ನಿತ್ಯ ನೀತಿ : ಮಾನಸಿಕ ನೆಮ್ಮದಿಗಿಂತ ದೊಡ್ಡದಾದ ಶ್ರೀಮಂತಿಕೆ ಈ ಜಗತ್ತಿನಲ್ಲಿ ಯಾವುದೂ ಇಲ್ಲ.
ಪಂಚಾಂಗ ಶನಿವಾರ 08-06-2024
ಕ್ರೋನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಆರಿದ್ರಾ / ಯೋಗ: ಗಂಡ / ಕರಣ: ತೈತಿಲ
ಸೂರ್ಯೋದಯ : ಬೆ.05.53
ಸೂರ್ಯಾಸ್ತ :06.45
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30
ರಾಶಿ ಭವಿಷ್ಯ
ಮೇಷ: ಸಾಲ ಮರುಪಾವತಿ ಮಾಡುವಿರಿ. ತೀರ್ಥಕ್ಷೇತ್ರ ದರ್ಶನ ಮಾಡುವಿರಿ.
ವೃಷಭ: ಇತರರ ಭಾವನೆಗಳಿಗೆ ಸ್ಪಂದಿಸುವುದರಿಂದ ಅವರಿಂದ ಪ್ರಶಂಸೆ ಪಡೆಯುವಿರಿ.
ಮಿಥುನ: ಪೊಷಕರು ಮಕ್ಕಳ ವಿಚಾರದಲ್ಲಿ ಜಾಗ್ರತೆ ವಹಿಸುವುದು ಸೂಕ್ತ.
ಕಟಕ: ನಿಮ್ಮ ಮಾತುಗಳಿಂದ ಕುಟುಂಬದವರು ಮತ್ತು ಹಿತೈಷಿಗಳಿಗೆ ಸಂತೋಷವವಾಗಲಿದೆ.
ಸಿಂಹ: ಹೆಜ್ಜೆಹೆಜ್ಜೆಗೂ ಶತ್ರು ಗಳಿಂದ ಅಡೆತಡೆ ಸೇರಿದಂತೆ ಹಲವು ತೊಂದರೆಗಳು ಎದುರಾಗಲಿವೆ.
ಕನ್ಯಾ: ಪ್ರಯತ್ನಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ.
ತುಲಾ: ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಿ. ಸ್ತ್ರೀಯರಿಗೆ ಅನುಕೂಲಕರ ಪರಿಸ್ಥಿತಿ ಇರಲಿದೆ.
ವೃಶ್ಚಿಕ: ಆಕಸ್ಮಿಕ ಪ್ರಯಾಣ ಮಾಡುವ ಸಾಧ್ಯತೆ. ಉದ್ಯೋಗ ಬದಲಾವಣೆಯ ಕನಸು.
ಧನುಸ್ಸು: ಉದ್ಯೋಗದಲ್ಲಿ ಆಸಕ್ತಿ ಉಂಟಾಗಲಿದೆ. ಅನಿರೀಕ್ಷಿತ ಧನಾಗಮನವಾಗಲಿದೆ.
ಮಕರ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯಿರಿ.
ಕುಂಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಬಾಳೆ ಮತ್ತು ಅಡಿಕೆ ಕೃಷಿ ಮಾಡುವವರಿಗೆ ಅನುಕೂಲ.
ಮೀನ: ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವ ಪ್ರವೃತ್ತಿಯನ್ನು ನಿಯಂತ್ರಿಸುವುದು ಒಳಿತು.