Tuesday, January 7, 2025
Homeಕ್ರೀಡಾ ಸುದ್ದಿ | Sports2025ರಲ್ಲಿ ಟೀಮ್ ಇಂಡಿಯಾ ಮುಂದಿವೆ ಸಾಲು ಸಾಲು ಸವಾಲುಗಳು

2025ರಲ್ಲಿ ಟೀಮ್ ಇಂಡಿಯಾ ಮುಂದಿವೆ ಸಾಲು ಸಾಲು ಸವಾಲುಗಳು

Team India faces a series of challenges in 2025

ವಿಶ್ವ ಕ್ರಿಕೆಟ್‌ ನಲ್ಲಿ ತಮದೇ ಛಾಪು ಮೂಡಿಸಿರುವ ರೋಹಿತ್‌ ಶರ್ಮಾ ಸಾರಥ್ಯದ ಭಾರತ ತಂಡವು 2024ರಲ್ಲಿ ಸೋಲಿಗಿಂತ ಗೆಲುವಿನ ಸವಿಯನ್ನೇ ಹೆಚ್ಚಾಗಿ ಸವಿದಿದೆ. ಚುಟುಕು ವಿಶ್ವಕಪ್‌ ಮುಕುಟ ಗೆದ್ದು ಸಂಭ್ರಮಿಸಿದ್ದ ಆಟಗಾರರು, ಅದೇ ಸವಿಯನ್ನು ವರ್ಷದ ಕೊನೆಯಲ್ಲಿ ಅಭಿಮಾನಿಗಳಿಗೆ ನೀಡುವಲ್ಲಿ ಎಡವಿದೆ.

ನ್ಯೂಜಿಲ್ಯಾಂಡ್‌ ವಿರುದ್ಧ ಸರಣಿ ಸ್ವೀಪ್‌ (0-3) ಮುಖಭಂಗ ಅನಭವಿಸಿದ ಭಾರತ ತಂಡವು ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್‌ ನಲ್ಲಿ ನಡೆದ ಬಾರ್ಡರ್‌- ಗವಾಸ್ಕರ್‌ ಟೆಸ್ಟ್‌ ಸರಣಿಯ 4ನೇ ಪಂದ್ಯದಲ್ಲಿ 188 ರನ್‌ ಗಳ ಭಾರೀ ಅಂತರದ ಸೋಲು ಕಂಡಿದ್ದು, 2025ರ ಆರಂಭದಿಂದಲೂ ಸಾಲು ಸಾಲು ಸವಾಲು ಎದುರಾಗಲಿದೆ.

ಭಾರತ ತಂಡವು ಪ್ರಸಕ್ತ ವರ್ಷದ ಪಯಣವು ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆಯಲಿರುವ ಟೆಸ್ಟ್‌ ಪಂದ್ಯವನ್ನು ಗೆದ್ದು ಬಾರ್ಡರ್‌- ಗವಾಸ್ಕರ್‌ ಟೆಸ್ಟ್‌ ಸರಣಿಯನ್ನು ಸಮಬಲಗೊಳಿಸುವ ಸವಾಲಿನೊಂದಿಗೆ ಆರಂಭಗೊಳ್ಳಲಿದೆ. ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಐಸಿಸಿ ಆಯೋಜನೆಯ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ರೇಸ್‌‍ ನಲ್ಲಿ ಉಳಿದುಕೊಳ್ಳುವ ಅದೃಷ್ಟ ಪರೀಕ್ಷೆಯನ್ನು ನಡೆಸಿಕೊಳ್ಳಲಿದೆ.

