಾತನಾಡಿ, ಕೈದಿಗಳು ಸ್ವಯಂಚಾಲಿತ ಯಂತ್ರಗಳನ್ನು ಬಳಸಿಕೊಂಡು ಕೊತ್ತಂಬರಿ, ಅರಿಶಿನ, ಕಾಶ್ಮೀರಿ ಕೆಂಪು ಮೆಣಸಿನಕಾಯಿ ಮತ್ತು ಗರಂ ಮಸಾಲದಂತಹ ಮಸಾಲೆಗಳನ್ನು ತಯಾರಿಸುತ್ತಾರೆ ಎಂದು ಹೇಳಿದರು.
ಕೈದಿಗಳು ತಯಾರಿಸಿದ ಮಸಾಲೆಗಳನ್ನು ಇಂದೋರ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜೈಲುಗಳ ಅಡುಗೆ ಮನೆಗಳಲ್ಲಿ ಬಳಸಲಾಗುವುದು.ಕೇಂದ್ರ ಜೈಲಿನ ಹೊರಗಿನ ಮಾರಾಟ ಮಳಿಗೆಯಲ್ಲಿ 250 ಗ್ರಾಂ, 500 ಗ್ರಾಂ ಮತ್ತು 1ಕೆ.ಜಿ. ಪ್ಯಾಕೆಟ್‌ಗಳಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತದೆ ಎಂದು ಅವರು ಹೇಳಿದರು.
ಸರ್ಕಾರಿ ಹಾಸ್ಟೆಲ್‌ಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಿಗೆ ಮಸಾಲೆಗಳನ್ನು ಪೂರೈಸಲು ಜೈಲು ಇಲಾಖೆಗೆ ಅವಕಾಶ ನೀಡುವಂತೆ ಜಿಲ್ಲಾಡಳಿತವನ್ನು ವಿನಂತಿಸುವುದಾಗಿ ಸೋಂಕರ್ ಹೇಳಿದರು.
- ರಷ್ಯಾ ತೈಲ ಖರೀದಿ ನಿಲ್ಲಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ ; ಟ್ರಂಪ್
- ವರದಾನವಾಯಿತು ಶಕ್ತಿ ಯೋಜನೆ, ಶೇ.80 ರಷ್ಟು ಮಹಿಳಾ ಭಕ್ತರಿಂದಲೇ ಹಾಸನಾಂಬ ದರ್ಶನ
- ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸದಂತೆ ನಿಷೇಧಿಸಲು ಸಿಎಂಗೆ ಪ್ರಿಯಾಂಕ ಖರ್ಗೆ ಮತ್ತೊಂದು ಪತ್ರ
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-10-2025)
- ಬೆಂಗಳೂರಿನ ಮಹಿಳೆಯರೇ ಹುಷಾರ್ : 1 ರೂ. ಬಡ್ಡಿಗೆ ಲೋನ್ ಕೊಡುವುದಾಗಿ ಹಣ ದೋಚುತ್ತಿದೆ ಗ್ಯಾಂಗ್