Friday, June 21, 2024
Homeಅಂತಾರಾಷ್ಟ್ರೀಯ82 ವರ್ಷ ಒಂದೇ ಕಾರು ಓಡಿಸಿದ ಅಲೆನ್ ಸ್ವಿಫ್ಟ್

82 ವರ್ಷ ಒಂದೇ ಕಾರು ಓಡಿಸಿದ ಅಲೆನ್ ಸ್ವಿಫ್ಟ್

ನೂರು ವರ್ಷ ಬದುಕುವುದೇ ಅಪರೂಪ ! ಅಂತಹುದರಲ್ಲಿ 102 ವರ್ಷ ಕಾಲ ಬದುಕಿ 82 ವರ್ಷಗಳ ಕಾಲ ಒಂದೇ ಕಾರನ್ನು ಚಲಾಯಿಸಿದ ಅಪರೂಪದ ದಾಖಲೆ ಬರೆದವರು ಅಲೆನ್ ಸ್ವಿಫ್ಟ್. 1988 ರಲ್ಲಿ ಜನಿಸಿ, 2010 ರಲ್ಲಿ ನಿಧನರಾದ ಅವರು, 1928 ರಲ್ಲಿ ತಮ್ಮ ತಂದೆ ಕೊಡುಗೆಯಾಗಿ ನೀಡಿದ ಕಾರನ್ನೇ ಕೊನೆತನಕ ಚಲಾಯಿಸಿ ವಿಸ್ಮಯಕರ ದಾಖಲೆ ಸ್ಥಾಪಿಸಿದ್ದಾರೆ.

ಈ ಕಾರು ಇಂದಿಗೂ ಸುಸ್ಥಿತಿಯಲ್ಲಿರುವುದು ವಿಶೇಷದಲ್ಲಿ ವಿಶೇಷ ಸರಿ. ಶ್ರೀ ಅಲೆನ್ ಸ್ವಿಫ್ಟ್ 1928 ರಲ್ಲಿ ಪದವೀಧರರಾದಾಗ ತಂದೆಯಿಂದ ರೋಲ್ಸ್‍ರಾಯ್ಸ್ ಪಿಕ್ಕಾಡಿಲ್ಲಿ -ಪಿ 1 ರೋಡ್‍ಸ್ಟರ್ ಕಾರನ್ನು ಕಾಣಿಕೆಯಾಗಿ ಸ್ವೀಕರಿಸಿದ್ದರು.2010 ರಲ್ಲಿ ತನ್ನ 102 ನೇ ವಯಸ್ಸಿನಲ್ಲಿ ಮರಣಿಸುವ ತನಕ ಸ್ವಿಫ್ಟ್ ಈ ಕಾರನ್ನೇ ಚಾಲನೆ ಮಾಡಿದ್ದರು. ಹೊಸದಾಗಿ ಖರೀದಿಸಿದ ಕಾರೊಂದರ ಅತ್ಯಂತ ಹಿರಿಯ ಮಾಲೀಕ ಅವರಾಗಿದ್ದರು.

ಸ್ವಿಫ್ಟ್‍ರ ನಿಧನದ ತರುವಾಯ, ಈ ಕಾರನ್ನು ಸ್ಪ್ರಿಂಗ್ ಫೀಲ್ಡ್ ಮ್ಯೂಸಿಯಂಗೆ ದಾನ ನೀಡಲಾಯಿತು. ಅಲ್ಲಿಯವರೆಗೆ ಇದು 1,070,000 ಮೈಲುಗಳಷ್ಟು ದೂರ ಚಲಿಸಿತ್ತು. ಇದು ಈಗಲೂ ಸ್ವಿಸ್ ಗಡಿಯಾರದಂತೆ ಚಲಿಸುತ್ತದೆ. ಎಷ್ಟೇ ವೇಗದಲ್ಲೂ ಹೆಚ್ಚು ಶಬ್ದ ಮಾಡುವುದಿಲ್ಲ.

ಪರಿಪೂರ್ಣವಾಗಿ ಹೊಸ ರೀತಿಯಂತೆ ಕಂಗೊಳಿಸುತ್ತಾ ಸುಂದರವಾಗಿದೆ, 82 ನೇ ವರ್ಷದಲ್ಲೂ.
ಇದು ಕ್ರಮಿಸಿರುವ ದೂರ ಅಂದಾಜು ವರ್ಷಕ್ಕೆ 13,047 ಮೈಲುಗಳು ತಿಂಗಳಿಗೆ 1,088 ಮೈಲುಗಳು, ಒಟ್ಟಾರೆ 1,070,000 ಮೈಲುಗಳ ಈ ಲೆಕ್ಕ ಬ್ರಿಟಿಷ್ ಎಂಜಿನಿಯರಿಂಗ್‍ನ ಕೌಶಲ್ಯ !

RELATED ARTICLES

Latest News