Friday, November 22, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-12-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-12-2023)

ನಿತ್ಯ ನೀತಿ : ಸಮಯ ಮತ್ತು ನಗು ಇವೆರಡೂ ಜೀವನದ ವಿಚಿತ್ರಗಳು. ಕೆಲವೊಮ್ಮೆ ಸಮಯವು ನಮಗೆ ನಗುವುದನ್ನೇ ಮರೆಸಿಬಿಡುತ್ತದೆ. ಮತ್ತೊಮ್ಮೆ ನಗು ನಮಗೆ ಸಮಯವನ್ನೇ ಮರೆಸಿಬಿಡುತ್ತದೆ.

ಪಂಚಾಂಗ ಸೋಮವಾರ 11-12-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ವಿಶಾಖ / ಯೋಗ: ಸುಕರ್ಮಾ / ಕರಣ: ವಿಷ್ಟಿ

ಸೂರ್ಯೋದಯ : ಬೆ.06.31
ಸೂರ್ಯಾಸ್ತ : 05.54
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಿರಿ.
ವೃಷಭ: ಕೆಲಸದ ಒತ್ತಡ ಕಡಿಮೆಯಾಗುವುದರಲ್ಲದೆ ಸರಾಗವಾಗಿ ಮುಗಿಯಲಿದೆ.
ಮಿಥುನ: ನಿಮ್ಮ ಪ್ರತಿಭೆ ಗುರುತಿಸಿಲ್ಲ ಎಂಬ ನೋವು ನಿಮ್ಮಿಂದ ದೂರಾಗಲಿದೆ.

ಕಟಕ: ತಂತ್ರಜ್ಞರು ಮತ್ತು ಕುಶಲ ಕರ್ಮಿಗಳ ಬೇಡಿಕೆಗಳು ಹೆಚ್ಚಾಗಲಿವೆ. ದೂರ ಪ್ರಯಾಣ ಬೇಡ.
ಸಿಂಹ: ಅಭಿವೃದ್ಧಿಗೆ ಪೂರಕವಾದ ಹೊಸ ಅವಕಾಶಗಳು ಸಿಗಲಿವೆ.
ಕನ್ಯಾ: ಉನ್ನತ ಅಧಿಕಾರಿ ಭೇಟಿಗಾಗಿ ದಿನವಿಡೀ ಓಡಾಡಬೇಕಾಗುತ್ತದೆ.

ತುಲಾ: ನೀವು ಕಂಡ ಕನಸುಗಳಿಗೆ ಹಿರಿಯರು, ಹಿತೈಷಿಗಳ ಬೆಂಬಲ ಸಿಗಲಿದೆ.
ವೃಶ್ಚಿಕ: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಬಹಳ ಒಳ್ಳೆಯದು.
ಧನುಸ್ಸು: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳದಿರಿ.

ಮಕರ: ಮಕ್ಕಳಿಂದ ಸಂತೋಷ ಉಂಟಾಗುವುದು. ಆರೋಗ್ಯದ ಕಡೆ ಗಮನ ಹರಿಸಿ.
ಕುಂಭ: ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ.
ಮೀನ: ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.

RELATED ARTICLES

Latest News