ಇದೇ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್‌್ಸ ಟ್ರೋಫಿ ಗೆಲ್ಲುವುದು ಕೂಡ ಟೀಮ್‌ ಇಂಡಿಯಾಕ್ಕೆ ದೊಡ್ಡ ಸವಾಲಾಗಿದೆ. 2013ರ ಈ ಟ್ರೋಫಿಯನ್ನು ಗೆಲ್ಲಲು ಭಾರತ ತಂಡವು ಎದುರು ನೋಡುತ್ತಿದೆ. ಇದಕ್ಕೂ ಮುನ್ನ ರೋಹಿತ್‌ ಶರ್ಮಾ ಪಡೆ ಇಂಗ್ಲೆಂಡ್‌ ನ ಸವಾಲನ್ನು ಎದುರಿಸಲಿದೆ. ಅಲ್ಲದೆ ಏಷ್ಯಾ ಕಪ್‌ ಗೆಲ್ಲುವ ಅವಕಾಶವನ್ನು ಭಾರತ ತಂಡ ಹೊಂದಿದೆ.
2025ರಲ್ಲಿ ಭಾರತ ತಂಡವು ಐಸಿಸಿ ಮತ್ತು ಎಸಿಸಿ ಟೂರ್ನಿಗಳೂ ಸೇರಿದಂತೆ ಒಟ್ಟು 18 ಟ್ವೆಂಟಿ-20, 10 ಟೆಸ್ಟ್‌ ಮತ್ತು 12 ದ್ವಿಪಕ್ಷೀಯ ಏಕದಿನ ಸರಣಿಗಳನ್ನು ಗೆಲ್ಲುವ ಸವಾಲು ಎದುರಿಸಲಿದೆ.

2025ರಲ್ಲಿ ಭಾರತ ಪುರುಷ ತಂಡವು ಆಡುವ ಸಂಪೂರ್ಣ ಕ್ರಿಕೆಟ್‌ ಸರಣಿಗಳ ವಿವರಗಳು ಕೆಳಕಂಡಂತಿದೆ.

  • ಜನವರಿ 3-7 (ಸಿಡ್ನಿ) ಭಾರತ vs ಆಸ್ಟ್ರೇಲಿಯಾ, 5 ನೇ ಬಾರ್ಡರ್-ಗವಾಸ್ಕರ್‌ ಟ್ರೋಫಿ ಟೆಸ್ಟ್‌ .
    ಭಾರತ ವರ್ಸಸ್‌‍ ಇಂಗ್ಲೆಂಡ್‌ ಸರಣಿ:
    ಭಾರತ vs ಇಂಗ್ಲೆಂಡ್‌ (5 ಟ್ವೆಂಟಿ-20, 3 ಏಕದಿನ) ಜನವರಿ 22 ರಿಂದ -ೆಬ್ರವರಿ 12- 2025
    ಟ್ವೆಂಟಿ-20 ಸರಣಿ:
  • ಮೊದಲ ಟ್ವೆಂಟಿ-20: ಜನವರಿ 22-ಚೆನ್ನೈ
  • ಎರಡನೇ ಟ್ವೆಂಟಿ-20: ಜನವರಿ 25 -ಕೋಲ್ಕತ್ತಾ
  • ಮೂರನೇ ಟ್ವೆಂಟಿ-20: ಜನವರಿ 28-ರಾಜ್‌ಕೋಟ್‌
  • ನಾಲ್ಕನೇಟ್ವೆಂಟಿ-20: ಜನವರಿ 31- ಪುಣೆ
  • ಐದನೇ ಟ್ವೆಂಟಿ-20: ಫೆಬ್ರವರಿ 2-ಮುಂಬೈ
    ಏಕದಿ ಸರಣಿ:
  • ಮೊದಲ ಏಕದಿನ: ಫೆಬ್ರವರಿ 6-ನಾಗ್ಪುರ
  • ಎರಡನೇ ಏಕದಿನ : ಬ್ರವರಿ 9 -ಕಟಕ್‌
  • ಮೂರನೇ ಏಕದಿನ : ಫೆಬ್ರವರಿ 12-ಅಹಮದಾಬಾದ್‌
    ಚಾಂಪಿಯನ್ಸ್ ಟ್ರೋಫಿ – ಫೆಬ್ರವರಿ-ಮಾರ್ಚ್‌ 2025
  • ಭಾರತ vs ಬಾಂಗ್ಲಾದೇಶ: ಫೆಬ್ರವರಿ 20-ದುಬೈ
    *ಭಾರತ vs ಪಾಕಿಸ್ತಾನ: ಫೆಬ್ರವರಿ 23- ದುಬೈ
  • ಭಾರತ vs ನ್ಯೂಜಿಲೆಂಡ್‌: ಮಾರ್ಚ್‌ 2-ದುಬೈ
  • ಸೆಮಿೈನಲ್‌- ಅರ್ಹತೆ ಪಡೆದರೆ : ಮಾರ್ಚ್‌ 4 -ದುಬೈ
  • ಫೈನಲ್‌- ಅರ್ಹತೆ ಇದ್ದರೆ: ಮಾರ್ಚ್‌ 9 -ದುಬೈ
    ಇಂಗ್ಲೆಂಡ್‌ ಪ್ರವಾಸ (4ನೇ ಡಬ್ಲ್ಯುಟಿಸಿ ಆರಂಭ):
    ಭಾರತ vs ಇಂಗ್ಲೆಂಡ್‌ 5 ಟೆಸ್ಟ್ : ಜೂನ್‌-ಆಗಸ್ಟ್‌ 2025
  • ಮೊದಲ ಟೆಸ್ಟ್ : ಜೂನ್‌ 20-24-ಹೆಡಿಂಗ್ಲಿ
  • ಎರಡನೇ ಟೆಸ್ಟ್ : ಜುಲೈ 2-6-ಎಡ್ಜ್ ಬಾಸ್ಟನ್‌
  • ಮೂರನೇ ಟೆಸ್ಟ್ : ಜೂನ್‌ 10-14- ಲಾರ್ಡ್ಸ್
  • ನಾಲ್ಕನೇ ಟೆಸ್ಟ್ : ಜೂನ್‌ 23-27- ಮ್ಯಾಂಚೆಸ್ಟರ್‌
  • ಐದನೇ ಟೆಸ್ಟ್ : ಜುಲೈ 31-ಆಗಸ್ಟ್‌ 4-ಓವಲ್‌‍

