Monday, February 26, 2024
Homeರಾಜಕೀಯರಾಜಕೀಯಕ್ಕೆ ಬರುವಂತೆ ಶಿವಣ್ಣನಿಗೆ ಡಿಕೆಶಿ ಆಫರ್

ರಾಜಕೀಯಕ್ಕೆ ಬರುವಂತೆ ಶಿವಣ್ಣನಿಗೆ ಡಿಕೆಶಿ ಆಫರ್

ಬೆಂಗಳೂರು,ಡಿ.10-ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್‍ಅವರಿಗೆ ರಾಜಕೀಯ ಪ್ರವೇಶಿಸುವಂತೆ ಆಹ್ವಾನ ನೀಡಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಮುಂದಿನ ಲೋಕಸಭೆ ಚುನಾವಣೆಗೆ ಸ್ರ್ಪಧಿಸಲು ತಯಾರಾಗುವಂತೆ ಸಲಹೆ ನೀಡಿದ್ದಾರೆ.ಆರ್ಯ-ಈಡಿಗ ಸಮಾವೇಶದಲ್ಲಿ ಪಕ್ಕದಲ್ಲೇ ಕುಳಿತಿದ್ದ ಶಿವರಾಜ್‍ಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಆ ವಿಷಯವನ್ನು ತಮ್ಮ ಭಾಷಣದಲ್ಲಿ ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸಿದರು.

ಮಿತ್ರ ಶಿವರಾಜ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ರ್ಪಧಿಸಲು ತಯಾರಾಗುವಂತೆ ಸಲಹೆ ಮಾಡಿದೆ. ಅವರು ಯಾವ ಕ್ಷೇತ್ರದಿಂದಲೂ ಸ್ರ್ಪಧಿಸಿದರೂ ಅವರಿಗೆ ಟಿಕೆಟ್ ನೀಡುತ್ತೇನೆ ಎಂದಿದ್ದೇನೆ. ಆದರೆ ಈಗಾಗಲೇ ಐದಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಅವುಗಳ ಚಿತ್ರೀಕರಣ ಮುಗಿಯಬೇಕು ಎಂದು ಶಿವರಾಜ್‍ಕುಮಾರ್ ಹೇಳುತ್ತಿದ್ದರು.

ಚಿತ್ರೀಕರಣವನ್ನು ಯಾವಾಗ ಬೇಕಾದರೂ ಮುಗಿಸಬಹುದು. ಲೋಕಸಭೆ ಚುನಾವಣೆ ಐದು ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದೇನೆ ಎಂದರು.ಮುಂದುವರೆದು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಆರ್ಯ-ಈಡಿಗ ಸಮುದಾಯದ ಕೊಡುಗೆ ಅಪಾರವಾಗಿದೆ. ನಾವು ನಿಮ್ಮ ಉಪಕಾರವನ್ನು ಮರೆಯುವುದಿಲ್ಲ. ನಿಮ್ಮ ಎಲ್ಲ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆ. ಆರ್ಯ-ಈಡಿಗ ಅಭಿವೃದ್ಧಿ ನಿಗಮಕ್ಕೆ ಅನುದಾನ ಸೇರಿದಂತೆ ಎಲ್ಲ ಮನವಿಗಳು ನಮ್ಮ ಗಮನದಲ್ಲಿದೆ.

ಕಾಂಗ್ರೆಸ್ಸಿಗರನ್ನು ಮಾತ್ರ ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಲಾಗುತ್ತಿದೆ : ಸಿಎಂ ಸಿದ್ದರಾಮಯ್ಯ

ವಿಧಾನಮಂಡಲದ ಅಧಿವೇಶನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಯಾವುದೇ ಅನುದಾನ ಘೋಷಣೆ ಮಾಡುವಂತಿಲ್ಲ . ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯವರು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದರು. ಒಂದು ಹಂತದಲ್ಲಿ ಈಡಿಗ ಸಮುದಾಯದಿಂದ ಆರು ಜನ ಸಂಸದರು ಇದ್ದರು. ಕಾಲಾನಂತರ ಸಮುದಾಯದ ಪ್ರಮುಖರಾದ ಜನಾರ್ಧನ ಪೂಜಾರಿ ಅವರನ್ನು ಸೋಲಿಸಲಾಯಿತು.

ಈಗಲಾದರೂ ಸಂಘಟಿತರಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ಗೆಲ್ಲಿಸಲು ಸಹಕಾರ ನೀಡಿ ಎಂದು ಸಮುದಾಯದವರಲ್ಲಿ ಮನವಿ ಮಾಡಿದರು. ತಮ್ಮ ರಾಜಕೀಯ ಜೀವನ ಆರಂಭಗೊಂಡಿದ್ದೇ ಎಸ್.ಬಂಗಾರಪ್ಪ ಅವರ ಜೊತೆಯಲ್ಲಿ ಎಂದು ಆಗಿನ ಬೆಳವಣಿಗೆಗಳನ್ನು ಸ್ಮರಿಸಿಕೊಂಡರು.

RELATED ARTICLES

Latest News