Saturday, May 4, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-01-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-01-2024)

ನಿತ್ಯ ನೀತಿ : ಗುರಿಯಿದ್ದು ಪ್ರಯತ್ನಿಸದೆ ಇದ್ದರೆ ಅದು ಬರೀ ಕನಸು. ಗುರಿಯಿಲ್ಲದೆ ಪ್ರಯತ್ನಿಸುವುದು ಸಮಯ ವ್ಯರ್ಥ. ಗುರಿ ಹಾಗೂ ಪ್ರಯತ್ನ ಎರಡೂ ಇದ್ದರೆ ನಾವು ಜಗತ್ತನ್ನೇ ಬದಲಾಯಿಸಬಹುದು.

ಪಂಚಾಂಗ ಶನಿವಾರ 06-01-2024
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಸ್ವಾತಿ / ಯೋಗ: ಸುಕರ್ಮ / ಕರಣ: ವಣಿಜ್

ಸೂರ್ಯೋದಯ : ಬೆ.06.43
ಸೂರ್ಯಾಸ್ತ : 06.07
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ರಾಶಿ ಭವಿಷ್ಯ
ಮೇಷ
: ಮಹಿಳೆಯರಿಗೆ ಮೇಲಧಿಕಾರಿಗಳಿಂದ ಕಿರುಕುಳ. ಏಲಕ್ಕಿ ವ್ಯಾಪಾರಿಗಳಿಗೆ ಅಲ್ಪ ಲಾಭ.
ವೃಷಭ: ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಸಾಕಷ್ಟು ಸಮಯ ಕಳೆಯಲು ಬಯಸುವಿರಿ.
ಮಿಥುನ: ಅಧ್ಯಯನ ಮಾಡುವಾಗ ಕೆಲವು ಸವಾಲು ಗಳನ್ನು ಎದುರಿಸಬೇಕಾಗುತ್ತದೆ.

ಕಟಕ: ಯೋಜಿತ ರೀತಿಯಲ್ಲಿ ಹೋದರೆ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ.
ಸಿಂಹ: ನೆರೆಹೊರೆ ಯವರೊಂದಿಗೆ ಕಲಹ ಉಂಟಾಗಲಿದೆ.
ಕನ್ಯಾ: ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಕಾರ್ಯಕ್ಷಮತೆ ಬಹಳ ಉತ್ತಮವಾಗಿರುತ್ತದೆ.

ತುಲಾ: ಅನಾರೋಗ್ಯ ಕಾರಣದಿಂದಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ದೂರ ಪ್ರಯಾಣ ಮಾಡುವಿರಿ.
ವೃಶ್ಚಿಕ: ಯಶಸ್ಸು ಸಾಧಿಸಲು ಯಾವುದೇ ಅಪಾಯವನ್ನಾದರೂ ಎದುರಿಸಲು ಸಿದ್ಧರಾಗಿರುತ್ತೀರಿ.
ಧನುಸ್ಸು: ಸಂಗಾತಿಯೊಂದಿಗೆ ವಿನಾಕಾರಣ ಕಲಹ ಉಂಟಾಗ ಲಿದೆ. ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆಯಿದೆ.

ಮಕರ: ವೈದ್ಯವೃತ್ತಿಯಲ್ಲಿರುವವರು ಅಧಿಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.
ಕುಂಭ: ಸ್ವಯಂಕೃತ ಅಪರಾಧಗಳಿಂದ ನಷ್ಟ ಅನುಭವಿಸುವಿರಿ. ಸಾಲದ ಚಿಂತೆ ಕಾಡಲಿದೆ.
ಮೀನ: ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು.

RELATED ARTICLES

Latest News