ಬೆಂಗಳೂರು,ಮಾ.29- ನಗರದ ಹೋಟೆಲ್ಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರನ್ನು ಈಶಾನ್ಯ ವಿಭಾಗದ ಮಹಿಳಾ ಠಾಣೆ ಪೂಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 13 ಮೊಬೈಲ್ ಫೋನ್ಗಳು, 1 ಆಕ್ಟೀವಾ ಸ್ಕೂಟರ್, ಟಯೋಟಾ ಇಟಿಯಾಸ್ ಕಾರು ಹಾಗೂ 30 ಸಾವಿರ ಹಣ ವಶಪಡಿಸಿಕೊಳ್ಳಲಾಗಿದೆ.
ಅಮೃತಹಳ್ಳಿ ಪೂಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೂಲೀಸರು ಗಸ್ತಿನಲ್ಲಿದ್ದಾಗ ವೇಶ್ಯಾವಾಟಿಕೆ ಬಗ್ಗೆ ಮಾಹಿತಿ ಲಭಿಸಿದೆ. ಆರೋಪಿಗಳು ಮೊಬೈಲ್ ವೆಬ್ಸೈಟ್ಗಳನ್ನು ಬಳಸಿಕೊಂಡು ಸಾರ್ವಜನಿಕವಾಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಾ ಅಕ್ರಮ ದಂಧೆ ನಡೆಸುತ್ತಾ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿರುವುದನ್ನು ಪೂಲೀಸರು ಖಚಿತಪಡಿಸಿಕೊಂಡರು.
ಈ ಆಧಾರದ ಮೇಲೆ ನಗರದ ಹಲವು ಹೋಟೆಲ್ಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿರುವ ಕುರಿತಂತೆ ಮಾಹಿತಿ ಕಲೆಹಾಕಿ ಕೋರಮಂಗಲ, ಮಡಿವಾಳ ಹಾಗೂ ಇತರ ಪ್ರದೇಶಗಳಲ್ಲಿ ದಾಳಿ ಮಾಡಿ ಮೂವರನ್ನು ಬಂಧಿಸಿ ಮೂವರು ಮಹಿಳೆಯರನ್ನ ರಕ್ಷಿಸಿದ್ದಾರೆ.
ಈಶಾನ್ಯ ವಿಭಾಗದ ಉಪಪೂಲೀಸ್ ಆಯುಕ್ತರಾದ ಲಕ್ಷ್ಮಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಈ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.