Sunday, September 29, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-09-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-09-2024)

Horoscope

ನಿತ್ಯ ನೀತಿ : ಯಾವ ವ್ಯಕ್ತಿಯು ನಿಮಿಂದ ಅದೆಷ್ಟೇ ಬೇಸರವಾದರೂ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಮತ್ತೆ ಮೊದಲಿನ ತರಹ ಮಾತನಾಡುತ್ತಾರೋ ಆ ವ್ಯಕ್ತಿಯೇ ನಿಮನ್ನು ತುಂಬಾ ಇಷ್ಟ ಪಡುವ ವ್ಯಕ್ತಿ.

ಪಂಚಾಂಗ : ಶನಿವಾರ , 28-09-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಆಶ್ಲೇಷಾ / ಯೋಗ: ಸಿದ್ಧ / ಕರಣ: ಕೌಲವ

ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.11
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ
: ಹಲವು ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಅನಾಯಾಸವಾಗಿ ಮುಗಿಯಲಿವೆ.
ವೃಷಭ: ಕಟ್ಟಡ ನಿರ್ಮಾಣಗಾರರಿಗೆ ಹೆಚ್ಚಿನ ಕೆಲಸ ಇರುವುದು. ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ.
ಮಿಥುನ: ಸಾಧ್ಯವಾದಷ್ಟೂ ರಾತ್ರಿ ಪ್ರಯಾಣ ಮಾಡ ಬೇಡಿ. ಖರ್ಚು ಸ್ವಲ್ಪ ಹೆಚ್ಚಾಗಬಹುದು.

ಕಟಕ: ಸಹೋದರರು, ಬಂಧುಗಳು ನೀಡುವ ಸಲಹೆಗಳಿಂದ ಸಮಸ್ಯೆಗಳು ದೂರವಾಗಲಿವೆ.
ಸಿಂಹ: ಅತ್ತೆ ಕಡೆಯಿಂದ ಮಾನಸಿಕ ಒತ್ತಡ, ಕಿರುಕುಳ ಎದುರಿಸಬೇಕಾಗಬಹುದು.
ಕನ್ಯಾ: ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.

ತುಲಾ: ಬದುಕಿನಲ್ಲಿ ತಿರುವು ಪಡೆಯುವಿರಿ. ವ್ಯಾಪಾರದಲ್ಲಿ ಲಾಭ.
ವೃಶ್ಚಿಕ: ಉದ್ಯೋಗದಲ್ಲಿ ಒತ್ತಡ ಕಡಿಮೆಯಾಗಲಿದೆ.
ಧನುಸ್ಸು: ಕೆಲಸದ ಸ್ಥಳದಲ್ಲಿ ಹಿರಿಯ ಸಹೋ ದ್ಯೋಗಿ ಗಳಿಂದ ಸಹಾಯ-ಸಹಕಾರ ಸಿಗಲಿದೆ.

ಮಕರ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಹಿರಿಯರ ಸಲಹೆ ಪಡೆಯಿರಿ.
ಕುಂಭ: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳದಿರಿ.
ಮೀನ: ಹಿಂದೆ ಎದುರಿಸಿದ ತೊಂದರೆಗಳು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ.

RELATED ARTICLES

Latest News