Thursday, December 5, 2024
Homeಅಂತಾರಾಷ್ಟ್ರೀಯ | Internationalಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಬರಬೇಕಿತ್ತು ; ನವಾಜ್‌ ಷರೀಫ್

ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಬರಬೇಕಿತ್ತು ; ನವಾಜ್‌ ಷರೀಫ್

‘Time to bury the past’: Nawaz outreach to PM Modi

ಇಸ್ಲಾಮಾಬಾದ್‌,ಅ.18- ಭಾರತ-ಪಾಕಿಸ್ತಾನ ಈಗಾಗಲೇ 75 ವರ್ಷಗಳನ್ನು ವ್ಯರ್ಥ ಮಾಡಿವೆ, ಮುಂದಿನ 75 ವರ್ಷಗಳು ಹೀಗಾಗದಿರಲಿ ಉಭಯ ರಾಷ್ಟ್ರಗಳು ಸಂಬಂಧ ವೃದ್ಧಿಸಿಕೊಳ್ಳಲಿ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಹೇಳಿದ್ದಾರೆ.

ಎಸ್‌‍ ಸಿಒ ಶಂಗಸಭೆಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ತೆರಳಿದ್ದ ವಿದೇಶಾಂಗ ಸಚಿವ ಎಸ್‌‍. ಜೈಶಂಕರ್‌ ಭೇಟಿಯ ನಂತರ, ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರು ಎರಡೂ ಕಡೆಯಿಂದ ಕೊರತೆಗಳಿವೆ ಆದರೆ ಮತ್ತೆ ಸ್ನೇಹಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ ಎಂದು ಹೇಳಿದರು.

ಇದು ಆರಂಭವಷ್ಟೇ. ಭಾರತ ಮತ್ತು ಪಾಕಿಸ್ತಾನ ಹಿಂದಿನದನ್ನು ಬಿಟ್ಟು ಭವಿಷ್ಯದ ಬಗ್ಗೆ ಯೋಚಿಸುತ್ತವೆ ಎನ್ನುವ ನಂಬಿಕೆ ಇದೆ. ಪ್ರಧಾನಿ ಮೋದಿ ಇಲ್ಲಿಗೆ ಬರಬೇಕೆಂದು ಬಯಸ್ದೆಿ, ವಿದೇಶಾಂಗ ಸಚಿವ ಜೈಶಂಕರ್‌ ಇಲ್ಲಿಗೆ ಬಂದಿದ್ದು ಹೊಸ ಆರಂಭಕ್ಕೆ ನಾಂದಿ ಹಾಡಿರುವುದು ಸಂತಸ ತಂದಿದೆ ಎಂದು ನವಾಜ್‌ ಷರೀಫ್‌ ಹೇಳಿದ್ದಾರೆ.

ಸದ್ಯಕ್ಕೆ ಯಾವುದೇ ರೀತಿಯ ವಿವಾದವನ್ನು ಬದಿಗಿಟ್ಟು ಸಕಾರಾತಕ ಅಂಶಗಳನ್ನು ಮಾತ್ರ ಪ್ರಸ್ತಾಪಿಸಿ, ನಾವು ಈಗ ಸಕಾರಾತಕ ಹೆಜ್ಜೆಗಳನ್ನು ಇಡಬೇಕಾಗಿದೆ, ಹೊಸದೊಂದು ಪ್ರಾರಂಭವಾಗಿದೆ ಎಂದು ಅವರು ಹೇಳಿದರು.

ಭಾರತ ಮತ್ತು ಪಾಕಿಸ್ತಾನ ಎರಡೂ ಈಗ ವ್ಯಾಪಾರ, ಹವಾಮಾನ ಬದಲಾವಣೆ, ವ್ಯಾಪಾರ, ಉದ್ಯಮ, ಕ್ರೀಡೆ ಇತ್ಯಾದಿಗಳಲ್ಲಿ ಮುಂದುವರಿಯಬಹುದು ಎಂದು ನವಾಜ್‌ ಷರೀಫ್‌ ಹೇಳಿದರು. ವಾಜಪೇಯಿ ಅವರೊಂದಿಗಿನ ಅವರ ಭೇಟಿ ಮತ್ತು ಅವರಿಬ್ಬರೂ ಉತ್ತಮ ಬಾಂಧವ್ಯಕ್ಕೆ ಹೇಗೆ ಅಡಿಪಾಯ ಹಾಕಿದರು ಎಂಬುದನ್ನು ನಾನು ನೆನಪಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿ ಪ್ರಕ್ರಿಯೆಯನ್ನು ಪುನರಾರಂಭಿಸುವ ಮಹತ್ವ ಒತ್ತಿ ಹೇಳಿದ ನವಾಜ್‌ ಷರೀಫ್‌‍, ಅದು ಹಳಿ ತಪ್ಪಲು ಬಿಡಬಾರದು ಎಂದು ಹೇಳಿದರು. ನಮ ಆರಂಭದ ಎಳೆಗಳನ್ನು ಬಿಡಬಾರದು ಎಂದು ಷರೀಫ್‌ ಹೇಳಿದ್ದಾರೆ.

RELATED ARTICLES

Latest News