Thursday, December 12, 2024
Homeರಾಷ್ಟ್ರೀಯ | Nationalವಿಜಯದಶಮಿಯಂದು ಅಕ್ಷರ ದೀಕ್ಷೆ ಪಡೆದ ಸಾವಿರಾರು ಮಕ್ಕಳು

ವಿಜಯದಶಮಿಯಂದು ಅಕ್ಷರ ದೀಕ್ಷೆ ಪಡೆದ ಸಾವಿರಾರು ಮಕ್ಕಳು

Thousands of children enter the world of learning on Vijayadashami day

ತಿರುವನಂತಪುರಂ , ಅ. 13 (ಪಿಟಿಐ) – ಕೇರಳದಾದ್ಯಂತ ಇರುವ ದೇವಾಲಯಗಳಲ್ಲಿ ಸಾವಿರಾರು ಮಕ್ಕಳು ಅಕ್ಷರ ದೀಕ್ಷೆ ಪಡೆದು ಪುನೀತರಾದರು.ಕೇರಳದಾದ್ಯಂತ ವಿಜಯದಶಮಿಯಂದು ಮಕ್ಕಳ ವಿದ್ಯಾರಂಭ ಮಾಡುವುದು ವಾಡಿಕೆ ಅದರಂತೆ ನಿನ್ನೆ ರಾಜ್ಯದ ಹಲವಾರು ದೇವಾಲಯಗಳಲ್ಲಿ ನೂರಾರು ಮಕ್ಕಳು ವಿದ್ಯಾರಂಭ ದೀಕ್ಷೆ ಪಡೆದುಕೊಂಡರು.

ಸಂಪ್ರದಾಯಗಳ ಅನುಸಾರವಾಗಿ, ವಿದ್ವಾಂಸರು, ಲೇಖಕರು, ಶಿಕ್ಷಕರು, ಪುರೋಹಿತರು ಮತ್ತು ಸಮಾಜದ ಇತರ ಪ್ರಮುಖ ವ್ಯಕ್ತಿಗಳು ಸಾಮಾನ್ಯವಾಗಿ ಎರಡರಿಂದ ಮೂರು ವರ್ಷ ವಯಸ್ಸಿನ ಮಕ್ಕಳಿಗೆ ತಮ್ಮ ಕಲಿಕೆಯ ಮೊದಲ ಅಕ್ಷರಗಳನ್ನು ಹರಿ ಶ್ರೀ ಗಣಪತಯೇ ನಮಃ ಮಂತ್ರದಿಂದ ಪ್ರಾರಂಭಿಸಿ ದೇವಾಲಯಗಳಲ್ಲಿ ಬರೆಯುವಂತೆ ಮಾಡಿದರು.

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಇಲ್ಲಿನ ರಾಜಭವನದಲ್ಲಿ ಸಮಾರಂಭಕ್ಕೆ ವಿಸ್ತ್ರುತವಾದ ವ್ಯವಸ್ಥೆಗಳನ್ನು ಮಾಡಿದ ಅನೇಕ ಮಕ್ಕಳ ಅಕ್ಷರ ಲೋಕಕ್ಕೆ ಚಾಲನೆ ನೀಡಿದರು.

ವಿಜಯದಶಮಿಯಂದು ಜಗತ್ತಿನಾದ್ಯಂತ ಇರುವ ಕೇರಳೀಯರಿಗೆ ಹೃತ್ಪೂರ್ವಕ ಶುಭಾಶಯಗಳು. ತಮ್ಮ ವಿದ್ಯಾರಂಭವನ್ನು ಹೊಂದುತ್ತಿರುವ ಎಲ್ಲಾ ಮಕ್ಕಳಿಗೆ ನನ್ನ ಶುಭಾಶಯಗಳು. ವರ್ಣಮಾಲೆ ಮತ್ತು ಜ್ಞಾನದ ಜಗತ್ತಿನಲ್ಲಿ ದೀಕ್ಷೆ ಎಂದು ಖಾನ್ ಫೇ ಸ್‌ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ .

ಕೇರಳದ ದಿವಂಗತ ಸಿಎಂ ಮತ್ತು ಕಾಂಗ್ರೆಸ್ ವರಿಷ್ಠ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಕೂಡ ಇಲ್ಲಿನ ದೇವಸ್ಥಾನವೊಂದರಲ್ಲಿ ಮಕ್ಕಳನ್ನು ಅಕ್ಷರ ಲೋಕಕ್ಕೆ ಸೇರಿಸುತ್ತಿರುವ ದೃಶ್ಯ ಕಂಡುಬಂದಿದೆ. ರಾಜ್ಯ ಸಾಮಾನ್ಯ ಶಿಕ್ಷಣ ಸಚಿವ ವಿ.ಶಿವನಕುಟ್ಟಿ ಅವರು ತಮ್ಮ ಮನೆಯಲ್ಲಿ ಮಕ್ಕಳನ್ನು ಅಕ್ಷರ ಲೋಕಕ್ಕೆ ಪರಿಚಯಿಸಿದರು.

ಸಮಾರಂಭದಲ್ಲಿ ಪಾಲ್ಗೊಳ್ಳಲು ಮುಂಜಾನೆಯೇ ಪೋಷಕರು ತಮ್ಮ ಪುಟ್ಟ ಪುಟ್ಟ ಮಕ್ಕಳೊಂದಿಗೆ ದೇವಸ್ಥಾನಗಳಿಗೆ ಆಗಮಿಸಿದರು, ಅದರ ಭಾಗವಾಗಿ ಮಕ್ಕಳಿಗೆ ಅಕ್ಕಿ ತುಂಬಿದ ತಟ್ಟೆಗಳಲ್ಲಿ ಹರಿಶ್ರೀ ಎಂದು ಬರೆಯಲು ಸಹಾಯ ಮಾಡಲಾಗುತ್ತದೆ ಅಥವಾ ಚಿನ್ನದ ಉಂಗುರದಿಂದ ಮಗುವಿನ ನಾಲಿಗೆಗೆ ಗೀಚಲಾಗುತ್ತದೆ.

RELATED ARTICLES

Latest News