Wednesday, February 12, 2025
Homeಬೆಂಗಳೂರುಎಟಿಎಂನಿಂದ ಹಣ ಕಳ್ಳತನ ಆಂಧ್ರದ ಮೂವರ ಬಂಧನ

ಎಟಿಎಂನಿಂದ ಹಣ ಕಳ್ಳತನ ಆಂಧ್ರದ ಮೂವರ ಬಂಧನ

ಬೆಂಗಳೂರು, ಜೂ.7- ಹಳೆ ಉದ್ಯೋಗಿಗಳ ಸಹಾಯದಿಂದ ಪಾಸ್‌‍ವರ್ಡ್‌ ತಿಳಿದುಕೊಂಡು ಎಟಿಎಂನಿಂದ ಹಣ ಕಳ್ಳತನ ಮಾಡಿದ್ದ ಆಂಧ್ರ ಪ್ರದೇಶ ಮೂಲದ ಮೂವರನ್ನು ವಿವೇಕಾನಂದ ಠಾಣೆ ಪೊಲೀಸರು ಬಂಧಿಸಿ 20.12 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.ಮುರಳಿ, ಸಾಯಿತೇಜ ಮತ್ತು ವೆಂಕಟೇಶ್‌ ಬಂಧಿತ ಆರೋಪಿಗಳು.

ವಿಕ್ಟೋರಿಯಾ ಲೇಔಟ್‌ನ ಆಕ್ಸಿಸ್‌‍ ಬ್ಯಾಂಕ್‌ನ ಎಟಿಎಂ ಮತ್ತು ಸಿಡಿಎಂ ಯಂತ್ರದಿಂದ 20 ಲಕ್ಷ ಹಣ ಕಳ್ಳತನವಾಗಿರುವ ಬಗ್ಗೆ ಬ್ರ್ಯಾಂಚ್‌ ಮ್ಯಾನೇಜರ್‌ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಮುರಳಿ ಮತ್ತು ಸಾಯಿತೇಜನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ವೆಂಕಟೇಶ್‌ನ ಬಗ್ಗೆ ಬಾಯಿಬಿಟ್ಟಿದ್ದಾರೆ.

ಆರೋಪಿ ಮುರಳಿ ಈ ಹಿಂದೆ ಎಟಿಎಂಗಳಿಗೆ ಹಣ ತುಂಬುವ ಏಜೆನ್ಸಿಯಲ್ಲಿ ಹಳೆ ಉದ್ಯೋಗಿಯಾಗಿದ್ದು, ಈ ಹಿಂದೆ ತನ್ನೊಂದಿಗೆ ಕೆಲಸ ನಿರ್ವಹಿಸುತ್ತಿದ್ದ ಹಾಗೂ ಹಾಲಿ ಮಾಡುತ್ತಿರುವ ವೆಂಕಟೇಶ್‌ ಪಾಸ್‌‍ವರ್ಡ್‌ಗಳನ್ನು ನೀಡಿದ್ದು, ಆದರ ಸಹಾಯದಿಂದ ಸಾಯಿತೇಜನೊಂದಿಗೆ ಸೇರಿಕೊಂಡು ಹಣ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಇದೀಗ ಈ ಮೂವರನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News