Thursday, December 5, 2024
Homeರಾಷ್ಟ್ರೀಯ | Nationalನೌಕಾಪಡೆಯ ಅಧಿಕಾರಿಯ ಪತ್ನಿ ವಿರುದ್ಧ ಗೃಹ ಸಾಲ ವಂಚನೆ ಕೇಸ್

ನೌಕಾಪಡೆಯ ಅಧಿಕಾರಿಯ ಪತ್ನಿ ವಿರುದ್ಧ ಗೃಹ ಸಾಲ ವಂಚನೆ ಕೇಸ್

Naval Officer's wife, 2 others booked for home loan fraud in Maharashtra

ಥಾಣೆ, ಅ.15- ಗೃಹ ಸಾಲಕ್ಕೆ ಸಂಬಂದಿಸದಂತೆ ವಂಚನೆ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ನೌಕಾ ಅಧಿಕಾರಿಯ ಪತ್ನಿ ಮತ್ತು ಇತರ ಇಬ್ಬರ ವಿರುದ್ಧ ನವಿ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ವಂಚನೆಗೆ ಒಳಗಾದವರು ನೆರೆಯ ಮುಂಬೈನಲ್ಲಿ ನೆಲೆಸಿದ್ದು ಸುಮಾರು 40 ಲಕ್ಷ ಯಾಮಾರಿಸಿದ್ದ ಬಗ್ಗೆ ದೂರು ನೀಡಿದ್ದಾರೆ.

ತಾನು ರಷ್ಯಾದಲ್ಲಿ ಕರ್ತವ್ಯಯದಲ್ಲಿದ್ದಾಗ, ತನ್ನ ಪತ್ನಿಗೆ ಮಹಾರಾಷ್ಟ್ರದ ನವಿ ಮುಂಬೈ ಟೌನ್‌ಶಿಪ್‌ನಲ್ಲಿರುವ ಬ್ಯಾಂಕ್‌ನ ಅಧಿಕಾರಿಯಾಗಿ ಮತ್ತು ಇನ್ನೊಬ್ಬ ವ್ಯಕ್ತಿ ಅಪರಾಧಕ್ಕೆ ಸಹಕರಿಸಿದ್ದಾರೆ.

ಪುಣೆಯಲ್ಲಿ ಪ್ಲಾಟ್ ಖರೀದಿಸಲು ನನ್ನ ಪತ್ನಿಯೊಂದಿಗೆ ಜಂಟಿ ಸಾಲಕ್ಕಾಗಿ ಅವರು ಸಲ್ಲಿಸಿದ ಅರ್ಜಿಯಲ್ಲಿ ಆರೋಪಿಗಳು ಮೊಬೈಲ್ ಸಂಖ್ಯೆ ಮತ್ತು ನಕಲಿ ಇಮೇಲ್ ಐಡಿಯನ್ನು ಸೇರಿಸಿದ್ದಾರೆ ಎಂದು ದೂರನ್ನು ಉಲ್ಲೇಖಿಸಲಾಗಿದೆ ಎಂದು ಸಿಬಿಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಖಲೆಗಳಲ್ಲಿ ಮೂರನೇ ಆರೋಪಿಯ ಹೆಬ್ಬೆರಳಿನ ಗುರುತನ್ನು ಸಹ ಸೇರಿಸಿದ್ದಾರೆ. 40 ಲಕ್ಷ ರೂಪಾಯಿ ಗೃಹ ಸಾಲ ಪಡೆದು ನೇರವಾಗಿ ಬಿಲ್ಡರ್‌ಗೆ ಪಾವತಿಸಿ, ಸಂಪೂರ್ಣ ವಹಿವಾಟಿನ ಬಗ್ಗೆ ಕತ್ತಲಲ್ಲಿಟ್ಟರು ಈಗ ನಮಗೆ ಸಾಲ ವಿತರಣೆಯ ಬಗ್ಗೆ ಬ್ಯಾಂಕ್ ನೋಟಿಸ್ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಮೂವರು ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

RELATED ARTICLES

Latest News