Friday, October 4, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-01-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-01-2024)

ನಿತ್ಯ ನೀತಿ : ಚಿಂತೆ ನಮ್ಮನ್ನು ಇನ್ನಷ್ಟು ಘಾಸಿಗೊಳಿಸುತ್ತದೆ. ಏಕೆಂದರೆ ಅದು ನಾಳೆಯ ಸಮಸ್ಯೆಯನ್ನು ಪರಿಹರಿಸುವುದಕ್ಕಿಂತ ಇಂದಿನ ಶಕ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

ಪಂಚಾಂಗ ಭಾನುವಾರ 07-01-2024
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ವಿಶಾಖ / ಯೋಗ: ಶೂಲ / ಕರಣ: ಭವ

ಸೂರ್ಯೋದಯ : ಬೆ.06.44
ಸೂರ್ಯಾಸ್ತ : 06.08
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ಉದ್ಯೋಗ ಬದಲಾವಣೆಗೆ ಮನಸ್ಸು ಮಾಡುವಿರಿ. ಸ್ವಂತ ಉದ್ಯಮಕ್ಕೆ ಯೋಚಿಸುವಿರಿ.
ವೃಷಭ: ಕೌಟುಂಬಿಕ ವಿಷಯದಲ್ಲಿ ಗಂಭೀರ ವಿವಾದ, ಘರ್ಷಣೆಗಳು ನಡೆಯಬಹುದು.
ಮಿಥುನ: ಆಲೋಚಿಸಿದ ಹೊಸ ಕೆಲಸಗಳು ಸ್ವಲ್ಪ ತಡವಾಗಿ ಪ್ರಾರಂಭವಾದರೂ ಸುಸೂತ್ರವಾಗಿ ನೆರವೇರಲಿವೆ.

ಕಟಕ: ದಾಯಾದಿಗಳೊಡನೆ ಇದ್ದ ಕಲಹಗಳು ನಿವಾರಣೆಯಾಗಲಿವೆ.
ಸಿಂಹ: ಮನೆಯ ಜವಾಬ್ದಾರಿ ಪೂರೈಸುವಲ್ಲಿ ಪ್ರೀತಿಪಾತ್ರರ ಬೆಂಬಲ ಪಡೆಯುತ್ತೀರಿ.
ಕನ್ಯಾ: ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಕಾರ್ಯಕ್ಷಮತೆ ಬಹಳ ಉತ್ತಮವಾಗಿರುತ್ತದೆ.

ತುಲಾ: ಪತ್ನಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕಾಗಬಹುದು.
ವೃಶ್ಚಿಕ: ಬೇರೊಬ್ಬರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸುವುದು ಒಳಿತು.
ಧನುಸ್ಸು: ಆಧ್ಯಾತ್ಮಿಕ ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡುವುದರಿಂದ ಮನಃಶಾಂತಿ ಸಿಗಲಿದೆ.

ಮಕರ: ಕೌಟುಂಬಿಕವಾಗಿ ಈಗಿರುವ ಕೆಲವು ಜವಾಬ್ದಾರಿ ಗಳನ್ನು ಕಡಿಮೆ ಮಾಡಿಕೊಳ್ಳುವುದು ಒಳಿತು.
ಕುಂಭ: ದೇವತಾ ಕಾರ್ಯ ಗಳಲ್ಲಿ ನಿರಾಸಕ್ತಿ. ಕುಲದೇವತೆ ನಿಂದನೆ ಒಳ್ಳೆಯದಲ್ಲ.
ಮೀನ: ಅವಿವಾಹಿತರಾಗಿದ್ದರೆ ಮದುವೆ ವಿಷಯ ನಿಮ್ಮ ಮುಂದೆ ಪ್ರಸ್ತಾಪವಾಗಲಿದೆ.

RELATED ARTICLES

Latest News