Sunday, July 21, 2024
Homeಜಿಲ್ಲಾ ಸುದ್ದಿಗಳುರಾಯಚೂರು : ಮಠಕ್ಕೆ ನುಗ್ಗಿ ಸ್ವಾಮೀಜಿ ಬೆದರಿಸಿ ನಗ -ನಾಣ್ಯ ಲೂಟಿ

ರಾಯಚೂರು : ಮಠಕ್ಕೆ ನುಗ್ಗಿ ಸ್ವಾಮೀಜಿ ಬೆದರಿಸಿ ನಗ -ನಾಣ್ಯ ಲೂಟಿ

ರಾಯಚೂರು, ಜು.5- ಇಲ್ಲಿನ ಐತಿಹಾಸಿಕ ಶ್ರೀ ವಿಜಯ ಮಹಾಂತೇಶ್ವರ ಮಠಕ್ಕೆ ಮಧ್ಯರಾತ್ರಿ ಡಕಾಯಿತರ ಗುಂಪು ಭಕ್ತರ ಸೋಗಿನಲ್ಲಿ ನುಗ್ಗಿ ಸ್ವಾಮೀಜಿಗೆ ಬೆದರಿಕೆ ಹಾಕಿ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ.

ಸುಮಾರು 1.30ರ ಸಂದರ್ಭದಲ್ಲಿ ಮಠಕ್ಕೆ ಬಂದ ಎಂಟರಿಂದ ಹತ್ತು ಮಂದಿ ಡಕಾಯಿತರ ಗುಂಪು ನಿದ್ದೆಯಲ್ಲಿದ್ದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಎಬ್ಬಿಸಿ ಮಾರಕಾಸಗಳಿಂದ ಬೆದರಿಸಿದ್ದಾರೆ.

ನಂತರ ಮಠದಲ್ಲಿದ್ದ ಸುಮಾರು 80 ಗ್ರಾಂ ಚಿನ್ನ, 7 ಕೆಜಿ ಬೆಳ್ಳಿ ವಸ್ತುಗಳು, 20 ಲಕ್ಷ ನಗದು ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ.ಇಂದು ಬೆಳಗ್ಗೆ ಸ್ವಾಮೀಜಿ ಅವರು ನಗರ ಠಾಣೆಗೆ ದೂರು ನೀಡಿದ್ದು, ಇನ್್ಸಪೆಕ್ಟರ್ ಪುಂಡಲೀಕ ಪಟತ್ತರ ಮಠಕ್ಕೆ ಭೇಟಿ ನೀಡಿದ್ದಾರೆ.

ಈ ನಡುವೆ ಎಸ್ಪಿ ಹರೀಶ್ಬಾಬು, ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಸೇರಿದಂತೆ ಹಿರಿಯ ಅಽಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಸ್ವಾಮೀಜಿಗೆ ಧೈರ್ಯ ಹೇಳಿದ್ದು, ಪ್ರಕರಣ ದಾಖಲಿಸಿಕೊಂಡು ಡಕಾಯಿತರ ಪತ್ತೆಗೆ ಬಲೆ ಬೀಸಲಾಗಿದೆ.

RELATED ARTICLES

Latest News