ಪ್ಯಾರಿಸ್, ಆ.29- ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್‌ಗೆ ತಮ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಕ್ರಿಮಿನಲ್ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆಂದು ಫ್ರೆಂಚ್ ಅಧಿಕಾರಿಗಳು ಪ್ರಾಥಮಿಕ ಆರೋಪ ಹೊರಿಸಿ ಫ್ರಾನ್ಸ್ ತೊರೆಯದಂತೆ ನಿರ್ಬಂಧ ಹೇರಿದ್ದಾರೆ.
ವಾರಾಂತ್ಯದ ಬಂಧನದ ನಂತರ ಡುರೊವ್ ಅವರ ರಕ್ಷಣೆಗಾಗಿ ಸ್ಪೀಚ್ ವಕೀಲರು ವಾದಿಸುತ್ತಿದ್ದು , ಆನ್‌ಲೈನ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಯನ್ನು ನಡೆಸಲಾಗಿದೆ ಎಂದು ಪೋಲೀಸರು ಮಾಹಿತಿಯನ್ನು ಸರ್ಕಾರದ ಪರ ವಕೀಲರು ಮಂಡಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಇದರ ಬಗ್ಗೆ ಪ್ರಕರಣ ದಾಖಲಿಸಿ ವ್ಯಾಪಕ ತನಿಖೆಯ ನಡೆಸಲಾಗಿತ್ತು. ಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ಡುರೊವ್ ಅವರನ್ನುಕಳೆದ ಶನಿವಾರ ಬಂಧಿಸಲಾಯಿತು ಮತ್ತು ನಾಲ್ಕು ದಿನಗಳ ವಿಚಾರಣೆಯ ನಂತರ ಬಿಡುಗಡೆ ಮಾಡಲಾಗಿದೆ. ಜೊತೆಗೆ 5 ಮಿಲಿಯನ್ ಯುರೋ ಜಾಮೀನು ಬಾಂಡ್ ಪಾವತಿಸಲು ಮತ್ತು ವಾರಕ್ಕೆ ಎರಡು ಬಾರಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಆದೇಶಿಸಿದರು.
ಕಳೆದ ರಾತ್ರಿ ಪ್ರಾಥಮಿಕ ಆರೋಪಗಳನ್ನು ಸಲ್ಲಿಸಲಾಗಿದ್ದು, ಫ್ರೆಂಚ್ ಪ್ರಜೆಯೂ ಆಗಿರುವ ಡುರೊವ್ ವಿರುದ್ಧದ ಇನ್ನು ಮಕ್ಕಳ ಲೈಂಗಿಕ ದೌರ್ಜನ್ಯ ವಸ್ತು ಮತ್ತು ಮಾದಕವಸ್ತು ಕಳ್ಳ ಸಾಗಣೆಗಾಗಿ ಅವರ ಟೆಲಿಗ್ರಾಮ್ ಬಳಸಲಾಗುತ್ತಿದೆ ಎಂದು ದೂರಲಾಗಿದೆ. ಇದರ ನಡುವೆ ಕಾನೂನಿನ ಅಗತ್ಯವಿದ್ದಾಗ ತನಿಖಾಧಿಕಾರಿಗಳೊಂದಿಗೆ ಮಾಹಿತಿ ಅಥವಾ ದಾಖಲೆಗಳನ್ನು ಹಂಚಿಕೊಳ್ಳಲು ಟೆಲಿಗ್ರಾಮ್ ನಿರಾಕರಿಸಿದೆ.
ಸಂಘಟಿತ ಗುಂಪಿನಿಂದ ಅಕ್ರಮ ವಹಿವಾಟುಗಳನ್ನು ಅನುಮತಿಸಲು ಆನ್‌ಲೈನ್ ಪ್ಲಾಟ್‌ಫಾರ್ಮ್‌ಅನ್ನು ನಿರ್ವಹಿಸುವಲ್ಲಿ ತೊಡಕಾಗಿದೆ ಎಂಬುದಾಗಿ ಅವರ ವಿರುದ್ಧದ ಮೊದಲ ಪ್ರಾಥಮಿಕ ಆರೋಪವು 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 500,000 ಯೂರೋ ದಂಡಕ್ಕೆ ಕಾರಣವಾಗಬಹುದು ಎಂದು ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.