Thursday, July 31, 2025
Homeಬೆಂಗಳೂರುಮೂವರು ಮನೆಗಳ್ಳರ ಬಂಧನ, 78.5 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಮೂವರು ಮನೆಗಳ್ಳರ ಬಂಧನ, 78.5 ಲಕ್ಷ ಮೌಲ್ಯದ ಚಿನ್ನಾಭರಣ ವಶ

Three house robbers arrested, gold ornaments worth Rs 78.5 lakh seized

ಬೆಂಗಳೂರು,ಜು.29- ಮನೆಯೊಂದರ ಮುಂಬಾಗಿಲಿನ ಬೀಗ ಒಡೆದು ಒಳನುಗ್ಗಿ ಹಣ, ಆಭರಣ ಕಳವು ಮಾಡಿ ಪರಾರಿಯಾಗಿದ್ದ, ಮೂವರು ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ 78.50 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ, ಆಭರಣ ವಶಪಡಿಸಿ ಕೊಂಡಿದ್ದಾರೆ. ಬೆಂಗಳೂರು ನಗರದ ನಿವಾಸಿಗಳಾದ ಮಿಥುನ್‌ (24), ರಘು (25),ಮತ್ತು ಜೈದೀಪ್‌ ಬಂಧಿತ ಆರೋಪಿಗಳು.

ಜಯನಗರ 5ನೇ ಬ್ಲಾಕ್‌ನ ನಿವಾಸಿಯೊಬ್ಬರು ಮಗನನ್ನು ಏರ್‌ಪೋರ್ಟ್‌ಗೆ ಬಿಟ್ಟು ಬರಲು ಹೋಗಿದ್ದಾಗ ಇತ್ತ ಕಳ್ಳರು ಇವರ ಮನೆಯ ಬೀಗ ಒಡೆದು ಒಳನುಗ್ಗಿ 1ಕೋಟಿ ರೂ. ಬೆಲೆ ಬಾಳುವ 1.5ಕೆಜಿ ಚಿನ್ನಾಭರಣ, ಬೆಳ್ಳಿ ವಸ್ತುಗಳು, 3 ಲಕ್ಷ ರೂ. ಬೆಲೆಯ ರೊಲೆಕ್‌್ಸ ವಾಚ್‌ ಹಾಗೂ 50 ಸಾವಿರ ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಏರ್‌ಪೋರ್ಟ್‌ನಿಂದ ವಾಪಸ್‌‍ ಆದಾಗ ಮನೆಯಲ್ಲಿ ಕಳ್ಳತನವಾಗಿರುವುದು ಕಂಡು ಬಂದಿದೆ. ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ತಲಘಟ್ಟಪುರದ ತುರಹಳ್ಳಿ ಫಾರೆಸ್ಟ್‌ನ ಖಾಲಿ ಜಾಗದಲ್ಲಿ ಮೂವರನ್ನು ಚಿನ್ನಾಭರಣಗಳ ಸಮೇತ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮನೆಗಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳಿಂದ 1 ಕೆಜಿ 35 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿ 1 ದ್ವಿಚಕ್ರವಾಹನ ಹಾಗೂ ಸ್ನೇಹಿತನಿಗೆ ನೀಡಿದ್ದ 50 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ ಪೆಕ್ಟರ್‌ ದೀಪಕ್‌ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

RELATED ARTICLES

Latest News