Monday, September 16, 2024
Homeರಾಷ್ಟ್ರೀಯ | Nationalಬಿಹಾರದ ಸಿದ್ಧೇಶ್ವರ ನಾಥ ದೇವಸ್ಥಾನದ ಕಾಲ್ತುಳಿತ, 7 ಭಕ್ತರ ಸಾವು, 16 ಮಂದಿ ಗಾಯ

ಬಿಹಾರದ ಸಿದ್ಧೇಶ್ವರ ನಾಥ ದೇವಸ್ಥಾನದ ಕಾಲ್ತುಳಿತ, 7 ಭಕ್ತರ ಸಾವು, 16 ಮಂದಿ ಗಾಯ

ಜೆಹಾನಾಬಾದ್‌ (ಬಿಹಾರ), ಆ.12: ಬಿಹಾರದ ಜೆಹಾನಾಬಾದ್‌ ಜಿಲ್ಲೆಯ ಬಾಬಾ ಸಿದ್ಧೇಶ್ವರ ನಾಥ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 16 ಮಂದಿ ಗಾಯಗೊಂಡಿದ್ದಾರೆ.

ಕಳೆದ ರಾತ್ರಿ 11.30 ರ ಸುಮಾರಿಗೆ ಜೆಹಾನಾಬಾದ್‌ನ ಬರಾಬರ್‌ ಪಹಾಡಿ ಪ್ರದೇಶದ ಬಾಬಾ ಸಿದ್ದೇಶ್ವರ ನಾಥ ದೇವಸ್ಥಾನದಲ್ಲಿ ಈ ಘಟನೆ ನೆಡೆದಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಲಂಕೃತಾ ಪಾಂಡೆ ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಎಲ್ಲಾ ಗಾಯಾಳುಗಳನ್ನು ಮುಕುಂದಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುಗಳಲ್ಲಿ ಪ್ರಸ್ತುತ 10 ಮಂದಿ ಪ್ರಥಮ ಚಿಕಿತ್ಸೆನಂತರ ಬಿಡುಗಡೆಗೊಂಡರೆ, ಏಳು ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ .ವಿಪರೀತ ದಟ್ಟಣೆಯಿಂದಾಗಿ ದುರಂತ ಸಂಭವಿಸಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ಹೇಳಿದರು.

ಜಿಲ್ಲಾಡಳಿತ ಮತ್ತು ಪೊಲೀಸರು ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದಾರೆ. ಕೆಲವು ವಿಷಯಕ್ಕೆ ಸಂಬಂಧಿಸಿದಂತೆ ಕನ್ವಾರಿಯಾಗಳ ನಡುವಿನ ವಿವಾದವು ಕಾಲ್ತುಳಿತಕ್ಕೆ ಕಾರಣವಾಯಿತು. ಕೆಲವು ಸ್ಥಳೀಯರು ದೇವಾಲಯದ ಹೊರಗೆ ಕನ್ವರಿಯಾಗಳು ಮತ್ತು ಹೂವು ಮಾರಾಟಗಾರರ ನಡುವೆ ನಡೆದ ತೀವ್ರ ವಾಗ್ವಾದ ಘಟನೆಯು ನಡೆದಿದೆ. ಆದರೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ,ತನಿಖೆಗೆ ಆದೇಶಿಸಲಾಗಿದೆ ಎಂದರು.

ಘಟನೆಯಲ್ಲಿ ಮೃತಪಟ್ಟ ಭಕ್ತರನ್ನು ಗುರುತಿಸಲು ಪ್ರಯತ್ನಿಸಲಾಗಿದೆ ಮೃತರ ಕುಟುಂಬಗಳಿಗೆ ಅವರ ಅಂತಿಮ ಸಂಸ್ಕಾರಕ್ಕಾಗಿ ತಲಾ 20 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲು ಆಡಳಿತ ನಿರ್ಧರಿಸಿದೆ. ನಂತರ ನಿಯಮಗಳ ಪ್ರಕಾರ ಹೆಚ್ಚುವರಿ ಪರಿಹಾರವನ್ನು ನೀಡಲಾಗುತ್ತದೆ ಹೇಳಿದರು.

ಹಿಂದೂಗಳ ಪವಿತ್ರಶ್ರಾವಣ ಮಾಸದಲ್ಲಿ ನಡೆಯುವ ಕನ್ವರ್‌ ಯಾತ್ರೆಯ ಸಮಯದಲ್ಲಿ, ಯಾತ್ರಾರ್ಥಿಗಳು ದೇವಾಲಯಗಳಲ್ಲಿ ಶಿವಲಿಂಗಗಳ ಮೇಲೆ ಸುರಿಯಲು ಗಂಗಾ ನೀರು ಒಯ್ಯುತ್ತಾರೆ. ಈ ತೀರ್ಥಯಾತ್ರೆಯನ್ನು ಪೂರ್ಣಗೊಳಿಸಲು ಅವರು ಕಾಲ್ನಡಿಗೆಯಲ್ಲಿ ಅಥವಾ ವಾಹನದಲ್ಲಿ ಬಹಳ ದೂರ ಪ್ರಯಾಣಿಸುತ್ತಾರೆ.

RELATED ARTICLES

Latest News