Saturday, July 27, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-01-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-01-2024)

ನಿತ್ಯ ನೀತಿ : ನೋವು ಇದ್ದಿದ್ದೇ, ಮರುಗುತ್ತ ಕುಳಿತರೆ ನೋವು ಹೋಗುವುದೇ? ಈಜಬೇಕು ಇದ್ದು ಜಯಿಸಬೇಕು. ಮನೆಗೆ ಬಂದ ನೆಂಟ ಎಷ್ಟು ದಿನ ಇರಬಲ್ಲ…

ಪಂಚಾಂಗ ಶನಿವಾರ 20-01-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ದಶಮಿ / ನಕ್ಷತ್ರ: ಕೃತ್ತಿಕಾ / ಯೋಗ: ಶುಭ / ಕರಣ: ತೈತಿಲ

ಸೂರ್ಯೋದಯ : ಬೆ.06.45
ಸೂರ್ಯಾಸ್ತ : 06.15
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ :6.00-7.30

ರಾಶಿ ಭವಿಷ್ಯ
ಮೇಷ
: ಸ್ವಯಂಕೃತ ಅಪರಾಧಗಳಿಂದ ತೊಂದರೆ ಯಲ್ಲಿ ಸಿಲುಕುವಿರಿ. ಆಸ್ತಿ ವಿಚಾರದಲ್ಲಿ ಕಿರಿಕಿರಿ.
ವೃಷಭ: ಬೇರೊಬ್ಬರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸುವುದು ಒಳಿತು.
ಮಿಥುನ: ಯಾರದೋ ಮೇಲಿನ ಸವಾಲಿಗೆ ಹೆಚ್ಚು ಸಾಲ ಮಾಡಿದರೆ ತೀರಿಸಲು ಕಷ್ಟವಾಗಲಿದೆ.

ಕಟಕ: ತಂದೆಯವರ ಕಠಿಣ ನಡವಳಿಕೆ ನಿಮಗೆ ಸಿಟ್ಟು ಬರಿಸುತ್ತದೆ. ಶಾಂತವಾಗಿರುವುದು ಒಳಿತು.
ಸಿಂಹ: ನಿಮ್ಮ ಜನಪ್ರಿಯತೆ ಉತ್ತುಂಗದಲ್ಲಿರುತ್ತದೆ ಮತ್ತು ಇತರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವಿರಿ.
ಕನ್ಯಾ: ಸಾಧ್ಯವಾದಷ್ಟೂ ರಾತ್ರಿ ಪ್ರಯಾಣ ಮಾಡ ಬೇಡಿ.

ತುಲಾ: ಕುಟುಂಬದ ಹಿರಿಯರಿಗೆ ಪ್ರಾಮುಖ್ಯತೆ ನೀಡಿ. ಹೊಸ ವ್ಯವಹಾರ ಪ್ರಾರಂಭಿಸಿಲು ಉತ್ತಮ ದಿನ.
ವೃಶ್ಚಿಕ: ವ್ಯವಹಾರದಲ್ಲಿ ಹಿತ ಶತ್ರುಗಳಿಂದ ತೊಂದರೆ. ಅವಿವಾಹಿತರಿಗೆ ವಿವಾಹ ನಿಶ್ಚಯ.
ಧನುಸ್ಸು: ಕೌಟುಂಬಿಕ ಮತ್ತು ವೈವಾಹಿಕ ಜೀವನ ಬಹಳ ಆಹ್ಲಾದಕರವಾಗಿರುತ್ತದೆ.

ಮಕರ: ಯಾರ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸಲು ಹೋಗದಿರಿ. ಕಷ್ಟ ಎದುರಿಸಬೇಕಾಗುತ್ತದೆ.
ಕುಂಭ: ಕೆಟ್ಟ ಆಲೋಚನೆ ಮಾಡುವುದನ್ನು ತಪ್ಪಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಮೀನ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ದೂರ ಪ್ರಯಾಣ ಮಾಡುವಿರಿ.

RELATED ARTICLES

Latest News