ಥಾಣೆ, ಜ.9-ಸಹೋದರರ ನಡುವೆ ಕೇವಲ 500 ರೂಪಾಯಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲ್ಲಿ ನಡೆದಿದೆ. ಕಳೆದ ರಾತ್ರಿ ಕಲ್ಯಾಣ್ ಪ್ರದೇಶದಲ್ಲಿ ಅಣ್ಣ ತನ್ನ ಕಿರಿಯ ಸಹೋದರನನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆರೋಪಿ ಸಲೀಂ ಶಮೀಮ್ ಖಾನ್(32) ಅನುಮತಿಯಿಲ್ಲದೆ ತನ್ನ ಜೇಬಿನಿಂದ 500 ರೂಪಾಯಿಗಳನ್ನು ತೆಗೆದುಕೊಂಡಿದ್ದಕ್ಕಾಗಿ ಕಿರಿಯ ಸಹೋದರ ನಸೀಮ್ ಖಾನ್ (27) ಪ್ರಶ್ನಿಸಿದ್ದಾನೆ ಇದರಿಂದ ಇಬ್ಬರ ಮಧ್ಯ ಜಗಳ ನಡೆದಿದೆ. ವಾಗ್ವಾದ ಉಲ್ಬಣಗೊಂಡು ಆರೋಪಿ ತನ್ನ ಕಿರಿಯ ಸಹೋದರನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆಎಂದು ಬಜಾರ್‌ಪೇತ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದರು.
ಘಟನೆಯ ಬಗ್ಗೆ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ದಾವಿಸಿ ಆರೋಪಿಯನ್ನುಬಂಧಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.