Friday, October 18, 2024
Homeರಾಷ್ಟ್ರೀಯ | Nationalಥಾಣೆ : 1.10 ಲಕ್ಷ ಲಂಚ ಪಡೆದ ಶಿಕ್ಷಣ ಸಂಸ್ಥೆ ನಿರ್ದೇಶಕ ಅರೆಸ್ಟ್

ಥಾಣೆ : 1.10 ಲಕ್ಷ ಲಂಚ ಪಡೆದ ಶಿಕ್ಷಣ ಸಂಸ್ಥೆ ನಿರ್ದೇಶಕ ಅರೆಸ್ಟ್

Thane educational institute director held for taking Rs 1.10 lakh bribe

ಥಾಣೆ,ಅ.15- ವಾರ್ಷಿಕ ಇನ್‌ಕ್ರಿಮೆಂಟ್ ಮರು ಪಾವತಿಗಾಗಿ ನೌಕರನಿಂದ 1.10 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪ್ರಸಿದ್ಧ ಶಿಕ್ಷಣ ಸಂಸ್ಥೆಯೊಂದರ ನಿರ್ದೇಶಕರನ್ನು ಭ್ರಷ್ಟಾಚಾರ ನಿಗ್ರಹ ದಳವು ಬಂಧಿಸಿದೆ.

ಶಹಾಪುರ ತಾಲೂಕಿನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಹಾಗೂ ಜಂಟಿ ಕಾರ್ಯದರ್ಶಿಯಾಗಿರುವ ಆರೋಪಿ ಹಣದ ಬೇಡಿಕೆ ಇಟ್ಟು ಸುಮಾರು ಎರಡು ವರ್ಷಗಳವರೆಗೆ ತಡೆಹಿಡಿದಿದ್ದ ಎಂದು ಎಸಿಬಿ ಉಪ ಪೊಲೀಸ್ ವರಿಷ್ಠಾಧಿಕಾರಿ ಧರ್ಮರಾಜ್ ಸೋಂಕೆ ತಿಳಿಸಿದ್ದಾರೆ.

ಕೊನೆಗೆ ನೌಕರ ಎಸಿಬಿಗೆ ದೂರು ನೀಡಿದ್ದರು.ಪರಿಶೀಲಿಸಿ ಕಾರ್ಯಾಚರಣೆಗೆ ಮುಂದಾಗಿ ಖಿನಾವಲಿ ಪ್ರದೇಶದ ಶಾಲೆಯೊಂದರ ಸಮೀಪ ಬಸ್ ನಿಲ್ದಾಣದಲ್ಲಿ ದೂರುದಾರರಿಂದ 1.10 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಆರೋಪಿಯನ್ನು ಎಸಿಬಿ ಬಲೆ ಬೀಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ಎಸಿಬಿ ತಿಳಿಸಿದೆ

RELATED ARTICLES

Latest News