Saturday, May 11, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-01-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-01-2024)

ನಿತ್ಯ ನೀತಿ : ನಂಬಿ ಬದುಕುವುದು ಬೇರೆ. ನಂಬಿಸುತ್ತಾ ಬದುಕುವುದು ಬೇರೆ. ನಂಬಿ ಬದುಕುವುದರಲ್ಲಿ ಪ್ರೀತಿ ಇರುತ್ತದೆ. ನಂಬಿಸುತ್ತಾ ಬದುಕುವುದರಲ್ಲಿ ಸ್ವಾರ್ಥ ಮಾತ್ರ ಇರುತ್ತದೆ.

ಪಂಚಾಂಗ ಬುಧವಾರ 10-01-2024
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಮೂಲಾ / ಯೋಗ: ಧ್ರುವ / ಕರಣ: ವಿಷ್ಟಿ

ಸೂರ್ಯೋದಯ : ಬೆ.06.44
ಸೂರ್ಯಾಸ್ತ : 06.09
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಸೌಹಾರ್ದತೆ ಇರಲಿದೆ.
ವೃಷಭ: ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಹಿರಿಯರ ಸಲಹೆ ಪಡೆದು ಕೆಲಸ ಮುಂದುವರೆಸಿ.
ಮಿಥುನ: ಉದ್ಯೋಗ ಬದಲಾವಣೆ ವಿಚಾರದಲ್ಲಿನ ಗೊಂದಲವನ್ನು ಮೇಲಧಿಕಾರಿಗಳ ಗಮನಕ್ಕೆ ತನ್ನಿ.

ಕಟಕ: ವಿಧೇಯತೆಯಿಂದ ಇರುವ ನಿಮ್ಮ ಗುಣ ಉನ್ನತ ಅಧಿಕಾರಿಗಳಿಗೆ ಇಷ್ಟವಾಗಲಿದೆ.
ಸಿಂಹ: ಪದೇ ಪದೇ ಮಾನಸಿಕ ಕಿರಿಕಿರಿ ಉಂಟಾಗಲಿದೆ. ಸಂಸಾರದಲ್ಲಿ ಸಮತೋಲನ ಕಾಪಾಡಿಕೊಳ್ಳಿ.
ಕನ್ಯಾ: ಸಮಾಧಾನಚಿತ್ತ ದಿಂದಿದ್ದರೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ.

ತುಲಾ: ನೀವು ಚಿಂತಿಸದಂತೆ ನಡೆಯದ ಕಾರಣ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.
ವೃಶ್ಚಿಕ: ಕುಟುಂಬದ ವಿಷಯದಲ್ಲಿ ನಿಮ್ಮ ದೃಢ ನಿಲುವಿಗೆ ಎಲ್ಲರಿಂದಲೂ ಸಮ್ಮತಿ ಸಿಗಲಿದೆ.
ಧನುಸ್ಸು: ಸರ್ಕಾರದಿಂದ ಆಗಬೇಕಿರುವ ಕೆಲಸ- ಕಾರ್ಯಗಳು ಸುಗಮವಾಗಿ ನೆರವೇರಲಿವೆ.

ಮಕರ: ನಿರೀಕ್ಷಿಸಿದಂತೆ ಅಧಿಕ ಧನಲಾಭ ದೊರೆಯಲಿದೆ. ಅನ್ಯರ ಮಾತಿನ ಬಗ್ಗೆ ವಿಶ್ವಾಸ ಬೇಡ.
ಕುಂಭ: ಶಾಂತವಾಗಿದ್ದರೆ ಒಳ್ಳೆಯದು. ವಿರೋಧಿಗಳನ್ನು ನಿರ್ಲಕ್ಷಿಸದಿರುವುದು ಸೂಕ್ತ.
ಮೀನ: ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ. ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ.

RELATED ARTICLES

Latest News