ನಿತ್ಯ ನೀತಿ : ಸ್ವಾದೀನವಿಲ್ಲದ ಮನ-ಬುದ್ಧಿ-ಚಿತ್ತಗಳು ಇನ್ನೊಬ್ಬರ ಹಂಗಿನ ದಾಸ್ಯದಲ್ಲಿರುತ್ತವೆ. ಸ್ವಾದೀನವಿರುವ ಮನ-ಬುದ್ಧಿಗಳು ಆತ್ಮ ಕಲ್ಯಾಣವನ್ನು ಬಯಸುತ್ತವೆ.
ಪಂಚಾಂಗ ಶನಿವಾರ 14-10-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಅಮಾವಾಸ್ಯೆ / ನಕ್ಷತ್ರ: ಹಸ್ತ / ಯೋಗ: ಐಂದ್ರ / ಕರಣ: ಚತುಷ್ಪಾದ
ಸೂರ್ಯೋದಯ : ಬೆ.06.10
ಸೂರ್ಯಾಸ್ತ : 06.02
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30
ರಾಶಿ ಭವಿಷ್ಯ
ಮೇಷ: ಸಾಮಾಜಿಕ ಕಾರ್ಯಕರ್ತರಿಗೆ ಇರಿಸು-ಮುರಿಸು ಉಂಟಾಗಲಿದೆ.
ವೃಷಭ: ಸಮಾಧಾನದಿಂದ ಕಾರ್ಯನಿರ್ವಹಿಸಿದಲ್ಲಿ ಕೆಲಸ-ಕಾರ್ಯಗಳಲ್ಲಿ ಜಯ ಕಟ್ಟಿಟ್ಟ ಬುತ್ತಿ.
ಮಿಥುನ: ಕೆಲವು ದಿನಗಳಿಂದ ಮುಂದೂಡಿದ್ದ ವಿದೇಶ ಪ್ರಯಾಣವನ್ನು ಮತ್ತೆ ಕೈಗೊಳ್ಳುವ ಬಗ್ಗೆ ಯೋಚಿಸಿ.
ಕಟಕ: ಅನಗತ್ಯ ವಸ್ತುಗಳಿಗೆ ಹಣಕಾಸಿನ ಹರಿವು ಹೆಚ್ಚಾಗಲಿದೆ.
ಸಿಂಹ: ಲಾಭ-ನಷ್ಟ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕಾಗುತ್ತದೆ.
ಕನ್ಯಾ: ನಿಮ್ಮ ಪ್ರಾಮಾಣಿಕತೆ ಯನ್ನು ಕೆಲವರು ದುರುಪ ಯೋಗಪಡಿಸಿಕೊಳ್ಳುವರು.
ತುಲಾ: ಸಂಘ-ಸಂಸ್ಥೆಗಳಲ್ಲಿ ನಿಮ್ಮ ಪ್ರಾಮುಖ್ಯತೆ, ಜವಾಬ್ದಾರಿ ಹೆಚ್ಚಾಗಲಿದೆ. ನಿಷ್ಠೆಯಿಂದ ಕೆಲಸ ಮಾಡಿ.
ವೃಶ್ಚಿಕ: ವ್ಯಾಪಾರ-ವ್ಯವಹಾರದಲ್ಲಿ ಲಾಭವಾಗ ಲಿದೆ. ಉತ್ತಮ ಫಲಿತಾಂಶ ಸಿಗುವುದು.
ಧನುಸ್ಸು: ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಸಂತಸದಿಂದ ಕೆಲಕಾಲ ಕಳೆಯುವಿರಿ.
ಮಕರ: ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ ಸಾಧಿಸುವಿರಿ. ಕೃಷಿ ಕ್ಷೇತ್ರದಲ್ಲಿ ಲಾಭ ಸಿಗಲಿದೆ.
ಕುಂಭ: ಸಕಾರಾತ್ಮಕ ಚಿಂತನೆಗಳಲ್ಲಿ ತೊಡಗಿಸಿ ಕೊಂಡರೆ ಉತ್ತಮ ಫಲಿತಾಂಶ ಲಭ್ಯ.
ಮೀನ: ಅದೃಷ್ಟ ನಿಮ್ಮೆಡೆಗಿದ್ದರೂ ಎಲ್ಲ ಕಾರ್ಯಗಳನ್ನೂ ಎಚ್ಚರಿಕೆಯಿಂದ ನಿರ್ವಹಿಸಿ.