ಇದೇ ಅಲ್ಲದೆ ಆಗಸ್ಟ್‌ ನಲ್ಲಿ ಟೀಮ್‌ ಇಂಡಿಯಾ ಮೂರು ಏಕದಿನ ಹಾಗೂ 3 ಟ್ವೆಂಟಿ-20 ಪಂದ್ಯಗಳ ಸರಣಿಯ ನಿಮಿತ್ತ ಬಾಂಗ್ಲಾದೇಶ ಪ್ರವಾಸ ಕೈಗೊಂಡರೆ, ತವರು ನೆಲದಲ್ಲಿ ವೆಸ್ಟ್‌ ಇಂಡೀಸ್‌‍ ವಿರುದ್ಧ ಅಕ್ಟೋಬರ್‌ ನಲ್ಲಿ 2 ಟೆಸ್ಟ್‌ ಪಂದ್ಯಗಳು ಆಯೋಜನೆಗೊಂಡಿವೆ. ಅಕ್ಟೋಬರ್‌ ಅಂತ್ಯ ಹಾಗೂ ನವೆಂಬರ್‌ ನ ಆರಂಭದಲ್ಲಿ ಟ್ವೆಂಟಿ-20 ಸ್ವರೂಪದ ಏಷ್ಯಾ ಕಪ್‌ ಟೂರ್ನಿ, ನವೆಂಬರ್‌ ನಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್‌ ಇಂಡಿಯಾ ಆಟಗಾರರು 3 ಏಕದಿನ ಹಾಗೂ 5 ಟ್ವೆಂಟಿ-20 ಪಂದ್ಯಗಳ ಸರಣಿಯನ್ನು ಆಡಿದರೆ, ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್‌ , 3 ಏಕದಿನ ಹಾಗೂ 5 ಟ್ವೆಂಟಿ-20 ಸರಣಿಯನ್ನು ಆಡುವ ಮೂಲಕ 2025ರ ಅಭಿಯಾನವನ್ನು ಮುಗಿಸಲಿರುವ ಭಾರತ ತಂಡವು ಸಾಕಷ್ಟು ಸರಣಿಗಳನ್ನು ಗೆದ್ದು ಸಂಭ್ರಮಿಸಲಿ.

RELATED ARTICLES

Latest News