ಬಸವನಗುಡಿಯಲ್ಲಿ ಕಡಲೆಕಾಯಿ ಪರೀಷೆಗೆ ನಾಳೆ ಸಿಎಂ ಚಾಲನೆ

Social Share

ಬೆಂಗಳೂರು,ನ.19- ಇತಿಹಾಸ ಪ್ರಸಿದ್ದ ಬಸವನಗುಡಿಯಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಕಡಲೆಕಾಯಿ ಪರೀಷೆಗೆ ನಡೆಯುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರೀಷೆಗೆ ಚಾಲನೆ ನೀಡಲಿದ್ದಾರೆ.

ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಕಡಲೆಕಾಯಿ ಪರೀಷೆಗೆ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಈ ಬಾರಿ ರಾಜ್ಯ ಮತ್ತು ಹೊರರಾಜ್ಯದಿಂದಲೂ ಅಪಾರ ಪ್ರಮಾಣದಲ್ಲಿ ವ್ಯಾಪಾರಿಗಳು ಆಗಮಿಸಿದ್ದಾರೆ.

ಬೆಂಗಳೂರು ಸುತ್ತಮುತ್ತಲ ಪ್ರದೇಶಗಳು ಸೇರಿ ಚಿಂತಾಮಣಿ, ಕೋಲಾರ, ಮಾಲೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಾಗಡಿ, ಹೊಸಕೋಟೆ ಮಾತ್ರವಲ್ಲದೆ ನಡೆಯ ತಮಿಳುನಾಡು, ಆಂಧ್ರಪ್ರದೇಶಗಳಿಂದ ರೈತರು ಹಾಗೂ ವ್ಯಾಪಾರಿಗಳು ಕಡಲೆಕಾಯಿ ಮೂಟೆಗಳೊಂದಿಗೆ ಈಗಾಗಲೇ ಬಿಡಾರ ಹೂಡಿದ್ದಾರೆ.

ಮಕ್ಕಳಾಗಲಿಲ್ಲವೆಂದು ರುಬ್ಬುಕಲ್ಲಿನಿಂದ ಜಜ್ಜಿ ಮಹಿಳೆಯ ಕೊಲೆ

ನಾನಾ ತಳಿಯ ರಾಶಿ ರಾಶಿ ಕಡಲೆಕಾಯಿ ಗ್ರಾಹಕರನ್ನು ಸೆಳೆಯುತ್ತಿವೆ. ನಾನಾ ತಳಿಯ ಹಾಗೂ ನಾನಾ ಗಾತ್ರದ ಹಸಿ, ಹುರಿದ, ಬೇಯಿಸಿದ ಅರೆಬೆಂದ ಕಡಲೆಕಾಯಿಗಳು ಮಾರಾಟವಾಗುತ್ತಿವೆ. ಒಂದು ಬೀಜದ, ಎರಡು ಬೀಜದ, 4-5 ಬೀಜದ ತರಹೇವಾರಿ ಕಡಲೆಕಾಯಿಗಳು ಲೀಗ 40-70 ರೂ.ವರೆಗೂ ಮಾರಾಟಗೊಳ್ಳುತ್ತಿವೆ.

ವಿಶೇಷ ಅಲಂಕಾರ:
ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷ ನಡೆಯುತ್ತದೆ. ಈ ಬಾರಿ 21ರಂದು ಬೆಳಗ್ಗೆ ದೊಡ್ಡಬಸವಣ್ಣನಿಗೆ ಹಾಗೂ ದೊಡ್ಡಗಣಪತಿ ದೇವರಿಗೆ ಕಡಲೆಕಾಯಿಯಿಂದ ಅಭಿಷೇಕ ಮಾಡಲಾಗುವುದು, ಬೆಣ್ಣೆ ಹಾಗೂ ಕಡಲೆಕಾಯಿ ಬೀಜದ ಅಲಂಕಾರ ಮಾಡಲಾಗುತ್ತಿದೆ.

ಇಬ್ಬರು ಮಕ್ಕಳೊಂದಿಗೆ ಜಲಾಶಯಕ್ಕೆ ಹಾರಿ ಮಹಿಳೆ ಆತ್ಮಹತ್ಯೆ

ಮೇಲಿನ ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ಅಭಿಷೇಕ ಹಾಗೂ ವಿಶೇಷ ಅಲಂಕಾರ ಮತ್ತು ಪೂಜೆ ಮಾಡಲಾಗುತ್ತದೆ. ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮಾಡುವ ಮೂಲಕ ಪರಿಷೆಗೆ ಚಾಲನೆ ದೊರೆಯುತ್ತದೆ. ಪರಿಷೆಗೆ ಬರುವ ಭಕ್ತರಿಗೆ ಕಡಲೆಕಾಯಿಯನ್ನೇ ಪ್ರಸಾದವನ್ನಾಗಿ ನೀಡಲಾಗುವುದು ಎಂದು ಇಲ್ಲಿನ ಅರ್ಚಕರು ತಿಳಿಸಿದ್ದಾರೆ.

ಮತದಾರರ ಪಟ್ಟಿ ಗೋಲ್‍ಮಾಲ್ : ಬಿಜೆಪಿ ಹೈ ಕಮಾಂಡ್ ಆಕ್ರೋಶ

ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಮಣ್ಯ, ಉದಯ ಗರುಡಾಚಾರ್ ಮೊದಲಾದವರು ಭಾಗವಹಿಸಲಿದ್ದಾರೆ.

basavanagudi, kadalekai, parishe ,

Articles You Might Like

Share This Article