Home ಇದೀಗ ಬಂದ ಸುದ್ದಿ ಉಕ್ಕಿ ಹರಿದ ನದಿ, ಮೂವರು ನಾಪತ್ತೆ

ಉಕ್ಕಿ ಹರಿದ ನದಿ, ಮೂವರು ನಾಪತ್ತೆ

0
ಉಕ್ಕಿ ಹರಿದ ನದಿ, ಮೂವರು ನಾಪತ್ತೆ

ಲತೇಹರ್‌,ಆ. 12- ಜಾರ್ಖಂಡ್‌ನ ಲತೇಹಾರ್‌ ಜಿಲ್ಲೆಯಲ್ಲಿ ನದಿ ದಾಟುತ್ತಿದ್ದ ಮೂವರು ನೀರಿನ ರಭಸಕ್ಕೆ ಕೊಚ್ಚಿಹೋದ ಘಟನೆ ಕಳೆದ ರಾತ್ರಿ ನಡೆದಿದೆ.ಬಾಳುಮಠ ಪೊಲೀಸ್‌‍ ಠಾಣೆ ವ್ಯಾಪ್ತಿಯ ಬಿಸಾನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಇದರಲ್ಲಿ ಇಬ್ಬರು ಮಹಿಳೆಯರು ಮತ್ತು 12 ವರ್ಷದ ಬಾಲಕ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ರಕ್ಷಣೆ ಪ್ರಯತ್ನಗಳ ಹೊರತಾಗಿಯೂ, ಕತ್ತಲೆಯಿಂದಾಗಿ ಮೂವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಇನ್ಸ್ ಪೆಕ್ಟರ್‌ ವಿಕ್ರಾಂತ್‌ ಉಪಾಧ್ಯಾಯ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಮತ್ತೆ ಶೋಧ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು. ಬಿಶನ್‌ಪುರ ಗ್ರಾಮದ ಏಳು ಮಂದಿ ಬಲ್ಬಲ್‌ ಅರಣ್ಯದಲ್ಲಿ ಮೇಕೆ ಮೇಯಿಸಲು ಹೋಗಿದ್ದರು ಎಂದು ಸ್ಥಳೀಯ ನಿವಾಸಿ ಜಗನ್ನಾಥ್‌ ಸಾಹು ತಿಳಿಸಿದ್ದಾರೆ.

ಮನೆಗೆ ವಾಪಸಾಗುವಾಗ ನೀರಿನ ಪ್ರಮಾಣ ಕಡಿಮೆಯಾದ ಕಾರಣ ಕಾಲ್ನಡಿಗೆಯಲ್ಲಿ ಬಲ್ಬಾಲ್‌ ನದಿ ದಾಟಲು ಆರಂಭಿಸಿದರು ಆದರೆ ಏಕಾಏಕಿ ನೀರಿನ ಹರಿವು ಹೆಚ್ಚಾಗಿದ್ದು, ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಅವರು ಹೇಳಿದರು.