ಮಧುಗಿರಿ, ನ.22- ವಾಯು ವಿಹಾರ ಮಾಡುತ್ತಿದ್ದ ಪಟ್ಟಣದ ಶ್ರೀ ದಂಡಿಮಾರಮ ದೇವಾಲಯದ ಕಾವಲುಗಾರ ಲಗೇಜ್ ಗೂಡ್‌್ಸ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ಬೈಪಾಸ್ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಶಿವಣ್ಣ ಮೃತಪಟ್ಟ ದೇವಾಲಯದ ಕಾವಲುಗಾರ. ಇಂದು ಬೆಳಗ್ಗೆ ಬೈಪಾಸ್ ರಸ್ತೆಯಲ್ಲಿ ವಾಯು ವಿಹಾರ ಮಾಡುತ್ತಿದ್ದಾಗ ಲಗೇಜ್ ಆಟೋ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪ್ರತಿನಿತ್ಯ ವಾಯುವಿಹಾರ ಮಾಡುತ್ತಿದ್ದ ಈ ವ್ಯಕ್ತಿ ಎದುರಿನಿಂದ ಬಂದ ವಾಹನ ಡಿಕ್ಕಿ ಹೊಡೆದಿದ್ದು, ರಸ್ತೆಯೆಲ್ಲ ಮಂಜು ಆವರಿಸಿಕೊಂಡಿದ್ದ ಕಾರಣ ವಾಹನದ ಚಾಲಕನಿಗೆ ವ್ಯಕ್ತಿ ಕಂಡಿಲ್ಲವೆಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಇತ್ತೀಚೆಗೆ ಬೆಳಗಿನ ನಸುಕಿನ ವೇಳೆ ರಸ್ತೆಗಳಲ್ಲಿ ವಾಯುವಿಹಾರ ಮಾಡಬೇಡಿ ಎಂದು ವೈದ್ಯರು ಸಾಕಷ್ಟು ಸಲಹೆ ನೀಡಿದರೂ ಕೂಡ ಇದನ್ನು ನಿರ್ಲಕ್ಷಿಸಿದ್ದು, ಜೊತೆಗೆ ಬೈಪಾಸ್ ರಸ್ತೆಯಲ್ಲಿ ಚಿರತೆ ಮತ್ತು ಕರಡಿಗಳ ಕಾಟವೆಂದು ಗೊತ್ತಿದ್ದರೂ ಮಹಿಳೆಯರು, ವೃದ್ಧರು ವಾಯುವಿವಾರ ಮಾಡುತ್ತಿರುವುದರ ಬಗ್ಗೆ ಎಚ್ಚರ ವಹಿಸುವಂತೆ ಸಾರ್ವಜನಿಕರ ಮಾತನಾಡಿಕೊಳ್ಳುತ್ತಿದ್ದರು.
ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
