Tuesday, May 7, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-12-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-12-2023)

ನಿತ್ಯ ನೀತಿ : ಮಾತು, ಮನಸ್ಸು ಮತ್ತು ನಡೆಗಳು ಮನುಷ್ಯನನ್ನು ಸಜ್ಜನನ್ನಾಗಿಸುತ್ತವೆ. ದಾರಿ ತಪ್ಪಿದರೆ ಅಧಮನನ್ನಾಗಿಸುತ್ತವೆ.

ಪಂಚಾಂಗ ಶುಕ್ರವಾರ 01-12-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಪುನರ್ವಸು / ಯೋಗ: ಶುಕ್ಲ / ಕರಣ: ಕೌಲವ

ಸೂರ್ಯೋದಯ : ಬೆ.06.26
ಸೂರ್ಯಾಸ್ತ : 05.51
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ಸಮೀಪ ವರ್ತಿಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ. ಎಚ್ಚರ ವಹಿಸಿ.
ವೃಷಭ: ವಕೀಲರು ಕೋರ್ಟು -ಕಚೇರಿ ಕೆಲಸಗಳಲ್ಲಿ ಅಧಿಕ ಲಾಭ ಗಳಿಸುವರು.
ಮಿಥುನ: ಆಸ್ತಿ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಆರೋಗ್ಯ ಸಮಸ್ಯೆ ಕಾಡುವುದು.

ಕಟಕ: ಸಹೋದರರ ಆಗಮನದಿಂದ ಮನಸ್ಸಿಗೆ ಸಂತಸವಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಸಿಂಹ: ರಫ್ತು, ಆಮದು ವ್ಯವಹಾರದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ.
ಕನ್ಯಾ: ನೀವು ಮಾಡುವ ಕೆಲಸ -ಕಾರ್ಯಗಳಿಂದ ಗೌರವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ.

ತುಲಾ: ಮಧ್ಯವರ್ತಿಗಳ ಸಹಾಯದಿಂದಾಗಿ ವಿವಾಹದ ವಿಷಯದಲ್ಲಿ ಅನುಕೂಲವಾಗಲಿದೆ.
ವೃಶ್ಚಿಕ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾಗಲಿವೆ.
ಧನುಸ್ಸು: ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡು ವವರಿಗೆ ಉತ್ತಮ ಯಶಸ್ಸು ಸಿಗಲಿದೆ.

ಮಕರ: ಕಾರ್ಯ ನಿಮಿತ್ತ ದೂರ ಪ್ರಯಾಣ ಮಾಡ ಬೇಕಾಗಬಹುದು. ಪಾಲುದಾರಿಕೆಯಲ್ಲಿ ನಷ್ಟ.
ಕುಂಭ: ಶುಭ ಸಮಾರಂಭಗಳು ನಡೆಯುವುದರಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ಮೀನ: ನಿಮ್ಮ ನೆಚ್ಚಿನ ಕಾರ್ಯಯೋಜನೆಗಳು ಕೈಗೂಡಲಿವೆ. ಸಂಭ್ರಮದ ದಿನ.

RELATED ARTICLES

Latest News