Friday, November 22, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-06-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-06-2024)

ನಿತ್ಯ ನೀತಿ : ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾ„ಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷವಾಗುತ್ತದೆ. ಸೋತರೆ ಅನುಭವ ಸಿಗುತ್ತದೆ.

ಪಂಚಾಂಗ ಸೋಮವಾರ 10-06-2024
ಕ್ರೋನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಪುಷ್ಯ / ಯೋಗ: ಧ್ರುವ / ಕರಣ: ಭವ

ಸೂರ್ಯೋದಯ : ಬೆ.05.53
ಸೂರ್ಯಾಸ್ತ : 06.46
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ತಳುಕಿನ ಮಾತಿಗೆ ಮರುಳಾಗದಿರಿ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ.
ವೃಷಭ: ಮಕ್ಕಳಿಗೋಸ್ಕರ ಅಧಿಕ ಖರ್ಚು ಮಾಡುವಿರಿ. ಸಣ್ಣ ವಿಷಯಕ್ಕೆ ಕಲಹ.
ಮಿಥುನ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.

ಕಟಕ: ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ಮಾಡುವಿರಿ. ಬಾಕಿ ವಸೂಲಿ ಮಾಡುವಿರಿ.
ಸಿಂಹ: ಪೋಷಕರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಬನ್ನಿ.
ಕನ್ಯಾ: ವ್ಯವಹಾರದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾದರೆ ತೊಂದರೆ ಅನುಭವಿಸಬೇಕಾಗುತ್ತದೆ.

ತುಲಾ: ಜೀವನ ಸಂಗಾತಿ ಯಿಂದ ಆರ್ಥಿಕ ಲಾಭ ಮತ್ತು ಗೌರವ ಪಡೆಯುವಿರಿ.
ವೃಶ್ಚಿಕ: ಮಸಾಲೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸದಿರುವುದು ಒಳಿತು.
ಧನುಸ್ಸು: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗಬಹುದಾದ ವಿಪತ್ತುಗಳು ದೂರವಾಗಲಿವೆ.

ಮಕರ: ಹಣಕಾಸು ವ್ಯವಹಾರದಲ್ಲಿ ನಷ್ಟ ತಪ್ಪಿಸುವ ಉದ್ದೇಶದಿಂದ ಜಾಗರೂಕತೆಯಿಂದ ಇರಿ.
ಕುಂಭ: ಅನಾರೋಗ್ಯ ಕಾರಣದಿಂದಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಮೀನ: ಮನಸ್ತಾಪ ತಪ್ಪಿಸಲು ಸಹೋದರರೊಂದಿಗೆ ಅತ್ಯಂತ ಜಾಣ್ಮೆಯಿಂದ ವ್ಯವಹರಿಸುವುದು ಒಳಿತು.

RELATED ARTICLES

Latest News