Friday, December 1, 2023
Homeರಾಜ್ಯಹುಲಿ ಉಗುರಿನ ವಿಚಾರದಲ್ಲಿ ಎಲ್ಲರ ವಿರುದ್ಧವೂ ಕ್ರಮ ಜರುಗಿಸುತ್ತೇವೆ : ಖಂಡ್ರೆ

ಹುಲಿ ಉಗುರಿನ ವಿಚಾರದಲ್ಲಿ ಎಲ್ಲರ ವಿರುದ್ಧವೂ ಕ್ರಮ ಜರುಗಿಸುತ್ತೇವೆ : ಖಂಡ್ರೆ

ಕಲ್ಬುರ್ಗಿ,ಅ.25- ವನ್ಯಜೀವಿ ಸಂರಕ್ಷಣಾ ಕಾಯ್ದೆ ಎಲ್ಲರಿಗೂ ಒಂದೇ ಆಗಿದ್ದು, ಪ್ರಭಾವಿಗಳಿರಲಿ, ಜನಸಾಮಾನ್ಯರಿರಲಿ ಎಲ್ಲರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಂರಕ್ಷಣಾ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಕಲ್ಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1972 ರಲ್ಲಿ ಜಾರಿಗೆ ಬಂದಿರುವ ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ 2002 ರಲ್ಲಿ ಮತ್ತು 2022 ರಲ್ಲಿ ತಿದ್ದುಪಡಿಗಳಾಗಿವೆ. ಅದರ ಪ್ರಕಾರ ಯಾವುದೇ ವನ್ಯಜೀವಿಗಳ ಉಗುರು, ಚರ್ಮ, ದಂತ, ಕೊಂಬುಗಳನ್ನು ಸಂಗ್ರಹಣೆ ಮಾಡುವುದು, ಮಾರಾಟ, ಸಾಗಾಣಿಕೆ ಮಾಡುವುದು ಅಥವಾ ಸ್ವಂತ ಬಳಕೆಗೆ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದಿದ್ದಾರೆ.

ಏಷ್ಯನ್ ಪ್ಯಾರಾಗೇಮ್ಸ್ : ಜಾವೆಲಿನ್‍ನಲ್ಲಿ ಭಾರತಕ್ಕೆ ಚಿನ್ನ

ಕಾಯ್ದೆ ತೋರ್ಪಡಿಕೆಗಾಗಿ ಇಲ್ಲ. ಅದು ಕಠಿಣ ರೀತಿಯಲ್ಲಿ ಜಾರಿಗೆ ಬಂದಿದೆ. ನೆಲದ ಕಾನೂನನ್ನು ಎಲ್ಲರೂ ಪಾಲನೆ ಮಾಡಬೇಕು. ಸೆಲೆಬ್ರಿಟಿಗಳು ಸೇರಿದಂತೆ ಯಾರೇ ಆದರೂ ಹುಲಿ ಉಗುರು, ಚರ್ಮ, ದಂತ, ಕೊಂಬುಗಳನ್ನು ಬಳಕೆ ಮಾಡುತ್ತಿದ್ದರೆ ಅವುಗಳನ್ನು ಪರಿಶೀಲಿಸಿ ಕ್ರಮ ಜರುಗಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ತಾವು ಯಾರ ಹೆಸರನ್ನೂ ವೈಯಕ್ತಿಕವಾಗಿ ಉಲ್ಲೇಖಿಸಲು ಬಯಸುವುದಿಲ್ಲ ಎಂದು ತಿಳಿಸಿದರು.
ಅರಣ್ಯ ಮತ್ತು ವನ್ಯಸಂಪತ್ತನ್ನು ಸಂರಕ್ಷಿಸುವುದು ಎಲ್ಲರ ಆದ್ಯಕರ್ತವ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು, ಕಾನೂನನ್ನು ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೆಲವರು ಹುಲಿ ಉಗುರನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ಇನ್ನೂ ಕೆಲವರು ಹುಲಿ ಚರ್ಮವನ್ನು ತಮ್ಮ ಮನೆಯಲ್ಲಿ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಅದನ್ನು ಪರಿಶೀಲಿಸಿ ಅಕಾರಿಗಳು ಕ್ರಮ ಜರುಗಿಸುತ್ತಾರೆ ಎಂದರು.

RELATED ARTICLES

Latest News