Sunday, May 12, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-01-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-01-2024)

ನಿತ್ಯ ನೀತಿ : ಸಾಂಸಾರಿಕ ಜೀವನವೆಂಬುದು ಕೆಸರಿನಲ್ಲಿದ್ದಂತೆ. ಆದರೆ, ಕೆಸರಿಗೆ ಅಂಟದೆ ಇರುವ ಕಮಲ ಪುಷ್ಪದಂತೆ ಜೀವನ ಧರ್ಮವಿರಬೇಕು.

ಪಂಚಾಂಗ ಶುಕ್ರವಾರ 05-01-2024
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ / ನಕ್ಷತ್ರ: ಚಿತ್ತಾ / ಯೋಗ: ಅತಿಗಂಡ / ಕರಣ: ತೈತಿಲ

ಸೂರ್ಯೋದಯ : ಬೆ.06.43
ಸೂರ್ಯಾಸ್ತ : 06.07
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ:
ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳ ಬಹುದು. ಆದ್ದರಿಂದ ಜಾಗ್ರತೆಯಿಂದಿರಿ.
ವೃಷಭ: ಮನೆಯ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಪ್ರೀತಿಪಾತ್ರರ ಸಂಪೂರ್ಣ ಬೆಂಬಲ ಪಡೆಯುತ್ತೀರಿ.
ಮಿಥುನ: ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ. ಓದಿನ ಬಗ್ಗೆ ಕಾಳಜಿ ಇರಲಿ.

ಕಟಕ: ಕಾರ್ಯ ಸಾಮಥ್ರ್ಯವನ್ನು ಅರ್ಥಮಾಡಿ ಕೊಂಡು ಆದಾಯ ಹೆಚ್ಚಿಸುವ ಕೆಲಸ ಮಾಡಿ.
ಸಿಂಹ: ಹಣದ ವಿಷಯದಲ್ಲಿ ದೊಡ್ಡ ಸಮಸ್ಯೆ ಇರುವುದಿಲ್ಲ. ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಕನ್ಯಾ: ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ.

ತುಲಾ: ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಹಿಂದೆ ಮುಂದೆ ಯೋಚಿಸಬೇಡಿ.
ವೃಶ್ಚಿಕ: ಮಡದಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕಾಗಬಹುದು.
ಧನುಸ್ಸು: ಉನ್ನತ ಮಟ್ಟದಲ್ಲಿ ಕಾರ್ಯನಿರ್ವ ಹಿಸುವವರಿಗೆ ಜನಸಾಮಾನ್ಯರಿಂದ ಉತ್ತಮ ಪ್ರೋತ್ಸಾಹ ದೊರೆಯಲಿದೆ.

ಮಕರ: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಕುಂಭ: ಬಂಧುಗಳಿಂದ ಸಮಸ್ಯೆ ಎದುರಾಗಲಿದೆ. ಹಿತಶತ್ರುಗಳ ಕಾಟ ಹೆಚ್ಚಾಗಲಿದೆ.
ಮೀನ: ಅಪರೂಪದ ಅತಿಥಿ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ.

RELATED ARTICLES

Latest News