Tuesday, April 30, 2024
Homeಬೆಂಗಳೂರುಇದು ಬೆಂಗಳೂರಿಗರಿಗೆ ಆಘಾತಕಾರಿ ಸುದ್ದಿ ..!

ಇದು ಬೆಂಗಳೂರಿಗರಿಗೆ ಆಘಾತಕಾರಿ ಸುದ್ದಿ ..!

ಬೆಂಗಳೂರು, ಮಾ.13-ನಗರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು ಎರಡು ತಿಂಗಳ ಅವಧಿಯಲ್ಲಿ ಅಪಘಾತದಿಂದ 174 ಮಂದಿ ಮೃತಪಟ್ಟಿದ್ದಾರೆಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಎಂ.ಎನ್. ಅನುಚೇತ್ ತಿಳಿಸಿದ್ದಾರೆ. ಕಳೆದ ವರ್ಷ 914 ಮಂದಿ ಅಪಘಾತದಿಂದ ಮೃತ ಪಟ್ಟಿದ್ದರೆ, ಈ ವರ್ಷ ಜನವರಿ-ಫೆಬ್ರವರಿ ತಿಂಗಳಲ್ಲಿ 174 ಮಂದಿ ಮೃತಪಟ್ಟಿದ್ದಾರೆಂದು ಅವರು ವಿವರಿಸಿದರು.

ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಮತ್ತು ಬಿಸಿಐಸಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಅವರು ಮಾತನಾಡುತ್ತಾ, ರಾಜಧಾನಿ ಬೆಂಗಳೂರಿನಲ್ಲಿ 1.4 ಕೋಟಿ ಜನಸಂಖ್ಯೆ ಇದ್ದು, 1 ಸಾವಿರ ಜನರ ಪೈಕಿ 827 ಮಂದಿಯ ಬಳಿ ವಾಹನಗಳಿವೆ. ಹಾಗಾಗಿ ದೇಶದಲ್ಲೇ ಅತಿಹೆಚ್ಚು ವಾಹನಗಳು ಬೆಂಗಳೂರಿನಲ್ಲಿವೆ ಎಂದರು.

ವಾಹನ ಚಾಲನೆ ವೇಳೆ ಅತಿ ವೇಗದಿಂದಾಗಿ ಶೇ.10ರಷ್ಟು ಸಾವುಗಳು ದೇವನಹಳ್ಳಿಯ ಎಲಿವೇಟೆಡ್ ಕಾರಿಡಾರ್‍ನಲ್ಲಿ ಸಂಭವಿಸಿದರೆ, ಇದರ ನಂತರ ಕೆಂಗೇರಿ ನೈಸ್ ರಸ್ತೆಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
ಕಳೆದ ವರ್ಷ 2023ರಲ್ಲಿ ಮೃತ ಪಟ್ಟ 914 ಮಂದಿ ಪೈಕಿ ದ್ವಿಚಕ್ರ ವಾಹನ ಸವಾರರು ಶೇ.74ರಷ್ಟಿದ್ದರೆ, ಪಾದಚಾರಿಗಳು ಶೇ.21ರಷ್ಟು ಮೃತಪಟ್ಟಿದ್ದಾರೆ. ಮೃತರ ಪೈಕಿ ಶೇ.60ರಷ್ಟು ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.

ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದೇ ಅಪಘಾತ ಹೆಚ್ಚಳಕ್ಕೆ ಕಾರಣವಾಗಿದೆ. ಸಂಚಾರ ನಿರ್ವಹಣೆಯನ್ನು ಹೆಚ್ಚಿಸಲು, ಅಪಘಾತಗಳನ್ನು ತಡೆಯಲು ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ನಗರದ ಪೊಲೀಸರು ಕೈಗೊಂಡಿರುವ ಕ್ರಮಗಳ ಕುರಿತು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಬೆಳಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ ಮೂರು ಗಂಟೆಗಳ ಅವಯಲ್ಲಿ 90 ಸಾವಿರಕ್ಕೂ ಅಕ ವಾಹನಗಳು ಹಾದು ಹೋಗುತ್ತವೆ. ಇದು ಜಾಗತಿಕವಾಗಿ ಅತ್ಯಕವಾಗಿದೆ. ಹೀಗಾಗಿ ಈ ಭಾಗದಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸಲು ನಕ್ಷೆ ಆಧಾರಿತ ಸೇವೆಗಳು, ಎಫ್‍ಎಂ ರೇಡಿಯೋ ಮತ್ತು ಸಾಮಾಜಿಕ ವೇದಿಕೆಗಳ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸುಧಾರಿತ ತಂತ್ರಜ್ಞಾನಗಳಾದ ಎಐ, ಬಿಡ್ ಡೇಟಾ, ಇಂಟರ್‍ನೆಟ್ ಆಫ್ ಥಿಂಗ್ಸ್, ಜಂಕ್ಷನ್‍ಗಳಲ್ಲಿ ಎಐ ಆಧಾರಿತ ಸಿಗ್ನಲ್‍ಗಳು, ಎಐ ಕ್ಯಾಮೆರಾ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಇವುಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ತಿಳಿಸಿದರು.

RELATED ARTICLES

Latest News