No menu items!
Monday, September 16, 2024
No menu items!
Homeಜಿಲ್ಲಾ ಸುದ್ದಿಗಳು | District Newsಹೇಮಾವತಿ ಕಾಲುವೆಗೆ ಹಾರಿ ಒಂದೇ ಕುಟುಂಬದ ಮೂವರ ಆತಹತ್ಯೆ

ಹೇಮಾವತಿ ಕಾಲುವೆಗೆ ಹಾರಿ ಒಂದೇ ಕುಟುಂಬದ ಮೂವರ ಆತಹತ್ಯೆ

ಹಾಸನ, ಆ.15- ಸಾಲ ಬಾಧೆಯಿಂದ ಮನನೊಂದು ಒಂದೇ ಕುಟುಂಬದ ಮೂವರು ಹೇಮಾವತಿ ಕಾಲುವೆಗೆ ಹಾರಿ ಆತಹತ್ಯೆಗೆ ಶರಣಾಗಿರುವ ದಾರುಣ ಘಟನೆ ನುಗ್ಗೇಹಳ್ಳಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೆರೆ ಬೀದಿ ನಿವಾಸಿಗಳಾದ ಶ್ರೀನಿವಾಸ(43) ಇವರ ಪತ್ನಿ ಶ್ವೇತಾ(36) ಪುತ್ರಿ ನಾಗಶ್ರೀ(13) ಸಾವನ್ನಪ್ಪಿರುವವರು.

ಶ್ರೀನಿವಾಸ್‌‍ ಅವರು ಕಾರು ಚಾಲನಾ ವೃತ್ತಿ ಮಾಡುತ್ತಿದ್ದರೆ, ಶ್ವೇತಾ ಅವರು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪುತ್ರಿ ನಾಗಶ್ರೀ ವ್ಯಾಸಂಗ ಮಾಡುತ್ತಿದ್ದಳು.ಇತ್ತೀಚೆಗೆ ಶ್ರೀನಿವಾಸ್‌‍ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಮನನೊಂದಿದ್ದ ಕುಟುಂಬ ಆತಹತ್ಯೆಗೆ ನಿರ್ಧರಿಸಿದೆ.

ಮೊನ್ನೆ(ಆ.13) ಈ ಮೂವರೂ ಏಕಾಏಕಿ ನಾಪತ್ತೆಯಾಗಿದ್ದರು. ಸಂಬಂಧಿಕರು ಹಲವು ಬಾರಿ ಮೊಬೈಲ್‌ ಕರೆ ಮಾಡಿದ್ದರೂ ಸ್ವೀಕರಿಸಲಿಲ್ಲ. ಹಾಗಾಗಿ ಗಾಬರಿಗೊಂಡು ಚನ್ನರಾಯಪಟ್ಟಣ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಶೋಧ ನಡೆಸುತ್ತಿದ್ದರು. ಈ ನಡುವೆ ನಿನ್ನೆ ಸಂಜೆ ಬಾಗೂರು ಹೋಬಳಿಯ ಮುದ್ದಾಪುರ ಬಳಿ ನಾಲೆಯಲ್ಲಿ ಶ್ರೀನಿವಾಸ್‌‍ ಹಾಗೂ ಶ್ವೇತಾ ಮೃತದೇಹ ಪತ್ತೆಯಾಗಿದೆ.

ಸುದ್ದಿ ತಿಳಿದು ನುಗ್ಗೇಹಳ್ಳಿ ಠಾಣೆ ಪೊಲೀಸರು ಈ ಮೂವರು ಸಾವಿಗೆ ಕಾರಣವೇನೆಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶ್ರೀನಿವಾಸ್‌‍ ಮನೆಯಲ್ಲಿ ಏನಾದರೂ ಡೆತ್‌ನೋಟ್‌ ಬರೆದಿಟ್ಟಿದ್ದಾರೆಯೇ ಎಂಬ ಬಗ್ಗೆಯೂ ಶೋಧ ನಡೆಸುತ್ತಿದ್ದಾರೆ.

RELATED ARTICLES

Latest News