Sunday, September 15, 2024
Homeಬೆಂಗಳೂರುವಿವಾಹಿತೆ ಹಿಂದೆ ಬಿದ್ದಿದ್ದ ಆಟೋ ಚಾಲಕನಿಗೆ ಇರಿತ

ವಿವಾಹಿತೆ ಹಿಂದೆ ಬಿದ್ದಿದ್ದ ಆಟೋ ಚಾಲಕನಿಗೆ ಇರಿತ

ಬೆಂಗಳೂರು,ಆ.21– ವಿವಾಹಿತೆಯ ಹಿಂದೆ ಬಿದ್ದಿದ್ದ ಆಟೋ ಚಾಲಕನ ಮೇಲೆ ಹಲ್ಲೆ ನಡೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಮೂವರಿಗಾಗಿ ಬ್ಯಾಟರಾಯನಪುರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹೊಸಗುಡ್ಡದಹಳ್ಳಿಯ ನಿವಾಸಿ, ಆಟೋ ಚಾಲಕ ಕಾರ್ತಿಕ ಎಂಬಾತ ಪಂತರಪಾಳ್ಯದ ನಿವಾಸಿ, 35 ವರ್ಷದ ವಿವಾಹಿತ ಮಹಿಳೆ ಹಿಂದೆ ಬಿದ್ದಿದ್ದ.

ಈ ಮಹಿಳೆಗೆ ಮದುವೆಯಾಗಿದ್ದು, ಮಕ್ಕಳು ಇದ್ದಾರೆ. ಆಕೆ ಎಲ್ಲೇ ಹೋದರೂ ಈತ ಮಾತನಾಡಿಸುತ್ತಿದ್ದನ್ನಲ್ಲದೆ ಮನೆಗೂ ಸಹ ಹೋಗಿಬಂದು ಮಾಡುತ್ತಿದ್ದನು. ಮಹಿಳೆಯ ಪತಿ ಹಾಗೂ ಆಕೆಯ ಸಹೋದರ ಇದನ್ನು ಗಮನಿಸಿ ಕಾರ್ತಿಕ್ಗೆ ಬುದ್ದಿವಾದ ಹೇಳಿದ್ದರೂ ಕಾರ್ತಿಕ್ ತನ್ನ ಚಾಳಿ ಬಿಟ್ಟಿರಲಿಲ್ಲ.

ಮೊನ್ನೆ ಕಾರ್ತಿಕ್ ಈ ಮಹಿಳೆ ಮನೆ ಬಳಿ ಬಂದಾಗ ಆಕೆಯ ಪತಿ, ಹಾಗೂ ಸಹೋದರ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಕಾರ್ತಿಕ್ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಹೊಟ್ಟೆ , ತಲೆಗೆ ಇರಿದು ಪರಾರಿಯಾಗಿದ್ದಾರೆ.

ಈ ಬಗ್ಗೆ ಕಾರ್ತಿಕ್ ಅವರ ಸಹೋದರ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಲ್ಲೆ ಮಾಡಿದ ಮೂವರಿಗಾಗಿ ಶೋಧ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಆಟೋ ಚಾಲಕ ಕಾರ್ತಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

RELATED ARTICLES

Latest News