Thursday, February 22, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-02-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-02-2024)

ನಿತ್ಯ ನೀತಿ : ಮನುಷ್ಯ ಎಷ್ಟೇ ಬಲಶಾಲಿಯಾದರೂ ದೌರ್ಬಲ್ಯ ಮೂಡಿದಲ್ಲಿ ಏನನ್ನೂ ಸಾಧಿಸಲಾಗದು. ಪ್ರಯತ್ನಶೀಲನಾದಾಗ ಮಾತ್ರ ಉದ್ದಿಷ್ಟ ಗುರಿಯನ್ನು ಮುಟ್ಟಲು ಸಾಧ್ಯ.

ಪಂಚಾಂಗ ಭಾನುವಾರ 11-02-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಶತಭಿಷಾ / ಯೋಗ: ಪರಿಘ / ಕರಣ: ಬಾಲವ

ಸೂರ್ಯೋದಯ : ಬೆ.06.44
ಸೂರ್ಯಾಸ್ತ : 06.24
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ನಿಮ್ಮದಲ್ಲದ ತಪ್ಪಿಗೆ ಸಣ್ಣದೊಂದು ಶಿಕ್ಷೆ ಅನುಭವಿಸುವಿರಿ. ಎಚ್ಚರಿಕೆಯಿಂದಿರಿ.
ವೃಷಭ: ದೂರ ಪ್ರಯಾಣ ಮಾಡುವಿರಿ. ಸಹೋದರರೊಂದಿಗೆ ವಾದ-ವಿವಾದಕ್ಕಿಳಿಯದಿರಿ.
ಮಿಥುನ: ದಾಂಪತ್ಯದಲ್ಲಿ ಸಮಸ್ಯೆ ಉಂಟಾಗ ಬಹುದು. ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಒಳಿತು.

ಕಟಕ: ವ್ಯಾಪಾರದಲ್ಲಿ ಎಚ್ಚರಿಕೆಯಿಂದಿರಿ. ಉತ್ತಮ ಫಲಿತಾಂಶಗಳನ್ನು ನೋಡಬಹುದು.
ಸಿಂಹ: ಕಚೇರಿಯಲ್ಲಿ ಸಮಾಧಾನದಿಂದ ಕಾರ್ಯನಿರ್ವಹಿಸಿ.
ಕನ್ಯಾ: ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದರಿಂದ ಸಮಾಧಾನ ಹೊಂದುವಿರಿ.

ತುಲಾ: ಮಾನಸಿಕ ಚಾಂಚಲ್ಯ ಕಾಡಲಿದೆ. ವ್ಯಾಪಾರ ಸ್ಥಳದಲ್ಲಿ ಮೈಮರೆಯದೆ ವ್ಯವಹರಿಸಿ.
ವೃಶ್ಚಿಕ: ಪರಿಶ್ರಮ ಪಟ್ಟರೂ ಉದ್ದೇಶಿತ ಕಾರ್ಯಗಳಲ್ಲಿ ವಿಫಲವಾಗಲಿದೆ. ಪರರ ವಿಷಯದಲ್ಲಿ ಜಾಗ್ರತೆ ಇರಲಿ.
ಧನುಸ್ಸು: ಮಾನಸಿಕ ಕಿರಿಕಿರಿಯಿಂದ ಬಳಲುವ ಅಪಾಯ ಹೆಚ್ಚಿದೆ. ದೇವಾಲಯಗಳಿಗೆ ಭೇಟಿ ನೀಡಿ.

ಮಕರ: ಮುಖಭಂಗವಾಗುವಂಥ ಮಾತುಗಳ ಬಳಕೆ ಮಾಡದಿರುವುದು ಒಳಿತು. ಓದಿನಲ್ಲಿ ಏಕಾಗ್ರತೆ ವಹಿಸಿ.
ಕುಂಭ: ಕುಟುಂಬದಲ್ಲಿ ನೀವು ನಿರೀಕ್ಷಿಸರದೆ ಇರುವ ಘಟನೆಗಳು ಅನಿರೀಕ್ಷಿತವಾಗಿ ನಡೆಯಲಿವೆ.
ಮೀನ: ವಿನಾಕಾರಣ ಅಧಿಕ ಭಯದಿಂದ ಆತಂಕಕ್ಕೆ ಒಳಗಾಗುವಿರಿ. ಹಣಕಾಸು ವಿಷಯದಲ್ಲಿ ಹುಷಾರಾಗಿರಿ.

RELATED ARTICLES

Latest News